ತಿರುವನಂತಪುರಂ:ಆರು ತಿಂಗಳ ನಂತರ ಭಕ್ತರಿಗೆ ಮತ್ತೆ ಶಬರಿಮಲೆ ಅಯ್ಯಪ್ಪನ ದರ್ಶನ ಭಾಗ್ಯ ದೊರೆತಿದೆ. ಕೋವಿಡ್ ಹಿನ್ನೆಲೆ ಮಾರ್ಚ್ 24ರ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಇದೇ ಮೊದಲ ಬಾರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ದೊರೆತಿದ್ದು, ತಿಂಗಳಲ್ಲಿ 5 ದಿನಗಳ ಕಾಲ ನಡೆಯಲಿರುವ ಪೂಜಾ ಕೈಂಕರ್ಯ ಶನಿವಾರದಿಂದ ಪ್ರಾರಂಭವಾಗಲಿದೆ.
ಶುಕ್ರವಾರ ಸಂಜೆ 5 ಗಂಟೆಗೆ ದೇವಾಲಯ ತೆರೆಯಲಿದೆ. ಆದರೆ ಮಲಯಾಳಂ ತಿಂಗಳ ಮೊದಲ ದಿನವಾದ ''ಥುಲಂ''ನಂದು ಅಂದರೆ ಶನಿವಾರ ಬೆಳಗ್ಗೆ 5 ಗಂಟೆಯಿಂದ ಭಕ್ತರ ಪ್ರವೇಶಕ್ಕೆ ಅವಕಾಶವಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ(ಟಿಡಿಬಿ) ಮೂಲಗಳು ತಿಳಿಸಿವೆ.