ಕರ್ನಾಟಕ

karnataka

ಇಂಡಿಯನ್​ ಗ್ರ್ಯಾಂಡ್​ ಪ್ರಿಕ್ಸ್: 100 ಮೀ.ಓಟದಲ್ಲಿ ಚಿನ್ನ ಮುಡಿಗೇರಿಸಿಕೊಂಡ ದ್ಯುತಿ

By

Published : Aug 17, 2019, 4:48 AM IST

ಇಂಡಿಯನ್​ ಗ್ರ್ಯಾಂಡ್​  ಪ್ರಿಕ್ಸ್​​​ನಲ್ಲಿ ದ್ಯುತಿ ಚಂದ್​ ಮತ್ತೊಂದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

Dutee Chand

ಪಟಿಯಾಲಾ:ಇಂಡಿಯನ್​ ಗ್ರ್ಯಾಂಡ್​ ಪ್ರಿಕ್ಸ್​​​ನಲ್ಲಿ ದ್ಯುತಿ ಚಂದ್​ ಮತ್ತೊಂದು ಚಿನ್ನದ ಪದ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿನ ನೇತಾಜಿ ಸುಭಾಷ್​ ನ್ಯಾಷನಲ್​ ಇನ್ಸಿಟ್ಯೂಟ್​ ಆಫ್​ ಸ್ಪೋಟ್ಸ್​ನಲ್ಲಿ ನಡೆದ 100 ಮೀಟರ್​ ಓಟದ ಸ್ಪರ್ಧೆಯಲ್ಲಿ ದ್ಯುತಿ 11. 42 ಸೆಕೆಂಡ್​ನಲ್ಲಿ ಗುರಿ ತಲುಪುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದರು.

ಭಾರತೀಯ ಕ್ರೀಡಾ ತಾರೆ ದ್ಯುತಿ ಚಂದ್

ತಮಿಳುನಾಡಿನ ಅರ್ಚನಾ ಸುಶೀಂತ್ರನ್​ 11.53 ಸೆಕೆಂಡ್​ನಲ್ಲಿ ಗುರಿ ತಲುಪುವ ಮೂಲಕ ದ್ಯುತಿಗೆ ತೀವ್ರ ಪೈಪೋಟಿ ನೀಡಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಹಾಗೆಯೇ ಮನ್ವೀರ್​ ಕೌರ್​ ಎಂಬುವರು 12.28 ಸೆಕೆಂಡ್​ನಲ್ಲಿ ಗುರಿ ಕ್ರಮಿಸಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ABOUT THE AUTHOR

...view details