ತಮ್ಲುಕ್(ಪಶ್ಚಿಮ ಬಂಗಾಳ):ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ್ದಾರೆ.
ದೀದಿಗೆ ದೇವರೆಂದರೆ ಆಗಲ್ಲ: ಜೈ ಶ್ರಿರಾಮ ಅಂದ್ರೆ ಜೈಲಿಗೆ ಹಾಕ್ತಾರೆ, ಮೋದಿ ವಾಗ್ದಾಳಿ - undefined
ಒಡಿಶಾ ಭೇಟಿ ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಿದ ಪ್ರಧಾನಿ ಮೋದಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ದೀದಿ ವರ್ತನೆ ವಿರುದ್ಧ ಹರಿಹಾಯ್ದರು.
ಮಮತಾ ಬ್ಯಾನರ್ಜಿ ಎಷ್ಟು ಹತಾಶರಾಗಿದ್ದಾರೆ ಎಂದರೆ ಅವರು ದೇವರ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ ಮತ್ತು ದೇವರ ಬಗ್ಗೆ ಏನನ್ನೂ ಕೇಳೊದಕ್ಕೆ ಅವರಿಗೆ ಇಷ್ಟವಿಲ್ಲ. ಜೈ ಶ್ರೀರಾಮ ಎಂದು ಘೋಷಣೆ ಕೂಗಿದರೆ ಜೈಲಿಗೆ ಹಾಕುತ್ತಿದ್ದಾರೆ ಎಂದು ದೀದಿ ವಿರುದ್ಧ ಕಿಡಿಕಾರಿದರು
ಈ ಹಿಂದೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಮಮತಾ ಬ್ಯಾನರ್ಜಿ ತೆರಳುವಾಗ ಮಾರ್ಗ ಮಧ್ಯದಲ್ಲಿ ಕೆಲವರು 'ಜೈ ಶ್ರೀರಾಮ' ಎಂದು ಘೋಷಣೆ ಕೂಗಿದ್ದರು. ಇದರಿಂದ ಕೋಪಗೊಂಡ ದೀದಿ ತಕ್ಷಣವೇ ಕಾರಿನಿಂದ ಇಳಿದಿದ್ದರು. ಈವೇಳೆ ಘೋಷಣೆ ಕೂಗಿದವರು ಅಲ್ಲಿಂದ ಓಡಿ ಹೋಗಿದ್ದರು. ಈ ಘಟನೆಯಿಂದ ಕೆಂಡಾಮಂಡಲರಾದ ಮಮತಾ ಬ್ಯಾನರ್ಜಿ ಬಿಜೆಪಿ ಕಾರ್ಯಕರ್ತರೇ ಏಕೆ ಓಡುವಿರಿ, ನನ್ನ ಎದುರಿಸಿ ಎಂದು ಸವಾಲು ಹಾಕಿದ್ದರು.