ಕರ್ನಾಟಕ

karnataka

ETV Bharat / bharat

ಸಟ್ಲೆಜ್​ ನದಿಯಿಂದ ಭಾರೀ ಪ್ರಮಾಣದ ನೀರು ಬಿಟ್ಟ ಪಾಕ್​​... ಭಾರತದ ಗಡಿ ಗ್ರಾಮಗಳಲ್ಲಿ ನೆರೆ ಭೀತಿ! - ನೆರೆ ಭೀತಿ

ಸಟ್ಲೆಜ್​ ನದಿಯಿಂದ ಪಾಕಿಸ್ತಾವು ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿರುವುದರಿಂದ ಭಾರತದ ಗಡಿ ಪ್ರದೇಶದಲ್ಲಿ ಗ್ರಾಮಗಳಲ್ಲಿ ನೀರು ನುಗ್ಗಿ ಹಾನಿಗೀಡಾಗಿರುವ ಘಟನೆ ನಡೆದಿದೆ.

ಸಟ್ಲೆಜ್​ ನದಿ ನೀರು/Satluj broke

By

Published : Aug 26, 2019, 11:49 PM IST

ಫಿರೋಜ್‌ಪುರ:ಸಟ್ಲೆಜ್​ ನದಿಯ ನೀರನ್ನು ಪಾಕ್​​ ಹೆಚ್ಚಿನ ಪ್ರಮಾಣದಲ್ಲಿ ಹೊರ ಬಿಟ್ಟಿರುವ ಕಾರಣ ಭಾರತ-ಪಾಕ್​ ಗಡಿಯಲ್ಲಿರುವ ಪಂಜಾಬ್​ನ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉದ್ಭವವಾಗಿದೆ.

ಸಟ್ಲೆಜ್​ ನದಿಯಿಂದ ಭಾರೀ ಪ್ರಮಾಣದ ನೀರು ಬಿಟ್ಟ ಪಾಕ್

ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ 15-20 ಗ್ರಾಮದೊಳಗೆ ನೀರು ನುಗ್ಗದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಒಡ್ಡುಗಳು ಒಡೆದು ಹೋಗಿ, ಭಾರತದ ಗಡಿ ಪ್ರದೇಶದಲ್ಲಿನ ಹೊಲಗಳಿಗೆ ನೀರು ಹೋಗಿದೆ. ಈಗಾಗಲೇ ಗಡಿ ಗ್ರಾಮ ಟೆಂಡಿವಾಲ್​ದಲ್ಲಿ ನೀರು ನುಗ್ಗಿ ಅನೇಕ ಮನೆಗಳು ಜವಾವೃತಗೊಂಡಿದ್ದು, 200ಕ್ಕೂ ಹೆಚ್ಚು ಜನರನ್ನು ಬೇರೊಂದು ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ಸಟ್ಲೆಜ್​ ನದಿಯಿಂದ ಭಾರೀ ಪ್ರಮಾಣದ ನೀರು ಬಿಟ್ಟ ಪಾಕ್

ಈಗಾಗಲೇ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎನ್​ಡಿಆರ್​ಎಫ್​ ಹಾಗೂ ಸ್ಥಳೀಯ ಇಲಾಖೆ ಕ್ರಮ ಕೈಗೊಂಡಿದ್ದು, ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ.

ಸಟ್ಲೆಜ್​ ನದಿಯಿಂದ ಭಾರೀ ಪ್ರಮಾಣದ ನೀರು ಬಿಟ್ಟ ಪಾಕ್

ಪ್ರಮುಖವಾಗಿ ಕಸೂರ್​​ನಿಂದ ಬಿಡುಗಡೆಗೊಂಡಿರುವ ನೀರು ಫಿರೋಜ್‌ಪುರ ಜಿಲ್ಲೆಯ ಕೆಲವೊಂದು ಗ್ರಾಮಗಳಿಗೆ ನುಗ್ಗುವ ಸಾಧ್ಯತೆ ಇದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಪಂಜಾಬ್​ ಸಿಎಂ ಕೂಡ ಟ್ವೀಟ್​ ಮಾಡಿದ್ದು, ಈ ಸ್ಥಳಗಳಲ್ಲಿ ಉಂಟಾಗುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಲು ಕೇಂದ್ರ ಗೃಹ ಸಚಿವಾಲಯ ತಂಡವೊಂದನ್ನು ಕಳುಹಿಸಲು ನಿರ್ಧರಿಸಿದೆ.

ABOUT THE AUTHOR

...view details