ವಾಷಿಂಗ್ಟನ್ ಡಿಸಿ [ಯುಎಸ್ಎ]: ಮಾರಣಾಂತಿಕ ಕರೋನವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ಮೊದಲ ಪ್ರಕರಣವನ್ನು ಯುನೈಟೆಡ್ ಸ್ಟೇಟ್ಸ್ ಗುರುವಾರ ದೃಡಪಡಿಸಿದೆ.
ಕೊರೋನ ವೈರಸ್ ಇಬ್ಬರು ವ್ಯಕ್ತಿಗಳಲ್ಲಿ ಪತ್ತೆಯಾಗಿದೆ. ಚಿಕಾಗೊ ನಿವಾಸಿಯೊಬ್ಬರಿಗೆ ಅವರ ಪತ್ನಿಯಿಂದಲೇ ವೈರಸ್ ಸೋಂಕು ತಲುಪಿದೆ. ಮೊದಲ ವೈರಸ್ ಸೋಂಕಿತೆ ಇಲಿನಾಯ್ಸ್ ಎಂಬ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದ ವೇಳೆ ಕೊರೋನ ವೈರಸ್ ಸೋಂಕು ತಗುಲಿದೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಘೋಷಿಸಿದೆ.
ಚೀನಾದಲ್ಲಿ ಇದುವರೆಗೂ ಸುಮಾರು 7,700 ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿದ್ದು,ಕರೋನ ವೈರಸ್‌ನಿಂದ 170 ಜನರು ಸಾವನ್ನಪ್ಪಿದ್ದರೆ ಎಂದು ತಿಳಿದುಬಂದಿದೆ.
ಈ ವೈರಸ್ ನಿರಂತರವಾಗಿ ಹರಡುತ್ತಿರುವುದರಿಂದ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದೆ. ಅಲ್ಲದೆ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ವಿಶ್ವದಾದ್ಯಂತ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾ, ಫ್ರಾನ್ಸ್, ಯುಎಸ್ ಮತ್ತು ಚೀನಾದ ಹೊರತಾಗಿಯೂ ಏಷ್ಯಾದ ಹಲವು ದೇಶಗಳಲ್ಲಿ ಪ್ರಕರಣಗಳು ವರದಿಯಾಗಿವೆ.
ಈ ನಡುವೆ ಭಾರತವು ತನ್ನ ಮೊದಲ ಕರೋನ ವೈರಸ್ ಪ್ರಕರಣವನ್ನು ಗುರುವಾರ ದೃಢಪಡಿಸಿದ್ದು, ರೋಗಿಯು ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಕೇರಳ ವಿದ್ಯಾರ್ಥಿ ಎಂಬುದು ದೃಡಪಟ್ಟಿದೆ.