ಪುಣೆ(ಮಹಾರಾಷ್ಟ್ರ): 87 ಕೋಟಿ ರೂಪಾಯಿ ಮುಖಬೆಲೆಯ ಅಮೆರಿಕದ ಡಾಲರ್ ಹಾಗೂ ಭಾರತದ ನಕಲಿ ಕರೆನ್ಸಿ ನೋಟುಗಳು ಪುಣೆಯ ಬಂಗಲೆಯೊಂದರಲ್ಲಿ ಪತ್ತೆಯಾಗಿವೆ. ಈ ಸಂಬಂಧ ಓರ್ವ ಸೇನಾ ಸಿಬ್ಬಂದಿ ಸೇರಿ ಆರು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
87 ಕೋಟಿ ರೂಪಾಯಿ ''ಮೌಲ್ಯ''ದ ನಕಲಿ ನೋಟುಗಳು ವಶಕ್ಕೆ: ಯೋಧ ಸೇರಿ ಆರು ಮಂದಿ ಬಂಧನ - ನಕಲಿ ಡಾಲರ್
ಕೋಟ್ಯಂತರ ರೂಪಾಯಿ ಮೌಲ್ಯದ ಅಮೆರಿಕದ ಡಾಲರ್ ಹಾಗೂ ಭಾರತದ ನಕಲಿ ಕರೆನ್ಸಿ ನೋಟುಗಳು ಪುಣೆಯ ವಿಮಾನ್ ನಗರದ ಬಂಗಲೆಯಲ್ಲಿ ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆ ಪೊಲೀಸ್ ಹಾಗೂ ಸೇನೆಯ ದಕ್ಷಿಣ ಕಮಾಂಡ್ ಇಂಟಲಿಜೆನ್ಸ್ ವಿಂಗ್ ಜಂಟಿಯಾಗಿ ವಿಮಾನ್ನಗರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು ಜಾಲವನ್ನು ಭೇದಿಸಿದೆ. ಈ ನಕಲಿ ನೋಟುಗಳಲ್ಲಿ ಭಾರತೀಯ ಮಕ್ಕಳ ಬ್ಯಾಂಕ್ನ ನಕಲಿ ಬಿಲ್ಗಳೂ ಕೂಡಾ ಪತ್ತೆಯಾಗಿವೆ. ನೋಟುಗಳ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಬಚ್ಚನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಇವರಲ್ಲಿ ಶೇಖ್ ಅಲೀಂ ಗುಲಾಬ್ ಖಾನ್ ಎಂಬಾತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇದರ ಜೊತೆಗೆ ಸುನಿಲ್ ಸರ್ದಾ, ರಿತೇಶ್ ರತ್ನಾಕರ್, ತುಫೆಲ್ ಅಹ್ಮದ್ ಮೊಹಮದ್ ಇಶಾಕ್ ಖಾನ್, ಅಬ್ದುಲ್ ಘನಿ ಖಾನ್ ಹಾಗೂ ಅಬ್ದುಲ್ ರೆಹಮಾನ್ ಅಬ್ದುಲ್ ಘನಿ ಖಾನ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.