ಬಾಲಾಸೋರ್ (ಒಡಿಶಾ): ಸಮರ ಟ್ಯಾಂಕ್ಗಳನ್ನು ಧ್ವಂಸ ಮಾಡಬಲ್ಲ ನಾಗ್ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ಮತ್ತೊಮ್ಮೆ ಯಶಸ್ವಿಯಾಗಿದೆ. ಒಡಿಶಾದ ಬಾಲಸೋರ್ನಲ್ಲಿ ನಾಗ್ ಕ್ಷಿಪಣಿ ಪರೀಕ್ಷೆ ನಡೆದಿದ್ದು, ಈ ಮಿಸೈಲ್ ನಿಗದಿತ ಗುರಿ ತಲುಪಿದೆ.
ಧ್ರುವಾಸ್ತ್ರಗಳ ಅವತಾರ ತಾಳಿದ ನಾಗ್ ಕ್ಷಿಪಣಿಗಳ ಪ್ರಯೋಗ ಯಶಸ್ವಿ: ವಿಡಿಯೋ
ನಾಗ್ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ಮತ್ತೊಮ್ಮೆ ಯಶಸ್ವಿಯಾಗಿದ್ದು, ಒಡಿಶಾದ ಬಾಲಸೋರ್ನಲ್ಲಿ ನಾಗ್ ಕ್ಷಿಪಣಿ ಪರೀಕ್ಷೆ ನಡೆದಿದೆ.
ಜುಲೈ 15 ಮತ್ತು 16ರಂದು ಈ ಪ್ರಯೋಗಗಳು ನಡೆದಿವೆ. ಯುದ್ಧ ಭೂಮಿಯಲ್ಲಿ ವೈರಿ ಪಡೆಗಳಿಗೆ ಹೆಲಿಕಾಪ್ಟರ್ನಿಂದಲೇ ಗುರಿಯಿಟ್ಟು ಛಿದ್ರಗೊಳಿಸುವ ಸಾಮರ್ಥ್ಯ ಈ ನಾಗ್ ಕ್ಷಿಪಣಿಗಿದೆ. ಭೂಮಿಯಿಂದಲೂ ದಾಳಿ ನಡೆಸುವ ಬಲವನ್ನು ಇದು ಹೊಂದಿದೆ. ಈ ಸಲದ ಪರೀಕ್ಷೆಯಲ್ಲಿ ಹೆಲಿಕಾಪ್ಟರ್ ಇಲ್ಲದೆ ಭೂಮಿಯಿಂದಲೇ ಈ ಕ್ಷಿಪಣಿ ನಿಗದಿತ ಗುರಿಯನ್ನು ಛಿದ್ರಗೊಳಿಸಿದೆ.
ನೇರ ದಿಕ್ಕಿನಲ್ಲಿ ಮತ್ತು ಎತ್ತರಕ್ಕೆ ಚಿಮ್ಮಿ ಅಲ್ಲಿಂದ ಗುರಿಯನ್ನು ಭೇದಿಸಿದೆ. ಈ ಕ್ಷಿಪಣಿಗಳು ಅತ್ಯಾಧುನಿಕವಾಗಿದ್ದು, ಹಗಲು-ರಾತ್ರಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ. ಈ ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್ಡಿಒ ಅಭಿವೃದ್ಧಿ ಪಡಿಸಿದೆ. ನಾಗ್ ಕ್ಷಿಪಣಿಗೆ ಈಗ ಮರುನಾಮಕರಣ ಮಾಡಲಾಗಿದ್ದು 'ಧ್ರುವಾಸ್ತ್ರ' ಎಂದು ಕರೆಯಲಾಗುತ್ತದೆ.