ನವದೆಹಲಿ:ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಲೋಕಸಭೆಯಲ್ಲಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ್ ನೆಹರೂ ಕೂಡ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರರಿಗೆ ಭಾರತದ ಪೌರತ್ವ ನೀಡಬಯಸಿದ್ದರು ಎಂದು ಹೇಳಿದ್ದಾರೆ.
'ನೆಹರೂ ಕೂಡ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರರಿಗೆ ಭಾರತದ ಪೌರತ್ವ ನೀಡಬಯಸಿದ್ದರು' - ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಜವಾಹರಲಾಲ್ ನೆಹರೂ ಕೂಡ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರರಿಗೆ ಭಾರತದ ಪೌರತ್ವ ನೀಡಬಯಸಿದ್ದರು. ಹಾಗಾದರೆ ನೆಹರೂ ಕೋಮುವಾದಿಯಾಗಿದ್ದರೇ? ಅವರು ಹಿಂದೂ ರಾಷ್ಟ್ರವನ್ನು ರಚಿಸಲು ಬಯಸಿದ್ದರೇ? ಎಂದು ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಹಿಂದೂ ನಿರಾಶ್ರಿತರು ಹಾಗೂ ಮುಸ್ಲಿಂ ವಲಸಿಗರ ನಡುವಿನ ವ್ಯತ್ಯಾಸ ಕಂಡುಹಿಡಿಯುವ ಅವಶ್ಯಕತೆಯಿದೆ ಎಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ, ಅಸ್ಸೋಂನ ಮೊದಲ ಮುಖ್ಯಮಂತ್ರಿಯಾದ ಗೋಪಿನಾಥ್ ಬೋರ್ಡೋಲಾಯ್ಗೆ ಪತ್ರ ಬರೆದಿದ್ದರು. ಅಂದಿನ ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನದಲ್ಲಿನ (ಇಂದಿನ ಬಾಂಗ್ಲಾದೇಶ) ಅಲ್ಪಸಂಖ್ಯಾತರನ್ನು ರಕ್ಷಿಸಲು ನೆಹರೂ ಬಯಸಿದ್ದರು. ಹಾಗಾದರೆ ನೆಹರೂ ಕೋಮುವಾದಿಯಾಗಿದ್ದರೇ? ಅವರು ಹಿಂದೂರಾಷ್ಟ್ರವನ್ನು ರಚಿಸಲು ಬಯಸಿದ್ದರೇ? ಎಂದು ನಾನು ಕಾಂಗ್ರೆಸ್ ಅನ್ನು ಕೇಳಲು ಬಯಸುತ್ತೇನೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ಸಿಗರು ಮುಸ್ಲಿಂರನ್ನು ಮುಸ್ಲಿಂರಂತೆ ನೋಡುತ್ತಾರೆ, ಆದರೆ ಬಿಜೆಪಿಯವರು ಪ್ರತಿಯೊಬ್ಬರನ್ನೂ ಭಾರತೀಯನಂತೆ ಕಾಣುತ್ತಾರೆ. 'ಕ್ವಿಟ್ ಇಂಡಿಯಾ', 'ಜೈ ಹಿಂದ್' ಎಂಬ ಘೋಷಣೆಗಳನ್ನ ಮುಸ್ಲಿಂಮರು ನೀಡಿದ್ದರು ಎಂದು ಹೇಳಲಾಗುತ್ತದೆ. ಸಮಸ್ಯೆ ಏನೆಂದರೆ ಇಷ್ಟು ವರ್ಷಗಳ ನಂತರವೂ ಕಾಂಗ್ರೆಸ್ ದೃಷ್ಟಿಯಲ್ಲಿ ಇವರು ಮುಸ್ಲಿಂಮರು ಮಾತ್ರ. ಆದರೆ ನಮಗೆ ಅವರು ಭಾರತೀಯರು. ಅದು ಖಾನ್ ಆಗಿರಲಿ, ಅಬ್ದುಲ್ ಗಫರ್ ಖಾನ್, ಅಬ್ದುಲ್ ಹಮೀದ್ ಅಥವಾ ಅಬ್ದುಲ್ ಕಲಾಂ ಆಜಾದ್ ಆಗಿರಲಿ, ಇವರೆಲ್ಲರೂ ನಮಗೆ ಭಾರತೀಯರು ಎಂದು ಮೋದಿ ಲೋಕಸಭೆಯಲ್ಲಿ ಒತ್ತಿ ಹೇಳಿದರು.