ಕರ್ನಾಟಕ

karnataka

ETV Bharat / bharat

20 ನಕಲಿ ಇನ್​​ಸ್ಟಾಗ್ರಾಂ ಅಕೌಂಟ್: ಯುಪಿಎಸ್​ಸಿ ಪಾಸ್ ಮಾಡಿದ ಚೆಲುವೆ ವಿರುದ್ಧ ದೂರು

ಮಾಡಲಿಂಗ್​ ಕ್ಷೇತ್ರದಲ್ಲಿ ಮಿಂಚಿದ್ದ ಐಶ್ವರ್ಯಾ ಶೆರಾನ್​​ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದು, ಇದೀಗ ಅವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Aishwarya Sheoran
Aishwarya Sheoran

By

Published : Aug 8, 2020, 8:27 PM IST

ಮುಂಬೈ:2019ರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್​ ಆಗಿರುವ 2016ರ ಮಿಸ್​​​ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್ ಐಶ್ವರ್ಯಾ ಶೆರಾನ್​ ವಿರುದ್ಧ ಇದೀಗ ದೂರು ದಾಖಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಪ್ರಕಟಗೊಂಡ ಪರೀಕ್ಷಾ ಫಲಿತಾಂಶದಲ್ಲಿ 93ನೇ ರ‍್ಯಾಂಕ್‌‌ ಗಿಟ್ಟಿಸಿಕೊಂಡಿರುವ ಈ ಚೆಲುವೆ 20 ನಕಲಿ ಇನ್​ಸ್ಟಾಗ್ರಾಂ ಅಕೌಂಟ್​ ಹೊಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮಾಡಲಿಂಗ್​ ಕ್ಷೇತ್ರದಲ್ಲಿ ಮಿಂಚಿದ ಚೆಲುವೆಗೆ UPSC ಪರೀಕ್ಷೆಯಲ್ಲಿ 93ನೇ ರ‍್ಯಾಂಕ್

ನಗರದ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಜನರು ದಿಕ್ಕು ತಪ್ಪಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣ ಬಳಕೆ ಎಂದು ಕೇಸು ದಾಖಲಾಗಿದೆ.

ಈ ಬಗ್ಗೆ ಐಶ್ವರ್ಯಾ ಶೆರಾನ್ ಪ್ರತಿಕ್ರಿಯಿಸಿ,​ ತಾವು ಯಾವುದೇ ರೀತಿಯ ಇನ್​ಸ್ಟಾಗ್ರಾಂ ಅಕೌಂಟ್​ ಹೊಂದಿಲ್ಲ. ಈ ವಿಷಯ ಕೇಳಿ ನಾನೇ ಆಘಾತಕ್ಕೊಳಗಾಗಿದ್ದೇನೆ. ಯಾವ ಉದ್ದೇಶಕ್ಕಾಗಿ ಈ ಅಕೌಂಟ್​​ ಓಪನ್​ ಮಾಡಿದ್ದಾರೆಂಬುದು ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ:UPSC ಪರೀಕ್ಷೆಯಲ್ಲಿ 93ನೇ ರ‍್ಯಾಂಕ್ ಪಡೆದ ಪ್ರತಿಭಾನ್ವಿತೆ ಜತೆ 'ಈಟಿವಿ ಭಾರತ' ಸಂದರ್ಶನ

2017ರಿಂದಲೂ ಕೊಲಾಬಾದ್​ ಆರ್ಮಿ ಆಫೀಸರ್​ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಸದ್ಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್​ 66 ಸಿ ಅಡಿಯಲ್ಲಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details