ಕರ್ನಾಟಕ

karnataka

ETV Bharat / bharat

10 ವರ್ಷದ ಮುಗ್ಧೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದುರುಳ - ರೇಪ್​ ಕೇಸ್​ ಲೆಟೆಸ್ಟ್ ನ್ಯೂಸ್

ಬುಧವಾರ ಸಂಜೆ 10 ವರ್ಷದ ಬಾಲಕಿ ಮೇಲೆ 67 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದು, ಗುರುವಾರ ಆತನನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Elderly man held for sexually assaulting 10-year-old girl in Andhra
10 ವರ್ಷದ ಮುಗ್ದೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 67ರ ಕಾಮುಕ!

By

Published : Feb 7, 2020, 8:03 AM IST

Updated : Feb 7, 2020, 8:11 AM IST

ಮಚಿಲಿಪಟ್ಟಣಂ: 10 ವರ್ಷದ ಬಾಲಕಿ ಮೇಲೆ 67 ವರ್ಷದ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದು, ಆತನನ್ನು ಬಂಧಿಸುವಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬುಧವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಗುರುವಾರ ವರದಿಯಾಗಿದೆ. ದೌರ್ಜನ್ಯ ಎಸೆಗಿದ ಆರೋಪಿ ಪಿ. ಬ್ರಹ್ಮಯ್ಯ ಎಂಬಾತ ಬಾಲಕಿಯ ನೆರೆಹೊರೆಯವನಾಗಿದ್ದು, ಆಕೆಯನ್ನು ಮನೆಗೆ ಕರೆಸಿಕೊಂಡು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಕಾಳಿಗಿಂದಿ ಸಬ್ ಇನ್ಸ್‌ಪೆಕ್ಟರ್ ಎ.ಜನಾರ್ದನ್​ ಮಾಹಿತಿ ನೀಡಿದ್ದಾರೆ.

ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಯನ್ನು ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆಕೆಯ ಸ್ಥಿತಿ ಸುಧಾರಿಸಿದೆ. ಬಾಲಕಿ ಪೋಷಕರ ದೂರಿನ ಮೇಲೆ ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Feb 7, 2020, 8:11 AM IST

ABOUT THE AUTHOR

...view details