ಕರ್ನಾಟಕ

karnataka

ETV Bharat / bharat

ಮತದಾನದ ಮೇಲೆ ಆಯೋಗದ ಹದ್ದಿನ ಕಣ್ಣು... ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್​​​ ಕಣ್ಗಾವಲು!

By

Published : Apr 11, 2019, 7:33 AM IST

Updated : Apr 11, 2019, 11:56 AM IST

ಲೋಕಸಭಾ ಸಮರ

2019-04-11 11:42:31

ವೋಟಿಂಗ್​​ ಲಿಸ್ಟ್​ನಿಂದ ಅಪೋಲ್​ ಸಂಸ್ಥೆ ಉಪಾಧ್ಯಕ್ಷೆ ಹೆಸರು ಡಿಲಿಟ್​!

ಅಪೋಲ್​ ಸಂಸ್ಥೆ ಉಪಾಧ್ಯಕ್ಷೆ

ನವದೆಹಲಿ: ದೇಶದ 91 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಆರಂಭವಾಗಿದ್ದು ಮತದಾರರು ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಬರೋಬ್ಬರಿ 1279 ಅಭ್ಯರ್ಥಿಗಳು ತಮ್ಮ ಅದೃಷ್ಠ ಪರೀಕ್ಷೆಗೆ ಒಳಗಾಗಲಿದ್ದಾರೆ.

ದೇಶದ 543 ಕ್ಷೇತ್ರಗಳ ಪೈಕಿ 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 20 ರಾಜ್ಯಗಳಲ್ಲಿ ಈ ಮತದಾನ ನಡೆಯಲಿದೆ. ಬಹುತೇಕ ಕಡೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವೋಟಿಂಗ್​ ನಡೆಯಲಿದೆ. ನಕ್ಸಲ್​ ಪೀಡಿತ ರಾಜ್ಯಗಳಲ್ಲಿ ಮತದಾನ ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆವರೆಗೆ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.

  • ವೋಟಿಂಗ್​​ ಲಿಸ್ಟ್​ನಿಂದ ಅಪೋಲ್​ ಸಂಸ್ಥೆ ಉಪಾಧ್ಯಕ್ಷೆ ಶೋಭನಾ ಕಾಮಿನೇನಿ ಹೆಸರು ಡಿಲಿಟ್​ 
  • ಅಮೆರಿಕದಿಂದ ಮತ ಚಲಾವಣೆಗಾಗಿ ಹೈದರಾಬಾದ್​ಗೆ ಆಗಮಿಸಿದ್ದ ಕಾಮಿನೇನಿ

2019-04-11 11:28:34

ತೆಲಂಗಾಣ ಸಿಎಂ ಚಂದ್ರಶೇಖರ್​ ರಾವ್​ ಅವರಿಂದ ಹಕ್ಕು ಚಲಾವಣೆ

  • ತೆಲಂಗಾಣ ಸಿಎಂ ಚಂದ್ರಶೇಖರ್​ ರಾವ್​ ಅವರಿಂದ ಹಕ್ಕು ಚಲಾವಣೆ 
  • ಸಿದ್ದಿಪೇಟೆ ಚಿಂತಮಡಕ ಗ್ರಾಮದಲ್ಲಿ ಮತ ಹಾಕಿದ ಸಿಎಂ

2019-04-11 11:25:21

ಭೆಜಿಪದಾರ್​​ ಗ್ರಾಮದ ಮತದಾರರಿಂದ ಮತದಾನ ಬಹಿಷ್ಕಾರ!

  • 666 ವೋಟರ್ಸ್​  ಇರುವ ಭೆಜಿಪದಾರ್​​ ಗ್ರಾಮದ ಮತದಾರರಿಂದ ಮತದಾನ ಬಹಿಷ್ಕಾರ
  • ಒಡಿಶಾದ ಭವಾನಿ ಪಟ್ನಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮ 
  • ಅಮೇಥಿ ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ಇಂದು ಸ್ಮೃತಿ ಇರಾನಿ ನಾಮಿನೇಷನ್​ 
  • ನಾಮಪತ್ರ ಸಲ್ಲಿಕೆಗೂ ಮುನ್ನ ಜುಬಿನ್​ ಇರಾನಿಯಿಂದ ವಿಶೇಷ ಪೂಜೆ
  • ಭಗಲ್​ಪುರದಲ್ಲಿ ಇಂದು ಮೋದಿ ಸಾರ್ವಜನಿಕ ಭಾಷಣ

2019-04-11 10:59:41

ಮೊದಲ ಹಂತದಲ್ಲಿ ಪ್ರಮುಖ 10 ಮುಖಗಳು

  • ನಿತಿನ್​ ಗಡ್ಕರಿ: ಕೇಂದ್ರ ಭೂ ಸಾರಿಗೆ ಹೆದ್ದಾರಿ ಸಚಿವ, ನಾಗ್ಪುರದಿಂದ ಸ್ಪರ್ಧೆ 
  • ಕಿರಣ್​ ರಿಜ್ಜು:  ಕೇಂದ್ರ ರಾಜ್ಯಖಾತೆ ಸಚಿವ, ಅರುಣಾಚಲಪ್ರದೇಶ ವೆಸ್ಟ್​​ ನಿಂದ ಕಣಕ್ಕೆ
  • ವಿಕೆ ಸಿಂಗ್​: ವಿದೇಶಾಂಗ ಖಾತೆ ರಾಜ್ಯ ಸಚಿವ,  ಘಾಜಿಯಾಬಾದ್​ನಿಂದ ಅಖಾಡಕ್ಕೆ  
  • ಅಸಾದುದ್ದೀನ್​ ಓವೈಸಿ: ಎಐಎಂಐಎಂ  ಮುಖ್ಯಸ್ಥ,  ಹೈದರಾಬಾದ್​ ಕ್ಷೇತ್ರದಿಂದ ಸ್ಪರ್ಧೆ
  • ರೇಣುಕಾ ಚೌದರಿ:   ಕಾಂಗ್ರೆಸ್​ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವೆ  ಕಮ್ಮಮ್ಮ ಕ್ಷೇತ್ರದಿಂದ ಸ್ಪರ್ಧೆ
  • ಮಹೇಶ್​ ಶರ್ಮಾ:  ಕೇಂದ್ರ ಸಂಸ್ಕೃತಿ ಖಾತೆ ಸಚಿವ,  ಗೌತಮ್​ ಬುದ್ಧ ನಗರದ ಬಿಜೆಪಿ ಅಭ್ಯರ್ಥಿ 
  • ಚಿರಾಗ್​ ಪಾಸ್ವಾನ್​:   ಲೋಕಜನ ಶಕ್ತಿ ಅಭ್ಯರ್ಥಿ,   ಬಿಹಾರದ ಜುಮೈ ಕ್ಷೇತ್ರದಿಂದ ಕಣಕ್ಕೆ 
  • ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್​ ಪುತ್ರ 
  • ಅಜಿತ್​ ಸಿಂಗ್​:  ರಾಷ್ಟ್ರೀಯ ಲೋಕದಳದ ಅಭ್ಯರ್ಥಿ, ಮುಜಾಫರ್​​ನಗರದಿಂದ ಅಖಾಡಕ್ಕಿಳಿದಿದ್ದಾರೆ

2019-04-11 10:57:42

ಮೊದಲ ಬಾರಿಗೆ ಮತಕೇಂದ್ರಗಳಲ್ಲಿ ಡ್ರೋನ್​ ಬಳಿಕೆ!

  • ಇದೇ ಮೊದಲ ಬಾರಿಗೆ ಡ್ರೋನ್​ ಬಳಕೆ  
  • ನಕ್ಸಲ್​ ಪೀಡಿತ ರಾಜ್ಯಗಳ ಮೇಲೆ ಡ್ರೋನ್​ ಕಣ್ಗಾವಲು 
  • 13 ಡ್ರೋನ್​ ಬಳಸಿ ಮತದಾನ ಪ್ರಕ್ರಿಯೆ ವೀಕ್ಷಣೆ

2019-04-11 10:31:09

ನಿತಿನ್​ ಗಡ್ಕರಿ ಹಾಗೂ ಕುಟುಂಬದಿಂದ ಮತದಾನ

  • ನಾಗ್ಪುರದಲ್ಲಿ ನಿತಿನ್​ ಗಡ್ಕರಿ ಹಾಗೂ ಕುಟುಂಬದಿಂದ ಮತದಾನ 
  • ನಾಗ್ಪುರದ ಮತದಾನ ಕೇಂದ್ರದಲ್ಲಿ ಮತ ಹಾಕಿದ ಗಡ್ಕರಿ ಕುಟುಂಬ
  • ಅಂಡಮಾನ್​ ನಿಕೋಬಾರ್​ನಲ್ಲಿ ಇದುವರೆಗೆ ಶೇ 10 ರಷ್ಟು ಮತದಾನ 

2019-04-11 10:19:08

ಲೋಕ ಸಮರ... ಚಿರಂಜೀವಿ ಕುಟುಂಬದಿಂದ ಮತದಾನ

  • ನಟ ಚಿರಂಜೀವಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಹಾಕಿದರು 
  • ಹೈದರಾಬಾದ್​ನ ಜುಬ್ಲಿ ಹಿಲ್ಸ್​​ನ ಮತಕೇಂದ್ರದಲ್ಲಿ ಹಕ್ಕು ಚಲಾವಣೆ
  •  ಜ್ಯೂನಿಯರ್​ ಎನ್​ಟಿಆರ್​ ಅವರಿಂದಲೂ ವೋಟಿಂಗ್​
  • ಅಸಾದುದ್ದೀನ್​ ಓವೈಸಿಯಿಂದ ಹೈದರಾಬಾದ್​ನಲ್ಲಿ ವೋಟಿಂಗ್​ 
  • ಜನಸೇನಾ ನಾಯಕ ಪವನ್ ಕಲ್ಯಾಣರಿಂದ ಹಕ್ಕು ಚಲಾವಣೆ 
  • ವಿಜಯವಾಡದ ಸಿದ್ಧಾರ್ಥ ನಗರದಲ್ಲಿ ಹಕ್ಕು ಚಲಾವಣೆ

2019-04-11 10:08:56

ಮೊದಲ ಹಂತದಲ್ಲಿ ಟಾಲಿವುಡ್​ ನಟ-ನಟಿಯರಿಂದ ಹಕ್ಕು ಚಲಾವಣೆ

  • ಜನಸೇನಾ ನಾಯಕ ಪವನ್ ಕಲ್ಯಾಣರಿಂದ ಹಕ್ಕು ಚಲಾವಣೆ 
  • ವಿಜಯವಾಡದ ಸಿದ್ಧಾರ್ಥ ನಗರದಲ್ಲಿ ಹಕ್ಕು ಚಲಾವಣೆ 
  • ಆಂಧ್ರದ ಗುರುಜಾಲ ಕ್ಷೇತ್ರದ ಶ್ರಿನಿವಾಸಪುರಂ ಮತಕೇಂದ್ರದಲ್ಲಿ ಇವಿಎಂ ನಾಶ 
  • ಟಿಡಿಪಿ ಕಾರ್ಯಕರ್ತನಿಂದ ಇವಿಎಂ ಯಂತ್ರ ನಾಶ
  • ಮತಯಂತ್ರ ಒಡೆದು ಹಾಕಿದ್ದರಿಂದ ಮತದಾನ ಸ್ಥಗಿತ
  • ಆಂಧ್ರಪ್ರದೇಶದಲ್ಲಿ ಸುಮಾರು 72 ಇವಿಎಂಗಳಲ್ಲಿ ದೋಷ
  • ಆಂಧ್ರ ಮುಖ್ಯ ಚುನಾವಣಾಧಿಕಾರಿಯಿಂದ ಘೋಷಣೆ 
  • ಟಾಲಿವುಡ್​ ನಟ ಮೋಹನ್​ ಬಾಬು ಹಾಗೂ ಅವರ ಪುತ್ರನಿಂದ  ಹಕ್ಕು ಚಲಾವಣೆ 

2019-04-11 09:58:50

ಕವಿತಾ ವಿರುದ್ಧ 180ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಂದ ತೀವ್ರ ಪೈಪೋಟಿ!

    • ರಾಜ್ಯಗಳ ಟಿಆರ್​ಎಸ್​ ಅಭ್ಯರ್ಥಿ ಕವಿತಾ ರಾವ್ ಅವರಿಂದ ಮತದಾನ
    • ಕವಿತಾ ವಿರುದ್ಧ 180ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆ 
    • ರೈತರಿಂದ ಭಾರಿ ಪ್ರತಿಸ್ಪರ್ಧೆ
    • ನಕ್ಸಲರ  ಭೀತಿಯಿಂದ ಒಡಿಶಾದ 9 ಮತಕೇಂದ್ರಗಳತ್ತ ಸುಳಿಯದ ಮತದಾರ
    • ಮೇಘಾಲಯ, ನಾಗಾಲಾಂಡ್​ನಲ್ಲಿ ಅತಿ ಹೆಚ್ಚು ಮತದಾನ
    • 9ಗಂಟೆ ವೇಳೆಗೆ ಶೇ 21 ಹಾಗೂ ಶೇ 18 ರಷ್ಟು ಮತದಾನ
    • ವಿಜಯವಾಡ ವೆಸ್ಟ್​ನಲ್ಲಿ ಶೇ.26ರಷ್ಟು ಮತದಾನ
    • ಗಡಚಿರೋಲಿಯಲ್ಲಿ ಬಾಂಬ್​ ಸ್ಪೋಟ
    • ಸಿಆರ್​ಪಿಎಫ್​ ಯೋಧನಿಗೆ ಗಾಯ

    2019-04-11 09:22:57

    ಕಾಶ್ಮೀರದಲ್ಲಿ ನಿಧಾನಗತಿಯಲ್ಲಿ ಸಾಗಿದ ಮತದಾನ

    • ವಿರಳ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಬರುತ್ತಿರುವ ಮತದಾರರು
    • ಕಾಶ್ಮೀರದಲ್ಲಿ ನಿಧಾನಗತಿಯಲ್ಲಿ ಸಾಗಿದ ಮತದಾನ
    • ಕಾಶ್ಮೀರದ ಬಾರಾಮುಲ್ಲಾ,ಬಂಡಿಪೊರದಲ್ಲಿ ಸಾಗಿದ ಮತದಾನ
    • ಕಾಶ್ಮೀರದಲ್ಲಿ ಇಂಟರ್​​ನೆಟ್​ ಸಂಪೂರ್ಣ ಸ್ಥಗಿತ
    • ಸ್ಥಳವನ್ನು ಹಿಡಿತಕ್ಕೆ ತೆಗದುಕೊಂಡಿರುವ ಪೊಲೀಸರು
    • ಸ್ಥಳಕ್ಕೆ ದೌಡಾಯಿಸಿದ ಪೊಲೀಸರು
    • ಬಿಹಾರದ ಇಮಾಮ್​ಗಂಜ್​ನಲ್ಲಿ ಬಾಂಬ್​ ಶಂಕೆ
    • ನಾಗಾಲ್ಯಾಂಡ್​ನಲ್ಲಿ ಶೇ.21ರಷ್ಟು ಮತದಾನ(9 ಗಂಟೆವರೆಗೆ)

    2019-04-11 09:05:49

    ಲೋಕಸಮರ 2019

    • ಮರುಮತದಾನಕ್ಕೆ ಒತ್ತಾಯಿಸಿದ ಸಂಜೀವ್ ಬಲ್ಯಾನ್
    • ಮುಜಾಫರ್​ನಗರದ ಅಭ್ಯರ್ಥಿ ಡಾ.ಸಂಜೀವ್ ಬಲ್ಯಾನ್​ ಗಂಭೀರ ಆರೋಪ
    • ಬುರ್ಖಾ ಧರಿಸಿ ಕಳ್ಳ ವೋಟ್​ ಚಲಾವಣೆ ಆಗುತ್ತಿದೆ
    • ಆಂಧ್ರದಲ್ಲಿ ಜನಸೇನಾ ಪಕ್ಷದ ನಾಯಕನಿಂದ ಪುಂಡಾಟ
    • ಮಧುಸೂದನ್​ ಗುಪ್ತಾ ಅವರಿಂದ ಕೃತ್ಯ
    • ಕೆಲಸ ಮಾಡದ ಇವಿಎಂ ನೆಲಕ್ಕೆ ಕುಕ್ಕಿದ ನಾಯಕ
    • ಪೊಲೀಸರಿಂದ ಗುಪ್ತಾ ಬಂಧನ

    ಮೊದಲ ಹಂತದ ಮತದಾನದಂದು ಕಾಂಗ್ರೆಸ್​ ಟ್ವೀಟ್​

    • ಇಂದು ನೀವು ನಿರ್ಧಾರ ಮಾಡಿ
    • ದ್ವೇಷ ತಿರಸ್ಕರಿಸಿ ಪ್ರೀತಿ ಬೆಳೆಸಿಕೊಳ್ಳಿ
    • ಪಕೋಡಾ ಬದಲಾಗಿ ನೌಕರಿ
    • ಪ್ರಚಾರದ ಬದಲಾಗಿ ನೀತಿಗಳು
    • ವಿಭಜನೆ ಬದಲಾಗಿ ಒಂದು ದೇಶ
    • ಕಾಂಗ್ರೆಸ್​​ಗೆ ಮತಹಾಕಿ, ನಿಮಗಾಗಿ ಮತ ನೀಡಿ
    • ಇಂದು ಮತದಾನ ಕೇಂದ್ರಕ್ಕೆ ಬನ್ನಿ ಮತ ಹಾಕಿ
    • ನಿಜಾಮಾಬಾದ್​​ನಲ್ಲಿ ಹಕ್ಕು ಚಲಾಯಿಸಿದ ಕೆಸಿಆರ್​​ ಪುತ್ರಿ
    • ತೆಲಂಗಾಣ ಸಿಎಂ ಪುತ್ರಿ ಕೆ.ಕವಿತಾರಿಂದ ಮತ ಚಲಾವಣೆ

    2019-04-11 08:50:49

    • ನೌಶೇರಾ, ಸಾಂಬಾಗಳಲ್ಲಿ ಜನ ಸರತಿ ಸಾಲಿನಿಂತು ಹಕ್ಕು ಚಲಾವಣೆ
    • ಸಂಜೆ ಆರುಗಂಟೆವರೆಗೆ ನಡೆಯಲಿರುವ ಮತದಾನ
    • ಎರಡೂ ಕ್ಷೇತ್ರಗಳಲ್ಲಿ ಭಾರಿ ಬಿಗಿಭದ್ರತೆ
    • ಜಮ್ಮು- ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವೋಟಿಂಗ್​
    • ಜಮ್ಮು ಕಾಶ್ಮೀರದಲ್ಲಿ ಶಾಂತಿಯುತವಾಗಿ ಮುಂದುವರೆದಿರುವ ಮತದಾನ
    • ಪಶ್ಮಿಮ ಬಂಗಾಳದಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಂದ ಹಕ್ಕು ಚಲಾವಣೆ
    • ಕಾಶ್ಮೀರದ ಬಂಡಿಪೊರದಲ್ಲಿ ಮತದಾನದಕ್ಕೆ ಉತ್ತಮ ಪ್ರತಿಕ್ರಿಯೆ
    • ಎಲ್ಲರೂ ಮತದಾನದಲ್ಲಿ ಭಾಗವಹಿಸುವಂತೆ ಪ್ರಧಾನಿ ಕರೆ
    • ಟ್ವೀಟ್​ ಮೂಲಕ ಮನವಿ ಮಾಡಿದ ಮೋದಿ

    2019-04-11 08:31:52

    ಇಂದು ರಾಯಬರೇಲಿ ಕ್ಷೇತ್ರದಿಂದ ಸೋನಿಯಾ ನಾಮಪತ್ರ ಸಲ್ಲಿಕೆ

    ಸೋನಿಯಾ ಗಾಂಧಿ
    • 11:30ಕ್ಕೆ ಕಾಂಗ್ರೆಸ್​ ಕೇಂದ್ರ ಕಚೇರಿಗೆ ಆಗಮನ
    • 12ಕ್ಕೆ  ಹಾಥಿ ಪಾರ್ಕ್​ ಮೂಲಕ ರೋಡ್​ ಶೋ
    • 12:40ಕ್ಕೆ ನಾಮಪತ್ರ ಸಲ್ಲಿಕೆ
    • 13:10ಕ್ಕೆ  ಭುಯೇಮಾ ಗೆಸ್ಟ್​​ ಗೌಸ್​ಗೆ ವಾಪಸ್​

      2019-04-11 08:26:50

      ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಹಕ್ಕು ಚಲಾವಣೆ

      ಚಂದ್ರಬಾಬು ನಾಯ್ಡು
      • ಆ ಬಳಿಕ ಅಸ್ಸೋಂ ಸಿಲ್ಚರ್​​ನಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಭಾಷಣ

      • ಇಂದು ಬಿಹಾರದ ಭಗಲ್ಪುರದಲ್ಲಿ ಚುನಾವಣಾ  ರ‍್ಯಾಲಿ

      • ಮೊದಲ ಹಂತದ ಮತದಾನ ಹಿನ್ನೆಲೆ ಪ್ರಧಾನಿ ಮೋದಿ ಟ್ವೀಟ್​

      • ಯಾವುದೇ ಭಯ ಇಲ್ಲದೇ ಬದಲಾವಣೆಗೆ ಮತ ನೀಡಿ: ಜಗನ್​ ರೆಡ್ಡಿ

      • ಕಡಪದಲ್ಲಿ ಜಗನ್​ರಿಂದ ಬೆಳಗ್ಗೆಯೇ ಮತದಾನ

      • ಉತ್ತರಾಖಂಡ್​ ಸಚಿವ ಸತ್ಪಾಲ್​​​ ಮಹಾರಾಜ್​​ರಿಂದ ಮತದಾನ

      • ಪೌರಿ ಜಿಲ್ಲೆಯ  ಚೌಬತ್ತಕಲ್​​​​​ ಪ್ರದೇಶದಲ್ಲಿ ವೋಟಿಂಗ್​
      • ಬಿಹಾರದ 40 ಲೋಕಸಭೆ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಇಂದು ಮತದಾನ
      • ಅಸ್ಸೋಂ,  ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರಾದಲ್ಲಿ ಭರದಿಂದ ಸಾಗಿದ ಮತದಾನ
      • ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೂ ಮತದಾನ
      • ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಹಕ್ಕು ಚಲಾವಣೆ
      • ಕುಟುಂಬ ಸಮೇತರಾಗಿ ಮತದಾನ ಕೇಂದ್ರಕ್ಕೆ ತೆರಳಿ ವೋಟ್​
      • ಘಾಜಿಯಾಬಾದ್​​ನಲ್ಲಿ  ಕೆಲಸ ಮಾಡದ ಇವಿಎಂ ಮಷಿನ್​

      2019-04-11 07:22:15

      ಲೋಕಸಭಾ ಸಮರ 2019

      • ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ಉತ್ತರಾಖಂಡ ಸಿಎಂ ಹರೀಶ್ ರಾವತ್​​
      • ಲೋಕಸಭಾ ಚುನಾವಣೆಗೆ ಗೂಗಲ್​ನಿಂದ ವಿಶೇಷ ಡೂಡಲ್​​
      • ಭಾಗ್ಪತ್​ನಲ್ಲಿ ಮತದಾರರಿಗೆ ಪುಷ್ಪಮಳೆ ಸುರಿಸಿ ವಿಶೇಷ ಸ್ವಾಗತ
      • ಆಂಧ್ರ ಪ್ರದೇಶದ ಅಮರಾವತಿಯಲ್ಲಿ ಮತದಾನ ಆರಂಭ, ಉತ್ತಮ ಸ್ಪಂದನೆ
      • ಉತ್ತಮ ಸರ್ಕಾರಕ್ಕಾಗಿ ಲಕ್ಷದ್ವೀಪ, ಅಂಡಮಾನ್​ ಮತ್ತು ನಿಕೋಬಾರ್​ ಐಲ್ಯಾಂಡ್ಸ್​​  ಜನ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ
      • ಪ್ರಧಾನಿ ಬಣ್ಣನೆ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್​ ಶಾ
      • ಬಲಿಷ್ಠ ದೇಶ ಹಾಗೂ  ನಾಯಕತ್ವ ಕಾಶ್ಮೀರದಿಂದ  ಅಂಡಮಾನ್​ ವರೆಗೂ ಅಭಿವೃದ್ಧಿ  ದೃಷ್ಟಿಕೋನ ಇಟ್ಟುಕೊಂಡಿರುವ ನಾಯಕ ಅಂದರೆ ಅದು ಮೋದಿ
      • ಕಾಶ್ಮೀರದ ಪೂಂಚ್​ನಲ್ಲಿ ಬಿಗಿ ಭದ್ರತೆ ನಡುವೆ ಮತದಾನ ಆರಂಭ
      • ಪ್ರಪುಲ್​ ಪಟೇಲ್​ ವಿರುದ್ಧ 2014 ರಲ್ಲಿ ಸೋಲು ಅನುಭವಿಸಿದ್ದ ನಾನಾ
      • ಕಳೆದ ಬಾರಿ ಎನ್​​ಸಿಪಿ ಅಭ್ಯರ್ಥಿ ವಿರುದ್ಧ ಭಂಡಾರ- ಗೊಂಡಿಯಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ
      • ನಾನಾ ಪಾತೋಲೆ ಬಿಜೆಪಿಯ ಬಂಡಾಯ ಅಭ್ಯರ್ಥಿ
      • 22ಲಕ್ಷ ಮತದಾರರನ್ನು ಹೊಂದಿರುವ ನಾಗ್ಪುರ ಲೋಕಸಭಾ ಕ್ಷೇತ್ರ
      • ನಾಗ್ಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭೂ ಹೆದ್ದಾರಿ ಸಚಿವ  ನಿತಿನ್​ ಗಡ್ಕರಿ
      • 2014 ರಲ್ಲಿ 10ಲಕ್ಷ ಮತಗಳ ಪೈಕಿ 6 ಲಕ್ಷ ಮತ ಪಡೆದಿದ್ದ ಗಡ್ಕರಿ
      • ಎಲ್ಲರೂ ತಮ್ಮ ಮತ ಚಾಲಾಯಿಸಬೇಕು: ಮೋಹನ್ ಭಾಗವತ್​
      Last Updated : Apr 11, 2019, 11:56 AM IST

      ABOUT THE AUTHOR

      ...view details