ಶ್ರೀನಗರ: ಜಮ್ಮು- ಕಾಶ್ಮೀರದ ಆವಂತಿಪೋರ್ನಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ಮುಂದುವರಿಸಿದೆ. ಇಲ್ಲಿನ ಟ್ರಾಲ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ರಕ್ಷಣಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಜಮ್ಮು ಕಾಶ್ಮೀರದಲ್ಲಿ ಎನ್ಕೌಂಟರ್ ಸದ್ದು: ಜೈಷೆ ಕಮಾಂಡರ್ ಸೇರಿ ಇತರರು ಬಲೆಗೆ? - ಜಮ್ಮು ಕಾಶ್ಮೀರದಲ್ಲಿ ಎನ್ಕೌಂಟರ್
ಜಮ್ಮು- ಕಾಶ್ಮೀರದ ಆವಂತಿಪೋರ್ನಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ಮುಂದುವರಿಸಿದೆ. ಇಲ್ಲಿನ ಟ್ರಾಲ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ರಕ್ಷಣಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಜಮ್ಮು ಕಾಶ್ಮೀರದಲ್ಲಿ ಎನ್ಕೌಂಟರ್ ಸದ್ದು
ಸೇನಾ ಮೂಲಗಳ ಪ್ರಕಾರ ಸೇನಾಕಾರ್ಯಾಚರಣೆ ಜಾಗದಲ್ಲಿ ಜೈಷೆ ಮೊಹಮ್ಮದ್ ಸಂಘಟನೆ ಟಾಪ್ ಕಮಾಂಡರ್ ಕ್ವಾರಿ ಯಾಸಿರ್ ಸೇರಿದಂತೆ ಮೂವರು ಉಗ್ರರು ಅಡಗಿ ಕುಳಿತಿರುವ ಶಂಕೆ ಇದೆ. ಇವರ ಹೆಡೆಮುರಿ ಕಟ್ಟಲು ಸೇನೆ ಭರ್ಜರಿ ಕಾರ್ಯಾಚರಣೆ ಮುಂದುವರೆದಿದೆ.
ಆವಂತಿಪೋರ್ ಟ್ರಾಲ್ ನ ಹರಿ- ಪರಿ ಏರಿಯಾದಲ್ಲಿ ಉಗ್ರರು ಇರುವ ಸುಳಿವು ಪಡೆದ ಸೇನೆ ಈ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ, ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸೇನೆ ಪ್ರತಿ ದಾಳಿ ನಡೆಸಿ, ಪ್ರದೇಶವನ್ನು ಸುತ್ತುವರೆದಿದೆ.