ರಾಂಚಿ :ಐಪಿಎಲ್ನಲ್ಲಿ ಚೆನ್ನೈ ತಂಡದ ನಾಯಕ ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ 16 ವರ್ಷದ ವಿಕೃತ ಮನಸ್ಸಿನ ಬಾಲಕನನ್ನು ಪೊಲೀಸರು ಗುಜರಾತ್ನ ಕಚ್ ಬಳಿಯ ಮುಂದ್ರಾದಲ್ಲಿ ಬಂಧಿಸಿದ್ದರು. ಈಗ ಆ ಆರೋಪಿಯನ್ನು ಜಾರ್ಖಂಡ್ ಪೊಲೀಸರು ಗುಜರಾತ್ನಿಂದ ಕರೆತಂದಿದ್ದಾರೆ.
ಧೋನಿ ಮಗಳಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ರಾಂಚಿಗೆ ಕರೆತಂದ ಪೊಲೀಸರು - ಧೋನಿ ಮಗಳು
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಗುಜರಾತ್ನಿಂದ ಜಾರ್ಖಂಡ್ಗೆ ಕರೆತರಲಾಗಿದೆ.
ಸಂಗ್ರಹ ಚಿತ್ರಧೋನಿ ಮಗಳಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ರಾಂಚಿಗೆ ಕರೆತಂದ ಪೊಲೀಸರು
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುತ್ತಿಲ್ಲವೆಂದು ಅವರ ಮಗಳಿಗೆ ಆರೋಪಿ ಬೆದರಿಕೆ ಹಾಕಿದ್ದ. ಆ ಬಳಿಕ ಜಾರ್ಖಂಡ್ನ ರಾಂಚಿ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗೆ ಬಲೆ ಬೀಸಿದ್ದರು. ಅಷ್ಟರಲ್ಲೇ ಆರೋಪಿ ಗುಜರಾತ್ನ ಕಚ್ನಲ್ಲಿ ಬಂಧಿಸಲಾಗಿತ್ತು. ಈಗ ಆ ಆರೋಪಿಯನ್ನು ಪೊಲೀಸರು ಗುಜರಾತ್ನಿಂದ ರಾಂಚಿಗೆ ಕರೆತಂದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಗುಜರಾತ್ನಿಂದ ರಾಂಚಿಗೆ ಕರೆತರಲಾಗಿದೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ರಾಂಚಿ ಎಸ್ಪಿ ನೌಶಾದ್ ಆಲಂ ಹೇಳಿದ್ದಾರೆ.