ನವದೆಹಲಿ: 15 ವರ್ಷಗಳ ಹಿಂದೆ, ಮಾಹಿತಿ ಹಕ್ಕು ಕಾಯ್ದೆ 2005ರ ಅಕ್ಟೋಬರ್ 12 ರಂದು ಕಾರ್ಯರೂಪಕ್ಕೆ ಬಂದಿತು. ಅದು ವಿಜಯದಶಮಿಯ ಶುಭ ದಿನವಾಗಿತ್ತು ಮತ್ತು ಭಾರತೀಯ ಪ್ರಜಾಪ್ರಭುತ್ವದಲ್ಲಿ ಹೊಸ ವಿಕಾಸದ ನಾಂದಿಗೆ ಕಾರಣವಾಗಿತ್ತು. ಈ ಕಾನೂನು ಜಾರಿಗೆ ಪ್ರತಿಪಾದಿಸುತ್ತಿದ್ದ ನಾಗರಿಕರು ಭಾರತದ ದೋಷಯುಕ್ತ ಚುನಾಯಿತ ಪ್ರಜಾಪ್ರಭುತ್ವವನ್ನು ನಿಜವಾದ ಪಾಲ್ಗೊಳ್ಳುವಿಕೆ ಪ್ರಜಾಪ್ರಭುತ್ವವನ್ನಾಗಿ ಪರಿವರ್ತಿಸುವ ಕನಸನ್ನು ಕಂಡಿದ್ದರು.
ರಾಷ್ಟ್ರದ ಆಡಳಿತಗಾರರಿಗೆ ಮತ್ತು ನಾಗರಿಕಗೆ ಭರವಸೆ ನೀಡಿದ ಸ್ವರಾಜ್ ರಾಜಸ್ಥಾನದ ದೇವುಡುಂಗ್ರಿ ಗ್ರಾಮದಲ್ಲಿ ಅರುಣಾ ರಾಯ್ ಅವರ ನೇತೃತ್ವದಲ್ಲಿ ಆರ್‌ಟಿಐ ಚಳುವಳಿ 1990ರ ದಶಕದ ಆರಂಭದಲ್ಲಿ ಆರಂಭಗೊಂಡಿತ್ತು, ನಂತರ ಈ ಕಾಯ್ದೆ ಅತ್ಯುತ್ತಮ ಪಾರದರ್ಶಕತೆ ಕಾನೂನುಗಳಲ್ಲಿ ಒಂದಾಗಿ ಪರಿವರ್ತನೆಗೊಂಡಿತು.
1975ರ ನಂತರ ತನ್ನ ಸರಣಿ ತೀರ್ಪುಗಳಲ್ಲಿ ಸುಪ್ರೀಂಕೊರ್ಟ್, ಸಂವಿಧಾನದ ಪರಿಚ್ಚೇದ 19 (1) (ಎ) ವಾಕ್ ಸ್ವಾತಂತ್ರ್ಯ, ಪ್ರಕಟಣೆ ಹಕ್ಕು ಮತ್ತು ಮಾಹಿತಿಯ ಹಕ್ಕಗಳು ಮೂಲಭೂತ ಹಕ್ಕುಗಳೆಂದು ಖಾತರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಮೊದಲ ಎರಡು ಹಕ್ಕಗಳಾದ ವಾಕ್ ಸ್ವಾತಂತ್ರ್ಯ ಮತ್ತು ಪ್ರಕಟಣೆ ಹಕ್ಕನ್ನು ಗೌರವಿಸಲಾಗಿದೆ ಮತ್ತು ನಂತರದ ವರ್ಷಗಳಲ್ಲಿ ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
ಅದರೆ ಮಾಹಿತಿಯ ಹಕ್ಕು ಎಲ್ಲಾ ನಾಗರಿಕರಿಗೆ ಮಾಹಿತಿ ಪಡೆಯುವ ಕುರಿತು ಸಮಪರ್ಕವಾದ ಕಾನೂನಿನ ಕೊರತೆಯಿತ್ತು, ಆದರೆ ಆರ್‌ಟಿಐ ಕಾಯ್ದೆ 2005 , ಮಾಹಿತಿಯ ಹಕ್ಕನ್ನು ಸರಿಯಾಗಿ ಕ್ರೋಡೀಕರಿಸಿತು.
ಕರಡು ಕಾಯಿದೆಯು ಆರ್‌ಟಿಐ ಕಾರ್ಯಕರ್ತರಿಂದ ಪಡೆದ ಮಾಹಿತಿಯನ್ನು ಒಳಗೊಂಡಿತ್ತು ಮತ್ತು ಅದರ ನಿಬಂಧನೆಗಳನ್ನು ಚೆನ್ನಾಗಿ ರಚಿಸಲಾಗಿತ್ತು, ಪ್ರಜಾಪ್ರಭುತ್ವವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಪಾರದರ್ಶಕತೆಯ ಅಗತ್ಯವಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯು ತನ್ನ ಮುನ್ನುಡಿಯಲ್ಲಿ ಪ್ರತಿಪಾದಿಸಿದೆ ಮತ್ತು ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಮತ್ತು ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡುವುದು ಕಾಯ್ದೆ ಜಾರಿಯ ಉದ್ದೇಶವಾಗಿತ್ತು.
ಅಲ್ಲದೆ ಇದನ್ನು ಸಾಧಿಸಲು ಕೆಲವು ಪ್ರಾಯೋಗಿಕ ನಿರ್ಬಂಧಗಳಿದೆ ಎಂದು ಗುರುತಿಸಿದ ನಂತರ, ಅದು ಸಂಘರ್ಷದ ಹಿತಾಸಕ್ತಿಗಳನ್ನು ಸಮನ್ವಯಗೊಳಿಸಿತು ಮತ್ತು ಭಾರತಕ್ಕೆ ವಿಶ್ವದ ಅತ್ಯುತ್ತಮ ಪಾರದರ್ಶಕತೆ ಕಾನೂನನ್ನು ನೀಡಿತು.
ಈ ಬಲವಾದ ಕಾನೂನು ಜಾರಿಗೆ ಬಂದ ನಂತರ ಕಾನೂನಿನ ಬಳಕೆಗೆ ಸಂಬಂಧಿಸಿದಂತೆ ನಾಗರಿಕರು ಇತರರಿಗೆ ಅದರ ಕುರಿತು ಮಾಹಿತಿ ಮತ್ತು ಶಿಕ್ಷಣ ನೀಡಲು ಪ್ರಾರಂಭಿಸಿದರು. ಮೊದಲ 5-7 ವರ್ಷಗಳಲ್ಲಿ ನಾಗರಿಕರು ತಾವು ಜಾರಿಗೆ ತರಬಹುದಾದ ಈ ಕಾನೂನಿನ ಸಾಮರ್ಥ್ಯದ ಕುರಿತು ಅರಿತುಕೊಂಡರು.
ಈ ಕಾಯ್ದೆಯ ಮೂಲಕ ಅವರು ತಾವು ಹೊಣೆಗಾರಿಕೆಯನ್ನು ಪಡೆಯಬಹುದು ಮತ್ತು ತಮ್ಮ ಸರ್ಕಾರದ ವಿಚಕ್ಷಣ ನಿರ್ವಹಕರಾಗಿ ಕಾರ್ಯನಿರ್ವಹಿಸಬಹುದು ಎಂದು ಅವರು ಅರಿತುಕೊಂಡರು. ಅನೇಕ ಹಗರಣಗಳು ಬೆಳಕಿಗೆ ಬಂದವು ಮತ್ತು ಸರ್ಕಾರಿ ನೌಕರರು, ನಾಗರಿಕರಿಗೆ ರಾಷ್ಟ್ರದ ಆಡಳಿತ ನಿರ್ವಕರಿಗೆ - ಸ್ವಲ್ಪ ಗೌರವ ನೀಡುವುದನ್ನು ಕಲಿತುಕೊಂಡರು.
ಪ್ರತಿ ನಾಗರಿಕರು ತಮ್ಮ ಬಳಿ ಅಧಿಕಾರ ಇದೆ ಎಂದು ಭಾವಿಸಲು ಪ್ರಾರಂಭಿಸಿದರು. ನಾಗರಿಕರು ಪಡಿತರ ಚೀಟಿಗಳು, ಪಡಿತರ, ಆದಾಯ ತೆರಿಗೆ ಮರುಪಾವತಿ ಮತ್ತು ಇತರ ಅನೇಕ ಸೇವೆಗಳನ್ನು ಪಡೆಯಲು ಪ್ರಾರಂಭಿಸಿದರು. ಇದೆಲ್ಲ ಕಾಯ್ದೆ ಜಾರಿಗೆ ಬಂದ ನಂತರದ ಬೆಳವಣಿಗೆ. ಎಲ್ಲಕ್ಕಿಂತ ಹೆಚ್ಚಾಗಿ ನಾಗರಿಕರು ಹೊಣೆಗಾರಿಕೆಯನ್ನು ಅನುಭವಿಸಲು ಪ್ರಾರಂಭಿಸಿದರು. ದಂಡದ ಬೆದರಿಕೆ ಸರ್ಕಾರಿ ನೌಕರರಿಗೆ ಮಾಹಿತಿ ನೀಡುವ ಕರ್ತವ್ಯವನ್ನು ನಿರ್ವಹಿಸುವ ಸೂಕ್ಷ್ಮತೆಯ ಅರಿವನ್ನುಂಟು ಮಾಡಿತು.
ಸರಳ ಕಾನೂನು ಬಳಸಲು ಮತ್ತು ಕಾರ್ಯಗತಗೊಳಿಸಲು ಸುಲಭವಾಗಿತ್ತು. ಯಾವುದೇ ಶುಲ್ಕ ಪಡೆಯದೆ ಇತರರಿಗೆ ಆರ್‌ಟಿಐ ಕುರಿತು ಕಲಿಸುವ, ತರಬೇತಿ ನೀಡುವ ಮತ್ತು ಸಹಾಯ ಮಾಡುವ ಸಾವಿರಾರು ಆರ್‌ಟಿಐ ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ. ಇದು ಆರ್‌ಟಿಐ ರಾಷ್ಟ್ರದಾದ್ಯಂತ ಹೆಸರುವಾಸಿಯಾಗಲು ಮತ್ತು ವ್ಯಾಪಕವಾಗಿ ಬಳಸಿಕೊಳ್ಳಲು ಕಾರಣವಾಗಿದೆ. ಕಳೆದ ಹದಿನೈದು ವರ್ಷಗಳಲ್ಲಿ ಇಡೀ ದೇಶದಲ್ಲಿ ಕೆಲವು ಕೋಟಿ ಆರ್‌ಟಿಐ ಅರ್ಜಿಗಳನ್ನು ದಾಖಲಿಸಲಾಗಿದೆ.
ಆದರೆ ಆರ್‌ಟಿಐಯನ್ನು ಸಮರ್ಪಕವಾಗಿ ಜಾರಿಗೆ ತರುವ ಬಗ್ಗೆ ಅಧಿಕಾರದಲ್ಲಿರುವವರ ಪ್ರತಿರೋಧವಿದೆ. ಪ್ರತಿಯೊಬ್ಬರೂ ಪಾರದರ್ಶಕತೆ ಕುರಿತು ಕೇವಲ ಬಾಯಿ ಮಾತಿನ ಭರವಸೆ ನೀಡುತ್ತಿದ್ದಾರೆ. ಹೆಚ್ಚಿನ ಜನರು ಇತರರು ಪಾರದರ್ಶಕವಾಗಿರಬೇಕು ಎಂದು ಬಯಸುತ್ತಾರೆ ಆದರೆ ತಮ್ಮ ವಿಚಾರಕ್ಕೆ ಬಂದಾಗ ಅದನ್ನು ಜಾರಿಗೆ ತರಲು ಹಿಂಜರಿಯುತ್ತಾರೆ. ಭ್ರಷ್ಟರು ಸ್ಪಷ್ಟ ಕಾರಣಗಳಿಗಾಗಿ ಆರ್‌ಟಿಐ ಕಾಯ್ದೆಯನ್ನು ದ್ವೇಷಿಸುತ್ತಾರೆ ಮತ್ತು ಪ್ರಾಮಾಣಿಕ ಅಧಿಕಾರಿಗಳಲ್ಲಿ ಹೆಚ್ಚಿನವರು ತಮ್ಮ ದುರಹಂಕಾರದ ಕಾರಣದಿಂದಾಗಿ ತಮ್ಮ ನಿರ್ಧಾರ ಮತ್ತು ಕಾರ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದೇ ಆಪರಾಧ ಎಂದು ಭಾವಿಸಿದ್ದಾರೆ.
ಆಡಳಿತದ ಹೆಚ್ಚಿನ ಶಕ್ತಿ ಕೇಂದ್ರಗಳು ಆರ್‌ಟಿಐ ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ಮಾಹಿತಿ ನೀಡಲು ಒಡ್ಡುವ ಪ್ರತಿರೋಧವು ಆರ್‌ಟಿಐಗೆ ಮಸಿ ಬಳಿಯುವ ಹುನ್ನಾರ ಎಂದೇ ಭಾವಿಸಲಾಗಿದೆ. ಮೊದಲ ದುರದೃಷ್ಟಕರ ಮತ್ತು ಮಹತ್ವದ ಎಚ್ಚರಿಕೆ ಏನೆಂದರೆ 2011ರಲ್ಲಿ ಸಿಬಿಎಸ್‌ಇ ಮತ್ತು ಆದಿತ್ಯ ಬಂದೋಪಾಧ್ಯಾಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ವ್ಯಾಖ್ಯಾನ ಈ ರೀತಿ ಇದೆ. ಆರ್‌ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ದ್ವೇಷಿಸಲು ಅವಕಾಶ ನೀಡಬಾರದು. ರಾಷ್ಟ್ರೀಯ ಅಭಿವೃದ್ಧಿ ಮತ್ತು ಏಕೀಕರಣಕ್ಕೆ ಅಡ್ಡಿಯುಂಟುಮಾಡುವ ಸಾಧನವಾಗಬಾರದು, ಹಾಗೆಯೇ ನಾಗರಿಕರ ನಡುವೆ ಆಶಾಂತಿ, ಮತ್ತು ಸಾಮರಸ್ಯವನ್ನು ನಾಶಮಾಡಲು ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿತ್ತು.
ತಮ್ಮ ಕರ್ತವ್ಯವನ್ನು ಮಾಡಲು ಶ್ರಮಿಸುತ್ತಿರುವ ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ಅಥವಾ ಬೆದರಿಸುವ ಆಸ್ತ್ರವನ್ನಾಗಿ ಬಳಸಬಾರದು ಎಂದು ಸುಪ್ರೀಂಕೋರ್ಟ್ ನೀಡಿರುವ ವ್ಯಾಖ್ಯಾನವನ್ನು ಅಧಿಕಾರಿಗಳು ಅನೇಕ ಬಾರಿ ಸಂತೋಷದಿಂದ ಉಲ್ಲೇಖಿಸಿದ್ದಾರೆ, ಅವರು ಈಗ ಕಾನೂನನ್ನು ಪಾಲಿಸದಿರುವ ಸಮರ್ಥನೆಗಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸುತ್ತಾರೆ.
ಮತ್ತೊಂದೆಡೆ, ಹೆಚ್ಚಿನ ಮಾಹಿತಿ ಆಯೋಗಗಳು, ಇದು ಅಂತಿಮ ಮೇಲ್ಮನವಿ ಪ್ರಾಧಿಕಾರಗಳಾಗಿ ಕಾರ್ಯನಿರ್ವಹಿಸಲು ರಚಿಸಲ್ಪಟ್ಟವು, ಇವುಗಳು ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆಯೋಗಗಳಲ್ಲಿನ ಎರಡನೆಯ ಮೇಲ್ಮನವಿಗಳು ಕೆಲವು ವರ್ಷಗಳಿಂದ ಕಡಿಮೆ ದಾಖಲಾಗಿವೆ ಮತ್ತು ತಪ್ಪಿತಸ್ಥ ಸರ್ಕಾರಿ ನೌಕರರ ವಿರುದ್ಧ ಕಾನೂನಿನ ಆನ್ವಯ ದಂಡದ ನಿಬಂಧನೆಗಳನ್ನು ಜಾರಿಗೆ ತರುವುದರಲ್ಲಿ ಈ ಕಾಯ್ದೆ ಅಷ್ಟೇನು ಪರಿಣಾಮಕಾರಿಯಾಗಿಲ್ಲ. ಸರ್ಕಾರಗಳು ಮತ್ತು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳು ಕಾನೂನಿನ ನಿಬಂಧನೆಗಳನ್ನು ಪಾಲಿಸದಿದ್ದರೆ ಅವರು ಯಾವುದೇ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಿಲ್ಲ. ಅಲ್ಲದೆ ಅತ್ಯಂತ ಕೆಟ್ಟ ಸಂದರ್ಭದಲ್ಲಿ ಆಯೋಗವು ಮಾಹಿತಿಯನ್ನು ಬಹಿರಂಗಪಡಿಸಲು ಆದೇಶ ನೀಡಬಹುದು. ಆಯೋಗವನ್ನು ಮೀರಿ ಯಾವುದೇ ಮೇಲ್ಮನವಿಗಳನ್ನು ಕಾಯಿದೆ ಅನುಮತಿಸದಿದ್ದರೂ, ಈ ನಿರ್ಧಾರಗಳನ್ನು ನ್ಯಾಯಾಲಯಗಳಲ್ಲಿ ರಿಟ್ ಅರ್ಜಿಸಲ್ಲಿಸುವ ಮೂಲಕ ಪ್ರಶ್ನಿಸಲಾಗುತ್ತದೆ.
ಆದ್ದರಿಂದ ಪ್ರಮುಖ ಮತ್ತು ಪ್ರಸ್ತುತ ವಿಷಯಗಳಲ್ಲಿ ನಾಗರಿಕರ ಮೂಲಭೂತ ಹಕ್ಕನ್ನು ನಿರಾಕರಿಸುವುದು ಇದರಲ್ಲಿ ಸುಲಭವಾಗಿದೆ. ಒಂದು ಸ್ಪಷ್ಟವಾದ ಉದಾರಹಣೆ ನೀಡುವುದಾದರೆ ಪಿಎಂ ಕೇರ್ಸ್ ನಿಧಿಯು ಆರ್‌ಟಿಐ ಕಾಯ್ದೆಯಡಿಯಲ್ಲಿ ಸಾರ್ವಜನಿಕ ಸಂಸ್ಥೆಯ ವ್ಯಾಪ್ತಿಗೆ ಒಳಪಟ್ಟಿದ್ದರೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ ಏಕೆಂದರೆ ಇದನ್ನು ಪ್ರಧಾನಿ ಮತ್ತು ಮೂವರು ಮಂತ್ರಿಗಳ ಮೂಲಕ ಸರ್ಕಾರ ನಿಯಂತ್ರಿಸುತ್ತದೆ.
ಖರೀದಿಗಳು ಮತ್ತು ವಿವಿಧ ಕೋವಿಡ್ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಾಗುತ್ತಿಲ್ಲ ಮತ್ತು ಕೆಲವು ಸಂದರ್ಭಗಳಲ್ಲಿ ಶಾಸಕರ ನಿಧಿಯ ಖರ್ಚಿನ ವಿವರಗಳನ್ನು ಸಹ ಅರ್ಟಿಐ ಕಾಯ್ದೆಯಡಿಯಲ್ಲಿ ಕೇಳಿದ್ದರೂ ಮಾಹಿತಿ ನಿರಾಕರಿಸಲಾಗುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಕೇಂದ್ರ ಮಾಹಿತಿ ಆಯೋಗ ಘೋಷಿಸಿದೆ. ರಾಜಕೀಯ ಪಕ್ಷಗಳು ಆಯೋಗದ ಆದೇಶವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ. ಆದರೆ ತಮ್ಮ ದುರಹಂಕಾರದ ವರ್ತನೆಯ ಮೂಲಕ ಶಾಸನಬದ್ಧ ಆದೇಶವನ್ನು ಪಾಲಿಸಲು ರಾಜಕೀಯ ಪಕ್ಷಗಳು ನಿರಾಕರಿಸುತ್ತಿವೆ.
ಆಯುಕ್ತರು ಮತ್ತು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳು ಕಾನೂನು ಮತ್ತು ಸಂವಿಧಾನವನ್ನು ಕಡೆಗಣಿಸುವ ಮೂಲಕ ಸಾಕಷ್ಟು ಮಾಹಿತಿಯನ್ನು ನಿರಾಕರಿಸಿದ್ದಾರೆ. ಅಲ್ಲದೆ ತಮಗೆ ಬೇಕಾದ ರೀತಿಯಲ್ಲಿ ಕಾಯ್ದೆಯ ನಿಯಮಗಳನ್ನು ವ್ಯಾಖ್ಯಾನಿಸುತ್ತಿದ್ದಾರೆ.
ಆದಾಗ್ಯೂ ನಾಗರಿಕರು ಸಹ ಕಾನೂನನ್ನು ಜಾರಿಗೆ ತರಲು ಒಗ್ಗೂಡಲು ಆರಂಭಿಸಿದ್ದಾರೆ. ಕಾಯ್ದೆ ಅವರಿಗೆ ನೀಡುತ್ತದೆ ಎನ್ನುವುದನ್ನು ಅವರು ಅರಿತುಕೊಂಡಿದ್ದಾರೆ ಮತ್ತು ಕೋವಿಡ್ ಕಾಲದಲ್ಲಿಯೂ ಸಹ ಅನೇಕ ವಿಭಿನ್ನ ಗುಂಪುಗಳು ವರ್ಚುವಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆರ್‌ಟಿಐ ಕಾಯ್ದೆಯನ್ನು ಚರ್ಚಿಸುತ್ತಿವೆ ಮತ್ತು ಉತ್ತೇಜಿಸುತ್ತಿವೆ. ಆರ್‌ಟಿಐ ಕಾಯ್ದೆಗೆ ಸಂಬಂಧಿಸಿದಂತೆ ಎಲ್ಲ ಪ್ರಕರಣಗಳ ವಿಚಾರಣೆಗಳನ್ನು ವರ್ಚುವಲ್ ಪ್ಲಾಟ್‌ಫಾರ್ಮ್‌ಗಳ (ಆನ್ ಲೈನ್ )ಮೂಲಕ ನಡೆಸಲು ಅದೇಶ ನೀಡಬೇಕು ಮತ್ತು ಎಲ್ಲಾ ಪ್ರಕರಣಗಳನ್ನು ಕಾಲ ಮಿತಿಯಲ್ಲಿ ವಿಲೇವಾರಿ ಮಾಡಲು ಮಾಹಿತಿ ಹಕ್ಕು ಆಯೋಗಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ನಾಗರಿಕರು ಇ ಪ್ಲಾಟ್‌ಫಾರ್ಮ್‌ಗಳನ್ನು ಬಹಳ ಉತ್ಸಾಹದಿಂದ ಬಳಸಿದ್ದಾರೆ ಮತ್ತು ರಾಷ್ಟ್ರದಾದ್ಯಂತ ಸಂಪರ್ಕಗಳನ್ನು ಸಾಧಿಸುತ್ತಿದ್ದಾರೆ ಇವು ಸಾಮಾನ್ಯ ಸಮಸ್ಯೆಗಳ ವಿಕಾಸಕ್ಕೆ ಕಾರಣವಾಗಬಹುದು ಮತ್ತು ನಾಗರಿಕರ ಮೂಲಭೂತ ಹಕ್ಕನ್ನು ಬಲಪಡಿಸಬಹುದು.
ಆರ್‌ಟಿಐನ ಕಾಯ್ದೆ ಮೇಲಿನ ಹಿಡಿತವು ಸಂವಿಧಾನದ ಪರಿಚ್ಚೇಧ 19 (1) (ಎ) ಮತ್ತು ಆದ್ದರಿಂದ ವಾಕ್ ಸ್ವಾತಂತ್ರ್ಯ ಮತ್ತು ಪ್ರಕಟಣೆ ಹಕ್ಕಿನ ಮೇಲೆ ನಿರ್ಬಂಧಗಳಿಗೆ ಕಾರಣವಾಗಬಹುದು ಎಂದು ಅವರು ಗಮನಸೆಳೆದಿದ್ದಾರೆ. ಸಿಜೆಐ ಎಸ್‌ಎ ಬೊಬ್ಡೆ ಕಳೆದ ವಾರ ನ್ಯಾಯಾಲಯದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು ಹೀಗೆ, “ಇತ್ತೀಚಿನ ದಿನಗಳಲ್ಲಿ ವಾಕ್ ಸ್ವಾತಂತ್ರ್ಯವು ಅತ್ಯಂತ ದುರುಪಯೋಗಪಡಿಸಿಕೊಂಡ ಸ್ವಾತಂತ್ರ್ಯ ಎಂದು ನಾವು ಅಭಿಪ್ರಾಯಪಡಲೇ ಬೇಕು.” ಇಲ್ಲಿಂದ ಆರ್‌ಟಿಐ ಪ್ರಗತಿ ಹೊಂದಬಹುದು ಅಥವಾ ಹಿನ್ನಡೆ ಸಾಧಿಸಬಹುದು.
- ಶೈಲೇಶ್ ಗಾಂಧಿ, ಮಾಜಿ ಆಯುಕ್ತರು, ಕೇಂದ್ರ ಮಾಹಿತಿ ಹಕ್ಕು ಆಯೋಗ