ಕರ್ನಾಟಕ

karnataka

By

Published : Jan 1, 2021, 9:06 PM IST

ETV Bharat / bharat

ಮಾತುಕತೆ ವಿಫಲವಾದರೆ ಮಾಲ್​, ಪೆಟ್ರೋಲ್​ ಪಂಪ್​ ಬಂದ್ ಎಚ್ಚರಿಕೆ!

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್‌, ಹರಿಯಾಣ ಭಾಗದ ರೈತರು ನಡೆಸುತ್ತಿರುವ ಪ್ರತಿಭಟನೆ ತಿರುವು ಪಡೆದುಕೊಂಡು ಸಾಗುತ್ತಿದೆ.

farmer protest
farmer protest

ಚಂಡೀಗಡ (ಹರಿಯಾಣ):ಜನವರಿ 4ರಂದು ಕೇಂದ್ರ ಸರ್ಕಾರದೊಂದಿಗೆ ಆಯೋಜನೆಗೊಂಡಿರುವ ಮಹತ್ವದ ಮಾತುಕತೆಯಲ್ಲಿ ರೈತರ ಪರ ನಿಲುವು ತೆಗೆದುಕೊಳ್ಳಲು ಸರ್ಕಾರ ವಿಫಲವಾದರೆ ಶಾಪಿಂಗ್ ಮಾಲ್​, ಪೆಟ್ರೋಲ್​ ಪಂಪ್ ಬಂದ್ ಮಾಡಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.

ಓದಿ: ಧ್ವಂಸಗೊಂಡ ಹಿಂದೂ ದೇಗುಲವನ್ನು ಕಟ್ಟಿ ಕೊಡುತ್ತೇವೆ: ಪಾಕಿಸ್ತಾನ ಭರವಸೆ

ಐದನೇ ಸುತ್ತಿನ ಮಾತುಕತೆಗೆ ಈಗಾಗಲೇ ಕೇಂದ್ರ ಸರ್ಕಾರ ರೈತ ಸಂಘಟನೆಗಳಿಗೆ ಆಹ್ವಾನ ನೀಡಿದೆ. ಜನವರಿ 4ರಂದು ಈ ಸಭೆ ನಡೆಯಲಿದೆ. ಅಂದಿನ ಸಭೆ ವಿಫಲಗೊಂಡರೆ ನಮ್ಮ ಪ್ರತಿಭಟನೆ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ರೈತ ಮುಖಂಡ ವಿಕಾಸ್ ತಿಳಿಸಿದರು.​

ಹರಿಯಾಣ-ರಾಜಸ್ಥಾನ ಗಡಿಯಲ್ಲಿ ರೈತರು ಕಳೆದ 30 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ABOUT THE AUTHOR

...view details