ಚೆನ್ನೈ: ಭಾನುವಾರ ಸಂಜೆ ತಮಿಳುನಾಡಿನ ಚೆನ್ನೈನ ಕಾಸಿಮೆಡು ಬೀಚ್‌ಗೆ ದೀಪಾವಳಿ ಸಂಭ್ರಮಾಚರಣೆಗೆ ತೆರಳಿದ್ದ ಐವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬದುಕಿಗೆ ಕತ್ತಲಾದ ದೀಪಾವಳಿ: ಚೆನ್ನೈನ ಬೀಚ್ನಲ್ಲಿ ಐವರು ಯುವಕರು ನೀರುಪಾಲು! - ಸಮುದ್ರದಲ್ಲಿ ಸ್ನಾನ ಮಾಡಲು ಹೋಗಿ ಯುವಕರು ಸಾವು ಸುದ್ದಿ
ದೀಪಾವಳಿ ಆಚರಿಸಲು ಕಾಸಿಮೆಡು ಬೀಚ್‌ಗೆ ತೆರಳಿದ್ದ ಐವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಓರ್ವನ ಮೃತದೇಹವನ್ನು ಮೀನುಗಾರರು ಹೊರ ತೆಗೆದಿದ್ದು, ಉಳಿದ ನಾಲ್ವರ ಶವಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಚೆನ್ನೈನ ಬೀಚ್ನಲ್ಲಿ ಐವರು ಯುವಕರು ನೀರು ಪಾಲು
ಮೂಲಗಳ ಪ್ರಕಾರ, ದೀಪಾವಳಿ ಆಚರಿಸಲು ಚೆನ್ನೈನ ರಾಸಿಪುರಂನ ಕೆಲ ಜನರು ಕುಟುಂಬ ಸಮೇತ ಕಾಸಿಮೆಡು ಬೀಚ್‌ಗೆ ಹೋಗಿದ್ದರು. ಈ ವೇಳೆ ಸಮುದ್ರದಲ್ಲಿ ಸ್ನಾನ ಮಾಡುವಾಗ, ಈ ಐವರು ಯುವಕರು ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಸದ್ಯ ರಾಸಿಪುರಂ ಪ್ರದೇಶದ ನಿವಾಸಿ 19 ವರ್ಷದ ಯುವಕನ ಮೃತದೇಹವನ್ನು ಮೀನುಗಾರರು ನೀರಿನಿಂದ ಹೊರತೆಗೆದಿದ್ದಾರೆ. ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿ ಶವವನ್ನು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಉಳಿದ ನಾಲ್ವರು ಯುವಕರ ಮೃತದೇಹ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ.