ಕರ್ನಾಟಕ

karnataka

ETV Bharat / bharat

ಚೀನಾ ವಿರುದ್ಧ ಎರಡು ಯುದ್ಧ: ಎರಡರಲ್ಲೂ ನಾವು ಗೆಲುವು ಸಾಧಿಸಲಿದ್ದೇವೆ ಎಂದ ಕೇಜ್ರಿವಾಲ್​!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಕೊರೊನಾ ಸ್ಥಿತಿಗತಿ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ನಾವು ಚೀನಾದೊಂದಿಗೆ ಸದ್ಯ ಎರಡು ಯುದ್ಧ ನಡೆಸಿದ್ದೇವೆ ಎಂದಿದ್ದಾರೆ.

CM Kejriwal
CM Kejriwal

By

Published : Jun 22, 2020, 3:04 PM IST

ನವದೆಹಲಿ: ಭಾರತ ಸದ್ಯ ಚೀನಾ ವಿರುದ್ಧ ಎರಡು ಯುದ್ಧ ನಡೆಸುತ್ತಿದ್ದು, ಎರಡರಲ್ಲೂ ನಾವು ಗೆಲುವು ಸಾಧಿಸಲಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

ಲಡಾಖ್​ನಲ್ಲಿ ಚೀನಾದೊಂದಿಗೆ ಗಡಿ ಸಮಸ್ಯೆ ಹಾಗೂ ದೇಶದೊಳಗೆ ಕೊರೊನಾ ವೈರಸ್​​ ವಿರುದ್ಧ ನಾವು ಯುದ್ಧ ನಡೆಸಿದ್ದು, ಎಲ್ಲರೂ ಒಗ್ಗಟ್ಟಿನಿಂದ ಗೆಲುವು ಸಾಧಿಸಲಿದ್ದೇವೆ ಎಂದಿರುವ ಕೇಜ್ರಿವಾಲ್​, ಗಡಿಯಲ್ಲಿ ನಮ್ಮ 20 ವೀರ ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಇದರಿಂದ ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಅರವಿಂದ್​ ಕೇಜ್ರಿವಾಲ್​ ಸುದ್ಧಿಗೋಷ್ಠಿ

ನಮ್ಮ ದೇಶದ ಜನರು ವೈದ್ಯರು ಹಾಗೂ ಸೈನಿಕರೊಂದಿಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಮಾಡಲ್ಲ ಎಂದಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್​ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿರುವ ಕೇಜ್ರಿವಾಲ್​, ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಈಗಾಗಲೇ ಅನೇಕ ಸರಣಿ ಸಭೆ ನಡೆಸಲಾಗಿದೆ ಎಂದಿದ್ದಾರೆ.

ದೆಹಲಿಯಲ್ಲಿ ಸದ್ಯ ಟೆಸ್ಟಿಂಗ್​ ನಡೆಸುವ ಪ್ರಮಾಣ 5 ಸಾವಿರದಿಂದ 18 ಸಾವಿರಕ್ಕೆ ಏರಿಕೆಯಾಗಿದ್ದು, ಸದ್ಯ ದೆಹಲಿಯಲ್ಲಿರುವ ಎಲ್ಲರಿಗೂ ಕೊರೊನಾ ವೈರಸ್​ ಟೆಸ್ಟ್​ ಮಾಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸದ್ಯ ದೆಹಲಿಯಲ್ಲಿ 59,746ಕ್ಕೂ ಹೆಚ್ಚು ಕೋವಿಡ್​ ಪ್ರಕರಣಗಳಿದ್ದು, 12,000 ಜನರು ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದು, ಕೋವಿಡ್​ ಸೋಂಕಿನಿಂದ ಸಾವನ್ನಪ್ಪುತ್ತಿರುವ ಪ್ರತಿಯೊಬ್ಬರ ಮಾಹಿತಿ ಕೇಂದ್ರಕ್ಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details