ಕರ್ನಾಟಕ

karnataka

By

Published : Jun 7, 2020, 12:28 AM IST

ETV Bharat / bharat

ವಿಶೇಷ ಅಂಕಣ: ರೈತರ ಕಲ್ಯಾಣವೇ ದೇಶದ ಭದ್ರತೆ!

ರೈತನು ತನ್ನ ಉತ್ಪನ್ನಗಳಿಗೆ ನಿರಂತರ ಆದಾಯವನ್ನು ಪಡೆದಾಗ ಮಾತ್ರ ದೇಶೀಯ ಕೃಷಿ ಉತ್ಪಾದನೆಯು ದ್ವಿಗುಣಗೊಳ್ಳುತ್ತದೆ ಎಂದು ಆರು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವತಃ ಸಮಂಜಸವಾಗಿ ವಿಶ್ಲೇಷಿಸಿದ್ದಾರೆ.

Farmers' welfare is nation's security
ರೈತರ ಕಲ್ಯಾಣವೇ ದೇಶದ ಭದ್ರತೆ

ಹೈದರಾಬಾದ್:ಬೆಳೆ ಉತ್ಪನ್ನಗಳ ಮಾರಾಟ ಮತ್ತು ಅವುಗಳ ಬಗ್ಗೆ ಮುಂಗಡ ಒಪ್ಪಂದಗಳಿಗೆ ಸಂಬಂಧಿಸಿದಂತೆ ಅಗತ್ಯ ಸರಕುಗಳ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಎರಡು ಸುಗ್ರೀವಾಜ್ಞೆಗಳನ್ನು ಹೊರಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ.

ಈ ಮೂಲಕ ರೈತರು ತಾವು ಬೆಳೆ ಉತ್ಪನ್ನಗಳನ್ನು ದೇಶದ ಯಾವ ಭಾಗದಲ್ಲಾದರೂ ಮತ್ತು ಯಾರಿಗಾದರೂ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡುತ್ತಿದೆ. ಮಾಡಿಕೊಂಡ ಒಪ್ಪಂದದಂತೆ ಹಣ ಪಾವತಿಸುವಲ್ಲಿನ ವಿಳಂಬದಂತಹ ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಬೇಕು. ಆದರೆ, ದೇಶದ ಪರಿಸ್ಥಿತಿಯೇ ಬೇರೆ ಇದೆ.

ಬಡ ರೈತನು ದೊಡ್ಡ ವ್ಯಾಪಾರಿಗಳೊಂದಿಗೆ ಹೇಗೆ ವ್ಯವಹರಿಸಬಹುದು..? ಎರಡು-ಮೂರು ಎಕರೆ ಪ್ರದೇಶದ ಸಣ್ಣ ರೈತನು ತನ್ನ ಉತ್ಪನ್ನಗಳಿಗೆ ಬೇಡಿಕೆಯ ಸ್ಥಳವನ್ನು ದೇಶದಲ್ಲಿ ತಿಳಿದುಕೊಳ್ಳಲು ಮತ್ತು ಅದನ್ನು ಆ ಸ್ಥಳದಲ್ಲಿ ಮಾರಾಟ ಮಾಡಲು ಎಷ್ಟು ಸಾಮರ್ಥ್ಯವಿದೆ..? ಈಗಾಗಲೇ ಪರಿಚಯಿಸಲಾದ E-NAM ವ್ಯವಸ್ಥೆಯು ಸಂಪೂರ್ಣವಾಗಿ ಸರಿಯಾಗಿ ಕಾರ್ಯನಿರ್ವಹಿಸದೇ ಇರುವಾಗ, ದೇಶಾದ್ಯಂತ ಹರಡಿರುವ ಶೇಕಡಾ 82ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ಆಯ್ಕೆಯ ಸ್ಥಳದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ ಮತ್ತು ಅದರಿಂದ ಹೆಚ್ಚಿನ ಪ್ರಮಾಣದ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ನಂಬಿಕೆ ಇಟ್ಟುಕೊಳ್ಳುವುದು ಕನಸಿನ ಮಾತೆ ಸರಿ.

ಇನ್ನೂ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆಗಳ ಹೆಸರಿನಲ್ಲಿ ರೈತರ ಮೇಲೆ ವಾರ್ಷಿಕ ಕ್ರೂರ ಹಾಸ್ಯ ಮಾಡಿದಂತಾಗುತ್ತಿದ್ದು, ಅವರ ಜೀವನ ಸುರಕ್ಷತೆಯನ್ನು ಮರೀಚಿಕೆಯಾಗಿಸುತ್ತಿದೆ! ಆದ್ದರಿಂದ ರೈತರು ಬೆಳೆದ ಬೆಳೆಗಳನ್ನು ಸರ್ಕಾರ ಖರೀದಿಸಬೇಕು. ಇದು ಕೃಷಿಕರ ಕಷ್ಟಗಳಿಗೆ ಸರಿಯಾದ ಪ್ರತಿಫಲವನ್ನು ಪಡೆಯುವ ಏಕೈಕ ಮಾರ್ಗವಾಗಿದೆ. ರೈತರ ಕಲ್ಯಾಣ ಮಾಡುವ ಅವರ ಮೂಲಭೂತ ಕರ್ತವ್ಯವನ್ನು ಮರೆತು ಸರ್ಕಾರವು, ತನ್ನ ಅಗತ್ಯ ಜವಾಬ್ದಾರಿಯನ್ನು ತ್ಯಜಿಸಿದಂತೆ ಕಾಣುತ್ತಿದ್ದು, ಹೊಸ-ಇನ್ನೂ ಕಾರ್ಯಸಾಧ್ಯವಲ್ಲದ ವ್ಯವಸ್ಥೆ ಮಾಡುವ ಮೂಲಕ ಮಾರುಕಟ್ಟೆಗಳ ವ್ಯವಸ್ಥೆ ಹಿಡಿತದಿಂದ ಅವರನ್ನು ಮುಕ್ತಗೊಳಿಸಿದೆ.

ರೈತನು ತನ್ನ ಉತ್ಪನ್ನಗಳಿಗೆ ನಿರಂತರ ಆದಾಯವನ್ನು ಪಡೆದಾಗ ಮಾತ್ರ ದೇಶೀಯ ಕೃಷಿ ಉತ್ಪಾದನೆಯು ದ್ವಿಗುಣಗೊಳ್ಳುತ್ತದೆ ಎಂದು ಆರು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವತಃ ಸಮಂಜಸವಾಗಿ ವಿಶ್ಲೇಷಿಸಿದ್ದಾರೆ, ಅದು ನಿಜಕ್ಕೂ ವಾಸ್ತವವಾಗಬೇಕಾದರೆ ಮತ್ತು ನಾಳೆಯ ಪೀಳಿಗೆಗಳು ಹೊಲಗಳಲ್ಲಿನ ಕೃಷಿಯತ್ತ ಆಕರ್ಷಿತರಾಗಬೇಕಾದರೆ - ಈ ಪ್ರಮುಖ ಕೃಷಿ ದೇಶಕ್ಕಾಗಿ ವ್ಯಾಪಕವಾದ ಮತ್ತು ಖಚಿತವಾದ ಯೋಜನೆ ಇರಬೇಕು. ಅಧಿಕ ಪ್ರಮಾಣದಲ್ಲಿ ಕೃಷಿ ಮಾಡಬಹುದಾದ ಕೃಷಿ ಭೂಮಿಯಲ್ಲಿ ನಾವು ಅಮೇರಿಕ ದೇಶದ ನಂತರದ ಸ್ಥಾನದಲ್ಲಿದ್ದರೂ, ವೈಜ್ಞಾನಿಕ ಬೆಳೆ ಯೋಜನೆಯ ಕೊರತೆಯು ನಮ್ಮ ದೇಶದ ರೈತರ ಜೀವನವನ್ನು ಹಾಳುಮಾಡುತ್ತಿದೆ.

ಭಾರತಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ಚೀನಾ, ದೇಶೀಯವಾಗಿ ತನ್ನ ಆಹಾರದ ಶೇಕಡಾ 95 ರಷ್ಟು ಪೂರೈಸಲು ಸಮರ್ಥವಾಗಿದೆ. ನಾವು ಇನ್ನೂ ದ್ವಿದಳ ಧಾನ್ಯಗಳು, ಅಡುಗೆ ಎಣ್ಣೆ ಮತ್ತು ಈರುಳ್ಳಿಯನ್ನು ಸಹ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ದೇಶದ ಈ ಸಂಕಟವನ್ನು ಹೋಗಲಾಡಿಸಲು, ಮಣ್ಣಿನ ಶಕ್ತಿ, ಸೂಕ್ತ ಬೆಳೆ, ನೀರಿನ ಕಾರ್ಯಸಾಧ್ಯತೆ ಮತ್ತು ಇತರ ಸ್ಥಳೀಯ ಸೌಲಭ್ಯಗಳನ್ನು ನಿರ್ಣಯಿಸಲು ದೇಶದ ವಿವಿಧ ಹವಾಮಾನ ವಲಯಗಳಲ್ಲಿ 125 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವ್ಯಾಪಕವಾದ 'ಮ್ಯಾಪಿಂಗ್' ನಡೆಸಬೇಕು.ಸರ್ಕಾರವು ದೇಶೀಯ ಅವಶ್ಯಕತೆಗಳು ಮತ್ತು ರಫ್ತು ಅವಕಾಶಗಳನ್ನು ಸೂಕ್ಷ್ಮವಾಗಿ ನಿರ್ಣಯಿಸಬೇಕು ಮತ್ತು ಆ ಮಟ್ಟಿಗೆ ವಿದೇಶಿ ದೇಶಗಳೊಂದಿಗೆ ಮೊದಲೇ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಇದು ರೈತರಿಗೆ ಅನುಕೂಲಕರವಾಗಿರಬೇಕು.

ಸಮಯಕ್ಕೆ ತಕ್ಕಂತೆ ಸೂಕ್ತ ಬೆಳೆಗಳನ್ನ ಬೆಳೆಸುವಂತಾಗಬೇಕು. ಚಂಡ ಮಾರುತ ಪ್ರವಾಹಗಳು, ಅತಿವೃಷ್ಟಿ, ಅನಾವೃಷ್ಟಿಗಳು, ಉಷ್ಣ ಮಾರುತಗಳು ... ಎಲ್ಲವೂ ರೈತರಿಗೆ ಸವಾಲಾಗಿದೆ. ಸಾಲದ ಲಭ್ಯತೆಯಿಂದ, ಉತ್ತಮ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು, ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ವಿಲೇವಾರಿ ಮಾಡುವುದು .... ಪ್ರತಿ ಹಂತವೂ ರೈತರಿಗೆ ಸವಾಲಾಗಿದೆ. ಆ ಅಸ್ಥಿರತೆಗಳಿಂದ ಸರ್ಕಾರವು ರೈತರಿಗೆ ನೆರವು ನೀಡಬೇಕು. ಭಾರತೀಯ ರೈತರು ಎಂದಿಗೂ ದುಡಿಮೆಗೆ ಹಿಂಜರಿಯುವುದಿಲ್ಲ. ಅವರ ಕಠಿಣ ಪರಿಶ್ರಮಕ್ಕೆ ಸರಿಯಾಗಿ ಪ್ರತಿಫಲ ದೊರೆಯುತ್ತದೆ ಎಂದು ಅವರಿಗೆ ಭರವಸೆ ನೀಡಬೇಕಾಗಿದೆ.

ಪ್ರೊಫೆಸರ್ ಸ್ವಾಮಿನಾಥನ್ ಹೇಳುವಂತೆ - ಎಲ್ಲಾ ಅಂಶಗಳನ್ನು ಪರಿಗಣಿಸಿ ಮತ್ತು ನಿಜವಾದ ಕೃಷಿ ವೆಚ್ಚವನ್ನು ಲೆಕ್ಕಹಾಕಿದ ನಂತರ ಮತ್ತು ಒಟ್ಟು ಕೃಷಿ ವೆಚ್ಚಕ್ಕೆ ಶೇಕಡಾ 50 ರಷ್ಟು ಹಣ ಸೇರಿಸಿ ನೀಡಿದಾಗ ಮಾತ್ರ ರೈತನಿಗೆ ನಿಜವಾದ ಬೆಂಬಲ ಬೆಲೆ ಸಿಕ್ಕಿದಂತಾಗುತ್ತದೆ. ಅಸಹಾಯಕ ರೈತರು ಪರ್ಯಾಯ ಮಾರ್ಗಗಳನ್ನು ಆಶ್ರಯಿಸುವುದನ್ನು ತಡೆಯದಿದ್ದರೆ ದೇಶವು ಆಹಾರ ಬಿಕ್ಕಟ್ಟಿನಂತಹ ಸಮಸ್ಯೆಗೆ ಸಿಲುಕುತ್ತದೆ. ಉಗ್ರಾಣ, ಮಾರುಕಟ್ಟೆ ಮತ್ತು ಅಗತ್ಯವಾದ ಮೂಲಸೌಕರ್ಯಗಳನ್ನು ಕೇಂದ್ರೀಕರಿಸಿ ಸಮಗ್ರ ಕೃಷಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾದಾಗ ಮಾತ್ರ, ರೈತ ಚೇತರಿಸಿಕೊಳ್ಳುತ್ತಾನೆ ಮತ್ತು ದೇಶವು ಶಾಂತಿಯುತವಾಗಿರುತ್ತದೆ.

ABOUT THE AUTHOR

...view details