ನವದೆಹಲಿ:ಫೇಸ್ಬುಕ್ನ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹೆಚ್ಚು ನಿಖರವಾಗಿ ಹಾಗೂ ಬಳಕೆದಾರರ ನೆರವಿಲ್ಲದೇ ತನ್ನ ಪೋಸ್ಟ್ಗಳಲ್ಲಿ ಸಮಾಜಬಾಹಿರ ವಿಷಯಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದು, ಈ ಪ್ರಕ್ರಿಯೆಗೆ ಪ್ರೊಆ್ಯಕ್ಟೀವ್ ಡಿಟೆಕ್ಷನ್ ಎಂದು ಹೆಸರಿಟ್ಟಿದೆ.
ಈ ಮೂಲಕ ಹಾನಿಕಾರಕ ಪೋಸ್ಟ್ಗಳನ್ನು ಶೋಧಿಸಲು ಹಾಗೂ ನಿಯಂತ್ರಿಸಲು ಕೃತಕ ಬುದ್ದಿಮತ್ತೆ ಫೇಸ್ಬುಕ್ಗೆ ಸಹಕಾರ ನೀಡಲಿದೆ.
ಆಟೋಮೇಷನ್ ಎಂಬುದು ಫೇಸ್ಬುಕ್ನ ಕೃತಕ ಬುದ್ದಿಮತ್ತೆಯ ಮತ್ತೊಂದು ಪ್ರಯೋಗವಾಗಿದ್ದು, ಯಾವ ಕ್ಷೇತ್ರದಲ್ಲಿ ಹೆಚ್ಚಾಗಿ ಕಾನೂನು ಉಲ್ಲಂಘನೆ ನಡೆಯುತ್ತಿದೆ ಎಂಬುದನ್ನು ಈ ಮೂಲಕ ಪತ್ತೆ ಹಚ್ಚಲು ಯೋಜನೆ ರೂಪಿಸಿದೆ.
ಈ ಎರಡೂ ವ್ಯವಸ್ಥೆಗಳು ಕೊರೊನಾ ಸಂದರ್ಭದಲ್ಲಿ ವದಂತಿಗಳನ್ನು ಹೆಚ್ಚಾಗಿ ಹಬ್ಬಿಸದೇ ಇರಲು ತುಂಬಾ ಪ್ರಾಮುಖ್ಯತೆ ವಹಿಸುತ್ತವೆ ಎಂದು ಫೇಸ್ಬುಕ್ ಸಂಸ್ಥೆಯ ಉತ್ಪನ್ನ ನಿರ್ವಹಣಾ ವಿಭಾಗದ ನಿರ್ದೇಶಕ ಜೆಫ್ ಕಿಂಗ್ ಭರವಸೆ ನೀಡಿದ್ದಾರೆ.
ಪ್ರೊಆ್ಯಕ್ಟೀವ್ ಡಿಟೆಕ್ಷನ್, ಆಟೋಮೇಷನ್ ಜೊತೆಗೆ ಪ್ರಯಾರಿಟೈಸೇಷನ್ ಅನ್ನು ಫೇಸ್ಬುಕ್ ಪರಿಚಯಿಸಿದ್ದು, ಕೆಲವು ಸಂಕೀರ್ಣ ವಿಷಯಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಈ ಕೃತಕ ಬುದ್ದಿಮತ್ತೆಗಿದ್ದು, ತನ್ನಲ್ಲಿ ಬರುವ ಎಲ್ಲಾ ವಿಷಯಗಳನ್ನು ಈ ಪ್ರಕ್ರಿಯೆಗಳ ಆಧಾರದ ಮೇಲೆ ಹಾನಿಕಾರಕವಾದುದು ಹಾಗೂ ಹಾನಿಕಾರಕವಲ್ಲದ್ದು ಎಂದು ನಿರ್ಧರಿಸುತ್ತದೆ.