ಕರ್ನಾಟಕ

karnataka

ETV Bharat / bharat

ನವ ಭಾರತ ನಿರ್ಮಾಣ ಸರ್ಕಾರದ ಧ್ಯೇಯ: ಸಂಸತ್​ನಲ್ಲಿ ರಾಷ್ಟ್ರಪತಿಗಳ ಘೋಷಣೆ

2022ರ ವೇಳೆಗೆ ನವ ಭಾರತ ನಿರ್ಮಾಣದತ್ತ ಸರ್ಕಾರ ಹೆಜ್ಜೆ ಇಡುತ್ತಿದೆ. ಅದಕ್ಕಾಗಿ ರೈತರು, ಯೋಧರು, ಉದ್ಯಮ, ಶ್ರಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುವ ಹಾಗೂ ಮುನ್ನಡೆಸುವ ಕಾರ್ಯದಲ್ಲಿ ತೊಡಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಹೇಳಿದರು.

Ram Nath

By

Published : Jun 20, 2019, 11:39 AM IST

ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು, ನವ ಭಾರತ ನಿರ್ಮಾಣವನ್ನು ಪ್ರತಿಪಾದಿಸಿದರು.

2022ರ ವೇಳೆಗೆ ನವ ಭಾರತ ನಿರ್ಮಾಣದತ್ತ ಸರ್ಕಾರ ಹೆಜ್ಜೆ ಇಡುತ್ತಿದೆ. ಅದಕ್ಕಾಗಿ ರೈತರು, ಯೋಧರು, ಉದ್ಯಮ, ಶ್ರಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುವ ಹಾಗೂ ಮುನ್ನಡೆಸುವ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿದರು.

ನಾರಾಯಣ ಗುರು ಅವರ ತತ್ವದಂತೆ ಭೇದಭಾವ ರಹಿತ ಸಮಾಜ ನಿರ್ಮಾಣ, ಜನರಲ್ಲಿ ಸಹೋದರತ್ವ ತರುವ ಅಗತ್ಯವಿದೆ. ಈ ಮೂಲಕ ರವೀಂದ್ರನಾಥ ಠಾಗೋರರ ಆದರ್ಶ ಭಾರತವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸರ್ಕಾರ ಜನರ ಜೊತೆಯಲ್ಲಿದೆ ಎಂಬ ಭಾವನೆ ಎಲ್ಲರಿಗೂ ಮೂಡಬೇಕು. ಮೂಲಭೂತ ಸೌಕರ್ಯಗಳು ಜನರಿಗೆ ವೇಗವಾಗಿ ದೊರೆತಿವೆ. ಎಲ್ಲರ ಸಶಕ್ತೀಕರಣವನ್ನೇ ಸರ್ಕಾರ ಮುಖ್ಯ ಉದ್ದೇಶವಾಗಿಟ್ಟುಕೊಂಡು, ಸಶಕ್ತ, ಸುರಕ್ಷಿತ ಭಾರತ ನಿರ್ಮಾಣ ಸ್ಥಾಪನೆಗೆ ಸದಾ ಶ್ರಮಿಸುತ್ತಿದೆ ಎಂದರು.

ಭಾಷಣದ ಆರಂಭದಲ್ಲಿ ನೂತನ ಸಂಸತ್ ಸದಸ್ಯರು ಹಾಗೂ ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದರು. ಅಧಿಕ ಸಂಖ್ಯೆಯಲ್ಲಿ ಮತದಾನ ಮಾಡಿದ ಮಹಿಳಾ ಮತದಾರರು, ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದ ಮಹಿಳಾ ಸಂಸದರ ಗುಣಗಾನ ಮಾಡಿದರು.

ಜನರು ಉತ್ತಮ ಮತದಾನ ಮೂಲಕ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರು, ಖ್ಯಾತನಾಮರು ಸಂಸತ್ತಿನಲ್ಲಿ ಉಪಸ್ಥಿತರಿದ್ದೀರಿ. ನಿಮ್ಮ ಜ್ಞಾನದಿಂದ ಸಂಸತ್ತಿನ ವಿಚಾರಗಳು ಸಮೃದ್ಧವಾಗಬೇಕು. ಮೂರು ದಶಕಗಳ ನಂತರ ಸಂಪೂರ್ಣ ಬಹುಮತದ ಜನಾದೇಶ ದೊರೆತಿದೆ. ಸಬ್ ಕಾ ಸಾಥ್​, ಸಬ್ ಕಾ ವಿಕಾಸ್​, ಸಬ್ ಕಾ ವಿಶ್ವಾಸ್ ತತ್ವದಂತೆ ನವ ಭಾರತ ನಿರ್ಮಾಣಕ್ಕೆ ಕಾರ್ಯ ಶುರುವಾಗಿದೆ ಎಂದು ಹೇಳಿದರು.

ಸರ್ಕಾರದ ವಿವಿಧ ಯೋಜನೆಗಳು, ಸಾಧನೆಗಳ ಬಗ್ಗೆ ರಾಷ್ಟ್ರಪತಿಗಳು ಮಾತನಾಡಿದರು.

ABOUT THE AUTHOR

...view details