ಕರ್ನಾಟಕ

karnataka

By

Published : Nov 22, 2019, 4:06 PM IST

ETV Bharat / bharat

ತನ್ನಾಸೆಯಂತೆ ಹೆಲಿಕಾಪ್ಟರ್​ನಲ್ಲಿ ವಧು ಬೀಳ್ಕೊಟ್ಟ ತಂದೆ..

ಮಗಳನ್ನು ಮದುವೆ ಮಾಡಿ ಹೆಲಿಕಾಪ್ಟರ್‌ನಲ್ಲೇ ಆಕೆಯನ್ನ ಗಂಡನ ಮನೆಗೆ ಕಳುಹಿಸಿಕೊಡಬೇಕೆಂಬ ತಂದೆ ಆಸೆ ಈಡೇರಿದೆ.

ಹೆಲಿಕಾಪ್ಟರ್​ನಲ್ಲಿ ವಧುವನ್ನು ಬೀಳ್ಕೊಟ್ಟ ತಂದೆ

ರಾಜಸ್ಥಾನ: ಮದುವೆಯ ನಂತರ ವಧುವನ್ನು ಆಕೆಯ ತಂದೆ ತಮ್ಮ ಆಸೆಯಂತೆಯೇ ವಿನೂತನವಾಗಿ ಹೆಲಿಕಾಪ್ಟರ್​ನಲ್ಲಿ ಗಂಡನ ಮನೆಗೆ ಬೀಳ್ಕೊಟ್ಟಿದ್ದಾರೆ.

ರೀನಾ ಎಂಬವಧು ಮತ್ತುಆಕೆಯ ಪತಿ ಸಂದೀಪ್ ಲಾಂಬಾ ಎಂಬ ವರ ಮದುವೆಯಾಗಿದ್ದರು. ಆ ಬಳಿಕ ಈ ಜೋಡಿ ಜುಂಜುನು ಜಿಲ್ಲೆಯ ಚಿದಾವಾ ಪಟ್ಟಣದ ಬಳಿಯಿರುವ ಅಜಿತ್‌ಪುರ ಗ್ರಾಮದಿಂದ ವರನ ಸ್ವಗ್ರಹವಿರುವ ಸುಲ್ತಾನಾ ಹಳ್ಳಿಗೆ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದಾರೆ. ಹೆಲಿಕಾಪ್ಟರ್‌ನ ನೋಡಲೆಂದೇ ಶಾಲಾ ಮಕ್ಕಳು ಸೇರಿ ಅನೇಕ ಜನ ಮುಗಿಬಿದ್ದಿದ್ದರು.

ಒಂದು ವರುಷದ ಹಿಂದೆ ಮಗಳ ಮದುವೆ ನಿಗದಿಯಾದಾಗಲೇ ಆಕೆಯನ್ನ ನೂತನ ರೀತಿ ಕಳುಹಿಸಿಕೊಡಬೇಕೆಂದು ವಧುವಿನ ತಂದೆ ಮಹೇಂದ್ರ ಸಿಂಗ್​​​ ಸೋಲಾಕ್ ನಿರ್ಧರಿಸಿದ್ದರಂತೆ. ಹೆಲಿಕಾಪ್ಟರ್‌ನಲ್ಲೇ ಆಕೆಯನ್ನ ಕಳುಹಿಸಿಕೊಡಬೇಕೆಂಬ ತಮ್ಮ ಆಸೆಯನ್ನ ಎರಡು ತಿಂಗಳ ಹಿಂದೆ ಕುಟುಂಬಸ್ಥರ ಮುಂದಿಟ್ಟಿದ್ದರಂತೆ.ಇನ್ನು, ರೀನಾ ಜುಂಜುನು ಮೊರಾಕಾ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದು, ಆಕೆಯ ಪತಿ ಸಂದೀಪ್​​, ನಾಸಿಕ್​ನಲ್ಲಿ ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ತನ್ನಾಸೆಯಂತೆ ಮಗಳನ್ನ ಆಕೆಯ ಗಂಡನ ಮನೆಗೆ ಕಳುಹಿಸಿದ ತಂದೆಯ ಕಣ್ಣಲ್ಲಿ ಆನಂದ ಭಾಷ್ಪವಿದ್ರೆ, ಊರ ಜನರಿಗೆ ಇದನ್ನೆಲ್ಲ ನೋಡಿ ಕಣ್ತುಂಬಿ ಬಂದಿದ್ವು.

For All Latest Updates

ABOUT THE AUTHOR

...view details