ಕರ್ನಾಟಕ

karnataka

By

Published : Jun 28, 2020, 2:54 PM IST

ETV Bharat / bharat

ದೆಹಲಿಯಲ್ಲಿ 417 ಕಂಟೈನ್‌ಮೆಂಟ್‌ ಝೋನ್: ಇಲ್ಲಿಯವರೆಗೆ 2.45 ಲಕ್ಷ ಜನರಿಗೆ ಸ್ಕ್ರೀನಿಂಗ್

ರಾಷ್ಟ್ರ ರಾಜಧಾನಿಯಲ್ಲಿ ಕಂಟೈನ್‌ಮೆಂಟ್​ ಝೋನ್​ಗಳ ಮರು ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ.

Number of COVID-19 containment zones now 417
ದೆಹಲಿಯಲ್ಲಿ 417 ಕಂಟೈನ್ಮೆಂಟ್ ಝೋನ್

ನವದೆಹಲಿ: ಮರು ಮ್ಯಾಪಿಂಗ್ ನಂತರ ದೆಹಲಿಯಲ್ಲಿ ಕೋವಿಡ್ ನಿರ್ಬಂಧಿತ ವಲಯಗಳ ಸಂಖ್ಯೆ 417ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 2.45 ಲಕ್ಷ ಜನರನ್ನು ಸ್ಕ್ರೀನಿಂಗ್​ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಕೇಂದ್ರದ ನಿರ್ದೇಶನಗಳನ್ನು ಅನುಸರಿಸಿ ರಿ- ಮ್ಯಾಪಿಂಗ್​ ಕೆಲಸವನ್ನು ಇನ್ನೂ ಪೂರ್ಣಗೊಳಿಸದ ಕಾರಣ ನಿರ್ಬಂಧಿತ ಪ್ರದೇಶಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಮರು ಮ್ಯಾಪಿಂಗ್​ಗೂ ಮೊದಲು ನಗರದಲ್ಲಿ ಈ ವಲಯಗಳ ಸಂಖ್ಯೆ 280 ಆಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಗರದಾದ್ಯಂತ ಮನೆ-ಮನೆ ಸಮೀಕ್ಷೆಯಲ್ಲಿ ಸುಮಾರು 2 ಲಕ್ಷ ಜನರನ್ನು ಪರೀಕ್ಷಿಸಿದ್ದೇವೆ. ಅಲ್ಲದೆ, ಕಂಟೈನ್‌ಮೆಂಟ್ ಝೋನ್​ನಲ್ಲಿ 45,000 ಜನರನ್ನು ಪರೀಕ್ಷಿಸಲಾಗಿದೆ. ಪ್ರತಿ ಮನೆಯನ್ನೂ ಪರೀಕ್ಷಿಸುವ ಪ್ರಕ್ರಿಯೆಯನ್ನು ಜುಲೈ 6 ರೊಳಗೆ ಪೂರ್ಣಗೊಳಿಸಬೇಕಾಗಿದೆ ಎಂದಿದ್ದಾರೆ.

2011ರ ಜನಗಣತಿಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 34.35 ಲಕ್ಷಕ್ಕೂ ಹೆಚ್ಚು ಕುಟುಂಬಗಳಿದ್ದು, ನಗರ ಪ್ರದೇಶಗಳಲ್ಲಿ 33.56 ಲಕ್ಷ ಮತ್ತು ಗ್ರಾಮೀಣ ಪ್ರದೇಶದಲ್ಲಿ 79,574 ಕುಟುಂಬಗಳಿವೆ. ದೆಹಲಿ ಸರ್ಕಾರ ಹೊರಡಿಸಿದ ಕೋವಿಡ್-19 ಯೋಜನೆಯ ಪ್ರಕಾರ, ಈ ವಲಯಗಳ ಮರು-ಮ್ಯಾಪಿಂಗ್ ಅನ್ನು ಜೂನ್ 30 ರೊಳಗೆ ಪೂರ್ಣಗೊಳಿಸಬೇಕಾಗಿದೆ.

ABOUT THE AUTHOR

...view details