ಆಂಧ್ರಪ್ರದೇಶ:ವಿಜಯವಾಡದಿಂದ ಚೆನ್ನೈಗೆ ಕಚ್ಚಾ ತೈಲ ಸಾಗಾಟ ಮಾಡುತ್ತಿದ್ದ ರೈಲು ಹಳಿ ತಪ್ಪಿದ ಪರಿಣಾಮ ಪ್ರಕಾಶಂ ಜಿಲ್ಲೆಯ ತಂಗುತೂರು ಮಂಡಲದ ಸುರರೆಡ್ಡಿಪಾಲೆಂನಲ್ಲಿ ಸಂಭವಿಸಿದ ರೈಲ್ವೆ ಅನಾಹುತದಲ್ಲಿ ಭಾರೀ ನಷ್ಟ ಜರುಗಿದೆ.
ತಂಗುತೂರು ಮಂಡಲ ಮತ್ತು ಸುರರೆಡ್ಡಿಪಾಲೆಂ ನಡುವೆ 3ನೇ ರೈಲ್ವೆ ಮಾರ್ಗದ ಹಳಿ ನಿರ್ಮಾಣವಾಗುತ್ತಿದೆ. ಅಲ್ಲಿ, ಮಣ್ಣಿನ ನೆಲಸಮಗೊಳಿಸುವಿಕೆ ಕಾರ್ಯ ನಡೆಯುತ್ತಿದೆ. ಈ ಪ್ರದೇಶದಲ್ಲಿ ರೈಲು ಹಳಿ ತಪ್ಪಿದ ಕಾರಣ, ತೈಲವಿರುವ ಮೂರು ಬೋಗಿಗಳಿಗೆ ಬೆಂಕಿ ಕಾಣಿಸಿಕೊಂಡಿದೆ.
ಅಪಘಾತ ಸಂಭವಿಸಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಸುಮಾರು ನಾಲ್ಕು ಸಾವಿರ ಕಾಂಕ್ರೀಟ್ ಸ್ಲೀಪರ್‌ಗಳು ನಾಶವಾಗಿವೆ. ರೈಲ್ವೆ ವಿದ್ಯುತ್ ಮಾರ್ಗ ಮತ್ತು ಕಂಬಗಳು ಕುಸಿದು ಬಿದ್ದಿವೆ. ಹಳಿಗಳು ನಾಶಗೊಂಡಿವೆ. ಇದರಿಂದಾಗಿ ರೈಲ್ವೆ ಇಲಾಖೆಯು ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ರೈಲ್ವೆ ಮಾರ್ಗ ಪುನಃಸ್ಥಾಪನೆ ಕಾರ್ಯ ವೇಗವಾಗಿ ನಡೆಯುತ್ತಿದೆ. ರೈಲು ಹಳಿಗಳು ಮತ್ತು ಕಾಂಕ್ರೀಟ್ ಸ್ಲೀಪರ್‌ಗಳನ್ನು ರೈಲಿಗೆ ತಂದು ದುರಸ್ತಿ ಮಾಡಲಾಯಿತು. ಈಗ ಎರಡೂ ಕಡೆ ಸಂಚಾರ ಸ್ಥಗಿತಗೊಂಡಿದೆ.