ಕರ್ನಾಟಕ

karnataka

ETV Bharat / bharat

ಯುಪಿಎಸ್‌ಸಿ ಪರೀಕ್ಷೆ: ಎಎಸ್‌ಐ ಮಗಳಿಗೆ 6ನೇ ಸ್ಥಾನ

ಯುಪಿಎಸ್‌ಸಿ ಪರೀಕ್ಷೆ 2019ರ ಫಲಿತಾಂಶವನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಮಂಗಳವಾರ ಪ್ರಕಟಿಸಿದೆ. ದ್ವಾರಕಾ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಎಸ್‌ಐ ಹುದ್ದೆಯಲ್ಲಿರುವ ರಾಜ್‌ಕುಮಾರ್ ಯಾದವ್ ಅವರ ಪುತ್ರಿ ವಿಶಾಖಾ ಯಾದವ್ 6ನೇ ಸ್ಥಾನ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

upsc
upsc

By

Published : Aug 5, 2020, 9:43 AM IST

ನವದೆಹಲಿ: ಯುಪಿಎಸ್‌ಸಿ ಪರೀಕ್ಷೆ 2019ರ ಫಲಿತಾಂಶವನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಮಂಗಳವಾರ ಪ್ರಕಟಿಸಿದೆ. ಒಟ್ಟು 829 ಅಭ್ಯರ್ಥಿಗಳು ಈ ಬಾರಿ ಆಯ್ಕೆ ಆಗಿದ್ದಾರೆ. ಅದರಲ್ಲಿ 6ನೇ ಸ್ಥಾನ ಗಳಿಸಿರುವ ವಿಶಾಖಾ ಯಾದವ್ ಕೂಡಾ ಒಬ್ಬರು. ಇವರ ತಂದೆ ದ್ವಾರಕಾ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಎಸ್‌ಐ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 6ನೇ ಸ್ಥಾನ ಪಡೆದ ವಿಶಾಖಾ ಯಾದವ್

ಮೂರನೇ ಪ್ರಯತ್ನದಲ್ಲಿ ಪಾಸ್

ದ್ವಾರಕಾ ಜಿಲ್ಲೆಯ ಕಿರಣ್ ಗಾರ್ಡನ್‌ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿರುವ ವಿಶಾಖಾ ಯಾದವ್, ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್​​ಸಿ ಪರೀಕ್ಷೆಯನ್ನ ಯಶಸ್ವಿಯಾಗಿ ಪಾಸ್​ ಮಾಡಿ ತಂದೆ- ತಾಯಿಗೆ ಹೆಮ್ಮೆ ತಂದಿದ್ದಾರೆ. ಇದರಲ್ಲಿ ಅವರು ಎರಡು ಬಾರಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು ಎನ್ನುವುದು ಗಮನಿಸಬೇಕಾದ ಅಂಶ. ಇಂತಹ ಹಿನ್ನಡೆಯ ನಡುವೆಯೂ ಛಲ ಬಿಡದ ಅವರು ಕಠಿಣ ಪರಿಶ್ರಮದ ಮೂಲಕ ಮೂರನೇ ಪ್ರಯತ್ನದಲ್ಲಿ ಅವರು ಪರೀಕ್ಷೆಯನ್ನ ಅವರು ಯಶಸ್ವಿಯಾಗಿ ಪೂರೈಸಿದ್ದಾರೆ.

ದ್ವಾರಕಾ ಡಿಸಿಪಿ ಕಚೇರಿಯಲ್ಲಿ ತಂದೆ

ವಿಶಾಖಾ ಅವರ ತಂದೆ ರಾಜ್‌ಕುಮಾರ್ ಅವರು 1986ರಲ್ಲಿ ದೆಹಲಿ ಪೊಲೀಸ್​ ಕಾನ್‌ಸ್ಟೆಬಲ್ ಆಗಿ ಕೆಲಸಕ್ಕೆ ಸೇರಿದ್ದರು. ಪ್ರಸ್ತುತ ಅವರನ್ನು ದ್ವಾರಕಾ ಡಿಸಿಪಿ ಕಚೇರಿಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವರ್ಷದ ಯುಪಿಎಸ್​​​​ಸಿ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ಅಗ್ರಸ್ಥಾನ ಪಡೆದಿದ್ದಾರೆ. ಜತಿನ್ ಕಿಶೋರ್ ಎರಡನೇ ಸ್ಥಾನ ಹಾಗೂ ಪ್ರತಿಭಾ ವರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.

ಡಿಸಿಪಿ ಆಂಟೊ ಅಲ್ಫೋನ್ಸ್​ರಿಂದ ಗೌರವ ಸಲ್ಲಿಕೆ

ವಿಶಾಖಾ ಯಾದವ್ ಸಾಧನೆಯ ಬಳಿಕ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೇ ವೇಳೆ, ದೆಹಲಿಯ ದ್ವಾರಕಾ ಜಿಲ್ಲೆಯ ಡಿಸಿಪಿ ಆಂಟೊ ಅಲ್ಫೋನ್ಸ್ ಅವರು ವಿಶಾಖಾ ಮತ್ತು ತಂದೆ ರಾಜ್‌ಕುಮಾರ್ ಯಾದವ್ ಅವರನ್ನು ತಮ್ಮ ಕಚೇರಿಗೆ ಕರೆದು ಗೌರವಿಸಿದ್ದಾರೆ. ವಿಶಾಖಾ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details