ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶದಲ್ಲಿ ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದ ಯುವಕರು!

ಗುನಾದ ಮ್ಯಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನದಿ ದಾಟುವಾಗ ಐವರು ಯುವಕರು ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾರೆ.

ಮಧ್ಯಪ್ರದೇಶದಲ್ಲಿ ಜಲಪ್ರಳಯ, ನೋಡ ನೋಡುತ್ತಿದ್ದಂತೆ ತೇಲಿ ಹೋದ 5 ಯುವಕರು

By

Published : Aug 17, 2019, 8:49 PM IST

ಗುನಾ, (ಮಧ್ಯಪ್ರದೇಶ): ಭಾರಿ ಮಳೆಗೆ ಜಿಲ್ಲೆಯ ಅನೇಕ ನದಿ-ಚರಂಡಿಗಳು ಉಕ್ಕಿ ಹರಿಯುತ್ತಿವೆ. ಗುನಾದ ಮ್ಯಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನದಿ ದಾಟುವಾಗ 5 ಯುವಕರು ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದರು. ಅದರಲ್ಲೀಗ ನಾಲ್ವರು ಬದುಕಿ ಬಂದಿದ್ದು, ಇನ್ನೂ ಒಬ್ಬ ಕಾಣೆಯಾಗಿದ್ದಾನೆ.

ಮಧ್ಯಪ್ರದೇಶದಲ್ಲಿ ಜಲಪ್ರಳಯ, ನೋಡ ನೋಡುತ್ತಿದ್ದಂತೆ ತೇಲಿ ಹೋದ 5 ಯುವಕರು

5 ಮಂದಿ ಯುವಕರು ಮೀನು ಹಿಡಿಯಲೆಂದು ಮ್ಯಾನಾ ಪೊಲೀಸ್​ ಠಾಣೆಯ ಸಮೀಪವಿರುವ ಮಕರಾವದಾ ಡ್ಯಾಂ​ಗೆ ತೆರಳಿದ್ದರು. ಈ ವೇಳೆ ಭೈರವಿ ನದಿಯನ್ನು ದಾಟಲು ಮುಂದಾಗಿದ್ದರು. ಆದರೆ, ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ 5 ಮಂದಿ ತೇಲಿ ಹೋಗಿದ್ದರು. ಅದರಲ್ಲಿ ನಾಲ್ವರು ಹೇಗೋ ಈಜಿ ದಡ ಸೇರಿದ್ದಾರೆ. ಮತ್ತೊಬ್ಬ ನಾಪತ್ತೆಯಾಗಿದ್ದಾನೆ.

ಪೊಲೀಸರು ಮತ್ತು ರಕ್ಷಣಾ ತಂಡಗಳು ಡೈವರ್‌ಗಳ ಸಹಾಯದಿಂದ ವ್ಯಕ್ತಿಯನ್ನು ಹುಡುಕುತ್ತಿವೆ. ಆದರೆ, ಈವರೆಗೂ ಅವನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಭಾರಿ ಮಳೆಯಿಂದಾಗಿ ಫತೇಘಡ್, ಧರ್ನವಾಡ, ಮಕ್ಸುದಡಗ, ಗುನಾ, ಬಮೋರಿಯ ಹಾಗೂ ಹಲವು ಮಾರ್ಗಗಳು ನದಿ ನಾಲೆಗಳ ಹರಿವಿನಿಂದ ಮುಚ್ಚಿಹೋಗಿವೆ.

ABOUT THE AUTHOR

...view details