ನವದೆಹಲಿ: ಚುನಾವಣಾ ಬಾಂಡ್‌ಗಳು ಈ ದಶಕದ ಅತಿದೊಡ್ಡ ಹಗರಣವೆಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟ್ವೀಟ್ ಮೂಲಕ ಹೇಳಿದ್ದಾರೆ. ಈ ಟ್ವೀಟ್ನ್ನು ಅವರ ಕುಟುಂಬಸ್ಥರು ಅವರ ಪರವಾಗಿ ಮಾಡಿದ್ದಾರೆ.
ಈ ಬಾಂಡ್ ಕುರಿತು ಬಿಜೆಪಿಗೆ ದೇಣಿಗೆ ನೀಡದವರಿಗೆ ತಿಳಿದಿರುತ್ತದೆ ಮತ್ತು ಯಾರಾದರೂ ಸಂಪೂರ್ಣವಾಗಿ ಕತ್ತಲೆಯಲ್ಲಿದ್ದರೆ, ಅದು ಭಾರತದ ಜನರು ಮಾತ್ರ ಎಂದು ಹೇಳುವ ಮೂಲಕ ಬಿಜೆಪಿಯನ್ನು ಟೀಕಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಚಿದಂಬರಂ ಸದ್ಯ ಜೈಲಿನಲ್ಲಿದ್ದಾರೆ. ಖರೀದಿದಾರರಿಗೆ ಹೇಗೆ ಬ್ಯಾಂಕ್ ಬಗ್ಗೆ ತಿಳಿದಿರುತ್ತದೆಯೋ ಹಾಗೆ ದಾನಿಗಳು ಸರ್ಕಾರದ ಬಗ್ಗೆ ತಿಳಿದಿರುತ್ತಾರೆ. ಬಿಜೆಪಿ ಬಗ್ಗೆ ಗೊತ್ತಿರುವವರು ಯಾರೂ ದೇಣಿಗೆಯನ್ನು ನೀಡುವುದಿಲ್ಲ. ಯಾರು ಕತ್ತಲಿನಲ್ಲಿರುತ್ತಾರೋ ಅಂತಹವರು ಮಾತ್ರ ದೇಣಿಗೆ ನೀಡುತ್ತಾರೆ ಎಂದಿದ್ದಾರೆ ಚಿದಂಬರಂ.
ಸದ್ಯ ಚುನಾವಣಾ ಬಾಂಡ್ಗಳನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಿಕೊಳ್ಳಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಲೇ ಬರುತ್ತಿದೆ. ಆದ್ರೆ ಬಿಜೆಪಿ ಮಾತ್ರ ಇದರಿಂದ ಕಪ್ಪು ಹಣವನ್ನು ತಡೆಯುತ್ತಿದ್ದೇವೆ ಎಂದು ಹೇಳುತ್ತಿದೆ ಆರೋಪಿಸಿದ್ದಾರೆ.