ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ನಿವಾಸವೊಂದನ್ನ ರಾಮಕೃಷ್ಣ ಪರಮಹಂಸ ಮಿಷನ್ಗೆ ದೇಣಿಗೆ ನೀಡಿದ್ದಾರೆ. ನೋಯ್ಡಾದ ಸೆಕ್ಟರ್ 26ರಲ್ಲಿ ಇದ್ದ ಮನೆಯನ್ನ ಇದೀಗ ದಾನ ಮಾಡಿದ್ದಾರೆ.
ರಾಮಕೃಷ್ಣ ಮಿಷನ್ಗೆ ತಮ್ಮ ನಿವಾಸ ದೇಣಿಗೆ ನೀಡಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ! - ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಳಿದುಕೊಳ್ಳಲು ನೀಡಲಾಗಿದ್ದ ಮನೆವೊಂದನ್ನ ಅವರು ರಾಮಕೃಷ್ಣ ಪರಮಹಂಸ ಮಿಷನ್ಗೆ ದಾನ ಮಾಡಿದ್ದಾರೆ.
ನೋಯ್ಡಾದಲ್ಲಿ ವಾಸ ಮಾಡುವ ಉದ್ದೇಶದಿಂದ ಮುಖರ್ಜಿ ಅವರಿಗೆ ಅಲ್ಲಿನ ಪ್ರಾಧಿಕಾರ ಸೆಕ್ಟರ್ 26, ಸಿ-21ರಲ್ಲಿ ಫ್ಲ್ಯಾಟ್ ನೀಡಲಾಗಿತ್ತು. ಇಲ್ಲಿ ಅವರು ಶಾಶ್ವತವಾಗಿ ಉಳಿದಿಕೊಳ್ಳದಿದ್ದರೂ ಆಗಾಗ್ಗೆ ಭೇಟಿ ನೀಡುತ್ತಿದ್ದರು. 1986ರಲ್ಲಿ ಈ ಮನೆಯನ್ನ ರಾಮಕೃಷ್ಣ ವಿವೇಕಾನಂದ ಮಿಷನ್ಗೆ ದಾನ ಮಾಡಿದರು. ತದನಂತರ ಇಲ್ಲಿ ಆಶ್ರಮ ಪ್ರಾರಂಭ ಮಾಡಲಾಗಿದ್ದು, 25 ಬಾಲಕರು ಇಲ್ಲಿ ವಾಸಿಸುತ್ತಾರೆ. ಅವರೆಲ್ಲರೂ ಬಡವರು ಹಾಗೂ ಅನಾಥರು.
25 ಮಕ್ಕಳ ಶಿಕ್ಷಣ ಹಾಗೂ ಎಲ್ಲ ರೀತಿಯ ಸೌಲಭ್ಯವನ್ನ ಆಶ್ರಮದಿಂದ ನೀಡಲಾಗುತ್ತಿದೆ. ಪ್ರಣಬ್ ಮುಖರ್ಜಿ ಅವರ ಪತ್ನಿ ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ ಎಂದು ರಾಮಕೃಷ್ಣ ವಿವೇಕಾನಂದ ಮಿಷನ್ ಆಶ್ರಮದ ವ್ಯವಸ್ಥಾಪಕ ಪ್ರದೀಪ್ ತಿಳಿಸಿದ್ದಾರೆ. ಮುಖರ್ಜಿ ಕೂಡ ಈ ಸಂಸ್ಥೆ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.