ಕರ್ನಾಟಕ

karnataka

ETV Bharat / bharat

ಇಸ್ರೋ ಕನಸಿನ ಗಗನಯಾನಕ್ಕೆ ಯಾತ್ರಿಗಳು ಸಿದ್ಧ... ಬೆಂಗಳೂರಲ್ಲಿ ನಡೆಯಿತು ಪೈಲಟ್​ಗಳ ಪರೀಕ್ಷೆ

ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಇಸ್ರೋ ಸಿದ್ಧತೆ ನಡೆಸಿದ್ದು, ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಳ್ಳಲಿರುವ ಗಗನಯಾತ್ರಿಗಳ ದೈಹಿಕ, ಮಾನಸಿಕ ಪರೀಕ್ಷೆಗಳನ್ನು ಬೆಂಗಳೂರಿನ ಬಾಹ್ಯಕಾಶ ವೈದ್ಯಕೀಯ ಕೇಂದ್ರದಲ್ಲಿ ಯಶಸ್ವಿಯಾಗಿ ಮುಗಿಸಲಾಗಿದೆ.

By

Published : Sep 6, 2019, 2:08 PM IST

ಪೈಲಟ್​ಗಳ ಪರೀಕ್ಷೆ

ಹೈದರಾಬಾದ್: ಪ್ರತಿಷ್ಟಿತ ಚಂದ್ರಯಾನ2 ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಯಶಸ್ವಿಯಾಗಿ ಮುಗಿಸುವ ವಿಶ್ವಾಸದಲ್ಲಿದೆ. ಇದರ ಮಧ್ಯೆಯೇ ಭವಿಷ್ಯದ ಯೋಜನೆಗೆ ಇಸ್ರೋ ಈಗಲೇ ತಯಾರಿ ಮಾಡಿಕೊಳ್ಳುತ್ತಿದೆ.

ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಇಸ್ರೋ ಸಿದ್ಧತೆ ನಡೆಸಿದ್ದು, ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಳ್ಳಲಿರುವ ಗಗನಯಾತ್ರಿಗಳ ದೈಹಿಕ, ಮಾನಸಿಕ ಪರೀಕ್ಷೆಗಳನ್ನು ಬೆಂಗಳೂರಿನ ಬಾಹ್ಯಕಾಶ ವೈದ್ಯಕೀಯ ಕೇಂದ್ರದಲ್ಲಿ ಯಶಸ್ವಿಯಾಗಿ ಮುಗಿಸಲಾಗಿದೆ. ಭಾರತೀಯ ವಾಯು ದಳದ ಪರಿಣದ ಪೈಲಟ್​ಗಳು ಈ ಕೇಂದ್ರದಲ್ಲಿ ಪರೀಕ್ಷೆಗೆ ಒಳಗಾಗಿದ್ದು, ಇದನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ ಎಂದು ಐಎಎಫ್​ ಹೇಳಿದೆ.

ಈ ವಿಷಯವನ್ನು ಟ್ವಿಟರ್​ನಲ್ಲಿ ತಿಳಿಸಿರುವ ಐಎಎಫ್​, ಆಯ್ಕೆಯಾದ ಪೈಲಟ್​ಗಳನ್ನು ತೀವ್ರತರವಾದ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೇಡಿಯೋಲಜಿ, ಲ್ಯಾಬ್​ ಮೊದಲಾದ ದೈಹಿಕ ಮತ್ತು ಮಾನಸಿಕ ಟೆಸ್ಟ್​ಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ. ಆಯ್ಕೆಯಾಗಿರುವ ಪೈಲಟ್​ಗಳು ರಷ್ಯಾದಲ್ಲಿ ಗಗನಯಾತ್ರೆ ಕುರಿತ ಪ್ರಾಥಮಿಕ ತರಬೇತಿಗಳನ್ನು ಪಡೆಯಲಿದ್ದಾರೆ. ಈ ಮುಂಚೆ ಮೂರು ಮಂದಿ ಮಾತ್ರ ಆಯ್ಕೆಯಾಗಲಿದ್ದಾರೆ ಎಂದು ಪ್ರಧಾನಿ ಮೋದಿ ಘೊಷಿಸಿದ್ದರು. ಆದರೆ, ನಾಲ್ಕು ಮಂದಿ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಸಿವನ್​ ತಿಳಿಸಿದ್ದರು. 2020 ಹಾಗೂ 2021ರಲ್ಲಿ ಗಗನಯಾನ ಯೋಜನೆ ಕೈಗೊಳ್ಳಲು ಇಸ್ರೋ ತೀರ್ಮಾನಿಸಿದ್ದರು. ಗಗನಯಾತ್ರಿಕರು ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಬೇಕಾಗುತ್ತದೆ.

ABOUT THE AUTHOR

...view details