ಕರ್ನಾಟಕ

karnataka

ETV Bharat / bharat

ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಇಂಟರ್ನೆಟ್ ಸಂಪರ್ಕ ಹುಡುಕಿ 6 ಕಿ.ಮೀ ಚಲಿಸುವ ವಿದ್ಯಾರ್ಥಿನಿಯರು - Idukki in Kerala

ವಿದ್ಯಾರ್ಥಿನಿಯರು ಬೆಳಗ್ಗೆ ಬೇಗನೆ ತಮ್ಮ ಮನೆಗಳಿಂದ ತಮ್ಮ ಪುಸ್ತಕಗಳು, ಲ್ಯಾಪ್‌ಟಾಪ್‌ಗಳು ಮತ್ತು ತಿನ್ನಲು ಆಹಾರ ಹೊತ್ತುಕೊಂಡು ನಡೆಯಲಾರಂಭಿಸುತ್ತಾರೆ. ಸುಮಾರು 6 ಕಿಲೋಮೀಟರ್ ನಡೆದು ರಸ್ತೆಯ ಪಕ್ಕದಲ್ಲಿ ಕುಳಿತು ಮಳೆ, ಚಳಿ, ಗಾಳಿಯನ್ನೂ ಲೆಕ್ಕಿಸದೆ ಕುಳಿತು ಆನ್‌ಲೈನ್ ತರಗತಿಗಳನ್ನು ಕೇಳುತ್ತಾರೆ..

Girls walk 6 km from home in search of internet connectivity to attend online classes every day
ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಇಂಟರ್ನೆಟ್ ಸಂಪರ್ಕವನ್ನು ಹುಡುಕಿಕೊಂಡು 6 ಕಿ.ಮೀ. ಚಲಿಸುವ ವಿದ್ಯಾರ್ಥಿನಿಯರು

By

Published : Dec 6, 2020, 8:34 AM IST

ಇಡುಕ್ಕಿ(ಕೇರಳ) :ಬಾಲ್ಯದಲ್ಲಿ ಬೀದಿ ದೀಪಗಳ ಅಡಿಯಲ್ಲಿ ಅಧ್ಯಯನ ಮಾಡಿದ ಅನೇಕ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ನಾವು ಕಲಿತಿದ್ದೇವೆ. ಆದೇ ರೀತಿ ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಲದಿಂದ ಓದುವ ಆಸಕ್ತಿ ಇರುವ ವಿದ್ಯಾರ್ಥಿನಿಯರ ಗುಂಪೊಂದು ನೆಟ್​ವರ್ಕ್​ ಹುಡುಕಿಕೊಂಡು ಮನೆಯಿಂದ ಕಿಲೋಮೀಟರ್​ ಗಟ್ಟಲೇ ದೂರ ತೆರಳುವುದು ಸಾಮಾನ್ಯವಾಗಿದೆ.

ವಿದ್ಯಾರ್ಥಿನಿಯರು ಆನ್​ಲೈನ್​ ಕ್ಲಾಸ್​ ಕೇಳುವ ಸಲುವಾಗಿ ದುಬಾರಿಯಾದರೂ ಸರಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಹೊಂದಿಸಿಕೊಂಡಿದ್ದಾರೆ. ಜೊತೆಗೆ ವಿದ್ಯುತ್ ಸಂಪರ್ಕವೂ ಚೆನ್ನಾಗಿಯೇ ಇದೆ. ಆದರೆ, ಆ ಊರಿನಲ್ಲಿ ಅಂತರ್ಜಾಲದ ಸಮಸ್ಯೆ ಇರುವುದರಿಂದ ಕಿಲೋಮೀಟರ್‌ಗಟ್ಟಲೇ ಸಾಗಿ ರಸ್ತೆ ಬದಿಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ವಿದ್ಯಾರ್ಥಿನಿಯರು ಬೆಳಗ್ಗೆ ಬೇಗನೆ ತಮ್ಮ ಮನೆಗಳಿಂದ ತಮ್ಮ ಪುಸ್ತಕಗಳು, ಲ್ಯಾಪ್‌ಟಾಪ್‌ಗಳು ಮತ್ತು ತಿನ್ನಲು ಆಹಾರ ಹೊತ್ತುಕೊಂಡು ನಡೆಯಲಾರಂಭಿಸುತ್ತಾರೆ. ಸುಮಾರು 6 ಕಿಲೋಮೀಟರ್ ನಡೆದು ರಸ್ತೆಯ ಪಕ್ಕದಲ್ಲಿ ಕುಳಿತು ಮಳೆ, ಚಳಿ, ಗಾಳಿಯನ್ನೂ ಲೆಕ್ಕಿಸದೆ ಕುಳಿತು ಆನ್‌ಲೈನ್ ತರಗತಿಗಳನ್ನು ಕೇಳುತ್ತಾರೆ.

ಇನ್ನೊಂದೆಡೆ ಇಂಟರ್ನೆಟ್ ಸಮಸ್ಯೆಯಿಂದಾಗಿ ಆನ್‌ಲೈನ್ ತರಗತಿಗಳನ್ನು ಸರಿಯಾಗಿ ಬಳಸಿಕೊಳ್ಳಲಾಗದ ಹಿನ್ನೆಲೆ ಅನೇಕ ವಿದ್ಯಾರ್ಥಿಗಳು ಈ ವರ್ಷ ಅಧ್ಯಯನವನ್ನು ಕೈಬಿಟ್ಟಿದ್ದಾರೆ. ಖಾಸಗಿ ಅಂತರ್ಜಾಲ ಸೇವಾ ಪೂರೈಕೆದಾರರು ಅಥವಾ ಇತರರ ಮೂಲಕ ರಾಜಮಲದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಸರ್ಕಾರ ಮಧ್ಯಪ್ರವೇಶಿಸಿದರೆ ಹೆಚ್ಚಿನ ಲಾಭವಾಗುತ್ತದೆ.

ABOUT THE AUTHOR

...view details