ಗುವಾಹಟಿ: ಅಸ್ಸೋಂನಲ್ಲಿ ಮಳೆಯ ರುದ್ರ ನರ್ತನ ಮುಂದುವರೆದಿದೆ. ರಾಜ್ಯದಲ್ಲಿ ಉಂಟಾದ ಮುಂಗಾರು ಪ್ರವಾಹಕ್ಕೆ 10 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
ಈ ರಾಜ್ಯದ 23 ಜಿಲ್ಲೆಗಳು ಪ್ರವಾಹಕ್ಕೆ ಬಲಿ : ಸಂಕಷ್ಟದಲ್ಲಿ ದಶಲಕ್ಷ ಜನ
ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಗಳ ಜನರ ನೆರವಿಗೆ ಸರ್ಕಾರ ಧಾವಿಸಿದ್ದು, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಅಸ್ಸೋಂನಲ್ಲಿ ಮಳೆಯ ರುದ್ರ ನರ್ತನ
ಅಸ್ಸೋಂನ 23 ಜಿಲ್ಲೆಗಳ 10 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಲ್ಲಿನ ಸ್ಟೇಟ್ ಡಿಜಾಸ್ಟರ್ ಮ್ಯಾನೇಜ್ಮೆಂಟ್ ಅಥಾರಿಟಿ ಹೇಳಿದೆ. ಧೇಮ್ಜಿ, ಲಖೀಮ್ಪುರ್, ಧುಬ್ರಿ, ದಕ್ಷಿಣ ಸಲ್ಮಾರ್, ಗೋಲ್ಪಾರಾ ಸೇರಿ ಹಲವು ಜಿಲ್ಲೆಗಳು ಭಾರಿ ಪ್ರವಾಹದಿಂದ ನಲುಗಿವೆ.
ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಗಳ ಜನರ ನೆರವಿಗೆ ಸರ್ಕಾರ ಧಾವಿಸಿದ್ದು, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕೊರೊನಾ ನಡುವೆ ಪ್ರವಾಹ ಬಂದಿರುವುದು ಜನರನ್ನ ಭಾರಿ ಸಂಕಷ್ಟಕ್ಕೆ ದೂಡಿದೆ. ಇದು ಅಲ್ಲಿನ ಸರ್ಕಾರಕ್ಕೂ ಆತಂಕ ತಂದಿಟ್ಟಿದೆ.