ಕರ್ನಾಟಕ

karnataka

By

Published : May 28, 2019, 8:24 PM IST

ETV Bharat / bharat

ಬಟ್ಟೆ, ಸಾಕ್ಸ್​ನಲ್ಲಿ11 ಕೆಜಿ ಚಿನ್ನ: ಕೋಟ್ಯಂತರ ರೂ. ಬಚ್ಚಿಟ್ಟಿದ್ದ ಮಹಿಳೆ ಸೆರೆ

ದುಬೈನಿಂದ ಇಂದು ಬೆಳಗ್ಗೆ ವಿಮಾನನಿಲ್ದಾಣಕ್ಕೆ ಬಂದಿಳಿದ ಮಹಿಳೆ ಬಳಿ 11.1 ಕೆಜಿ ವಿದೇಶಿ ಮಾರ್ಕ್​ ಇರುವ ಚಿನ್ನ ಹಾಗೂ ಆಕೆ ತಂಗಿದ್ದ ಹೋಟೇಲ್​ನಲ್ಲಿ ಸಿಂಗಪೂರ ಹಾಗೂ ಅರಬ್​ ದೇಶದ 4,25,312 ದಿನಾರ್​ ಪತ್ತೆಯಾಗಿದೆ.

ಹೈದರಾಬಾದ್

ಹೈದರಾಬಾದ್​: ಕೆಜಿಗಟ್ಟಲೆ ಚಿನ್ನ ಹಾಗೂ ಕೋಟ್ಯಂತರ ರೂ. ಇಟ್ಟುಕೊಂಡಿದ್ದ ಮಹಿಳೆಯನ್ನು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ)ದ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ದುಬೈನಿಂದ ಇಂದು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆ ಬಳಿ 11.1 ಕೆಜಿ ವಿದೇಶಿ ಮಾರ್ಕ್​ ಇರುವ ಚಿನ್ನ ಹಾಗೂ ಆಕೆ ತಂಗಿದ್ದ ಹೋಟೇಲ್​ನಲ್ಲಿ ಸಿಂಗಪೂರ​ ಹಾಗೂ ಅರಬ್​ ದೇಶದ 4,25,312 ದಿನಾರ್​ ಪತ್ತೆಯಾಗಿದೆ. ಅಧಿಕಾರಿಗಳು ವಶಪಡಿಸಿಕೊಂಡಿರುವ ಚಿನ್ನದ ಮೊತ್ತ 3,63,52,500 ರೂ ಹಾಗೂ ವಿದೇಶಿ ಕರೆನ್ಸಿಯ ಭಾರತೀಯ ಮೊತ್ತ 1,50,64,012 ರೂ ಆಗಿದೆ ಎಂದು ತಿಳಿದುಬಂದಿದೆ.

ಇಷ್ಟೊಂದು ಮೊತ್ತದ ಚಿನ್ನವನ್ನು ಬಟ್ಟೆ ಹಾಗೂ ಸಾಕ್ಸ್​ನಲ್ಲಿ ಈ ಮಹಿಳೆ ಇಟ್ಟುಕೊಂಡಿದ್ದಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಈಕೆ ಮಾಲು ಸಮೇತ ಸಿಕ್ಕಿಬಿದ್ದಿದ್ದಾಳೆ. ಇನ್ನು ಈಕೆ ಮೂರು ತಿಂಗಳಿಂದ ತಂಗಿದ್ದ ಪಂಚತಾರಾ ಹೋಟೇಲ್​ನಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ.

ಕಸ್ಟಮ್ ಆಕ್ಟ್​ 1962ರಂತೆ ಮಹಿಳೆಯಿಂದ ನಗ, ನಾಣ್ಯ ವಶಪಡಿಸಿಕೊಂಡಿರುವ ಅಧಿಕಾರಿಗಳು, ಆಕೆಯನ್ನು ಜೈಲಿಗೆ ತಳ್ಳಿದ್ದಾರೆ. ಈ ಸಂಬಂದ ಹೆಚ್ಚುವರಿ ತನಿಖೆ ನಡೆಯುತ್ತಿದೆ.

For All Latest Updates

TAGGED:

ABOUT THE AUTHOR

...view details