ಝುಂಝನು(ರಾಜಸ್ಥಾನ): ಜಿಲ್ಲೆಯ ಮನೆಯೊಂದಕ್ಕೆ ನುಗ್ಗಿದ ನಾಲ್ವರು ಬಂದೂಕುಧಾರಿ ದುಷ್ಕರ್ಮಿಗಳು 50 ಲಕ್ಷ ರೂ. ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಮ್ಮೀರಿ ರಸ್ತೆ ರಾಯಕಾ ಕಾಲನಿಯ ಮನೆಯೊಂದರಲ್ಲಿ ಗುರುವಾರ ರಾತ್ರಿ ನಾಲ್ವರು ಮಹಿಳೆಯರು ಹಾಗೂ ಓರ್ವ ಮಗು ಮಾತ್ರ ಇದ್ದರು. ಇದೇ ಸಮಯ ಸಾಧಿಸಿದ ಕಳ್ಳರು ಮನೆಗೆ ನುಗ್ಗಿ ಮನೆಯ ಸದಸ್ಯರಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ನಂತರ ಎಲ್ಲರನ್ನೂ ಸ್ಟೋರ್ ರೂಂ ನಲ್ಲಿ ಕೂಡಿ ಹಾಕಿ, ಮನೆಯಲ್ಲಿದ್ದ 50 ಲಕ್ಷ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಬಂದೂಕು ತೋರಿಸಿ 50 ಲಕ್ಷ ರೂ ಲೂಟಿಗೈದ ದುಷ್ಕರ್ಮಿಗಳು - ಅಪರಾಧ ಸುದ್ದಿ
ಮನೆಯಲ್ಲಿ ಮಹಿಳೆಯರು ಮಾತ್ರ ಇರುವುದನ್ನು ಗಮನಿಸಿದ ನಾಲ್ವರು ಬಂದೂಕುಧಾರಿ ಕಳ್ಳರು, ಮಧ್ಯರಾತ್ರಿ ಮನೆಗೆ ನುಗ್ಗಿ 50 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.
decoits-loot-50-lakh-cash
ಗುರುವಾರ ಮಧ್ಯರಾತ್ರಿ ಸುಮಾರು ಎರಡು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಳ್ಳರು ಯಾವ ರೀತಿ ಮನೆಯೊಳಗೆ ನುಗ್ಗಿದರು ಎಂಬುದು ಮನೆಯಲ್ಲಿದ್ದ ಮಹಿಳೆಯರಿಗೂ ತಿಳಿದಿಲ್ಲ. ಕಳ್ಳರು ಹೋದ ನಂತರವೂ ಮಹಿಳೆಯರು ಸ್ಟೋರ್ ರೂಂ ನಿಂದ ಹೊರಬರಲಾಗದೆ ಸುಮಾರು 4 ಗಂಟೆ ಒಳಗೇ ಸಿಲುಕಿ ಒದ್ದಾಡಿದ್ದಾರೆ. ನಂತರ ಹೇಗೋ ಮಾಡಿ ಬಾಗಿಲು ಮುರಿದು ಹೊರಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಮನೆಗೆ ನುಗ್ಗಿದ್ದ ನಾಲ್ವರೂ ಕಳ್ಳರು 20 ರಿಂದ 25 ವಯಸ್ಸಿನವರಾಗಿದ್ದು, ಎಲ್ಲರೂ ಮುಖ ಮುಚ್ಚಿಕೊಂಡಿದ್ದರು. ಅವರ ಭಾಷೆಯಿಂದ ಅವರು ಸ್ಥಳೀಯರಾಗಿರಲಿಲ್ಲವೆಂದು ಮಹಿಳೆಯರು ತಿಳಿಸಿದ್ದಾರೆ.