ಜೈಪುರ:ಅಂತಿಮವಾಗಿ ರಾಜ್ಯಸಭೆ ಎಲೆಕ್ಷನ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಜಸ್ಥಾನದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ಗೆ, ಮಾಜಿ ಪ್ರಧಾನಿ ಅವರನ್ನ ರಾಜ್ಯಸಭೆಗೆ ಕಳುಹಿಸಲು ರಾಜ್ಯದ ಹುಡುಕಾಟದಲ್ಲಿತ್ತು. ತಮಿಳುನಾಡಿನಲ್ಲಿ ಡಿಎಂಕೆ ನೆರವು ಪಡೆದು ಮಾಜಿ ಪ್ರಧಾನಿಗೆ ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸುವ ಯೋಚನೆ ಮಾಡಿತ್ತು.
ಆದರೆ, ಡಿಎಂಕೆ ಇದಕ್ಕೆ ನಿರಾಕರಿಸಿತ್ತು. ಈ ಮೊದಲು ಮನಮೋಹನ್ ಸಿಂಗ್ ಅಸ್ಸೋಂ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಅಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದರಿಂದ ಮನಮೋಹನ್ ಸಿಂಗ್ ಮರು ಆಯ್ಕೆ ಕಠಿಣವಾಗಿತ್ತು. ಅಂತಿಮವಾಗಿ ಅವರಿಗೆ ರಾಜಸ್ಥಾನದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ ಅಶೋಕ್ ಗೆಹ್ಲೋಟ್, ಡಿಸಿಎಂ ಸಚಿನ್ ಪೈಲಟ್ ಹಾಜರಿದ್ದರು.