ಕೊರೊನಾ ವೈರಸ್ ತಂದ ಅವಾಂತರಗಳು ಅಷ್ಟಿಷ್ಟಲ್ಲ. ಕೊರೊನಾ ಲಾಕ್ಡೌನ್ಗೆ ಅದೆಷ್ಟು ವಲಸೆ ಕಾರ್ಮಿಕರು ಜೀವತೆತ್ತಿದ್ದಾರೆ. ಇಲ್ಲಿದೆ ಅದೆಲ್ಲದರ ಸಂಪೂರ್ಣ ಚಿತ್ರಣ.
16.05.2020:ಉತ್ತರ ಪ್ರದೇಶದ ಔರಿಯಾ ಜಿಲ್ಲೆ ಬಳಿ ನಡೆದ 2 ಟ್ರಕ್ಗಳ ಮುಖಾಮುಖಿ ಡಿಕ್ಕಿಯಲ್ಲಿ 21 ವಲಸೆ ಕಾರ್ಮಿಕರ ದುರ್ಮರಣ, 7 ಕಾರ್ಮಿಕರು ಗಾಯಾಳು
14.05.2020: ಮಧ್ಯಪ್ರದೇಶದ ಗುಣ ಬಳಿ ನಡೆದ ಬಸ್ ಹಾಗೂ ಟ್ರಕ್ ಅಪಘಾತದಲ್ಲಿ 8 ಕಾರ್ಮಿಕರ ಸಾವು, 54 ಕಾರ್ಮಿಕರಿಗೆ ಗಾಯ
13.05.2020: ಉತ್ತರ ಪ್ರದೇಶದ ಮುಜಾಫರ್ಪುರ್- ಸಹರನ್ಪುರ್ ಹೈವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹರಿಯಾಣದಿಂದ -ಬಿಹಾರ್ಗೆ ಕಾಲ್ನಡಿಗೆಯಲ್ಲಿ ಹೊರಟ 6 ವಲಸೆ ಕಾರ್ಮಿಕರ ಸಾವು, 16 ಜನರಿಗೆ ಗಾಯ
09.05.2020: ಮಧ್ಯಪ್ರದೇಶದ ನರಸಿಂಗ್ಪುರ್ ಬಳಿ ಸಂಭವಿಸಿದ ಅಪಘಾತದಲ್ಲಿ ಟ್ರಕ್ನಲ್ಲಿದ್ದ 5 ಕಾರ್ಮಿಕರ ದುರ್ಮರಣ, 13 ಕಾರ್ಮಿಕರಿಗೆ ಗಾಯ
08.05.2020: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಜಲ್ನಾ ಬಳಿ ಗೂಡ್ಸ್ ರೈಲು ಹರಿದು ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ಮಧ್ಯಪ್ರದೇಶ ಮೂಲದ 15 ವಲಸೆ ಕಾರ್ಮಿಕರ ಸಾವು.
05.05.2020: ಉತ್ತರಪ್ರದೇಶದ ಮಥುರಾ ಬಳಿ ಆಟೋ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಧ್ಯಪ್ರದೇಶದ ಚತಪೂರ್ ಜಿಲ್ಲೆಯ7 ಕಾರ್ಮಿಕರು ಸಾವು, ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯ
03.05.2020: ಒಡಿಶಾಗೆ ಮರಳುತ್ತಿದ್ದ ವೇಳೆ ನಡೆದ 2 ಪ್ರತ್ಯೇಕ ಬಸ್ ಅಪಘಾತಗಳಲ್ಲಿ ವಲಸೆ ಕಾರ್ಮಿಕರು ಗಾಯಗೊಂಡ್ರು. ಗುಜರಾತ್ನಿಂದ 50 ಒಡಿಶಾ ಕಾರ್ಮಿಕರನ್ನ ಹೊತ್ತೊಯ್ಯುತ್ತಿದ್ದ ಬಸ್ ನಾಗ್ಪುರ - ಅಮರಾವತಿ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ 3 ಕಾರ್ಮಿಕರು ಗಾಯಗೊಂಡ್ರು. ಅದೇ ರೀತಿ ಇನ್ನೂ 50 ಜನರನ್ನು ಸೂರತ್ನ ಗಂಜಾಮ್ನಿಂದ ಕರೆದೊಯ್ಯುತ್ತಿದ್ದ ಬಸ್ ಕಳಿಂಗ ಘಾಟಿ ಬಳಿ ಅಪಘಾತಕ್ಕೊಳಗಾಗಿ 3 ಕಾರ್ಮಿಕರು ಗಾಯಗೊಂಡ್ರು.
01.05.2020: ದೆಹಲಿಯಿಂದ ಬಿಹಾರ್ಗೆ ಸೈಕಲ್ನಲ್ಲಿ ಹೊರಟಿದ್ದ 35 ವರ್ಷದ ಕಾರ್ಮಿನೊಬ್ಬ ದಾರಿಮಧ್ಯೆ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಗೊಂಡು ಅಸುನೀಗಿದ.
29.04.2020 : ಸೈಕಲ್ನಲ್ಲಿ 1640 ಕಿ.ಮೀ. ಮ್ಯಾರಾಥಾನ್ ಹೊರಟ್ಟಿದ್ದ 11 ವಲಸೆ ಕಾರ್ಮಿಕರ ಗುಂಪಿನಲ್ಲಿ ಮಹಾರಾಷ್ಟ್ರ-ಮಧ್ಯಪ್ರದೇಶ ಗಡಿ ಬಳಿ ಸೈಕಲ್ನಿಂದ ಬಿದ್ದು ಸಾವು.
28.04.2020:ಮಹಾರಾಷ್ಟ್ರ- ಮಧ್ಯಪ್ರದೇಶ ಗಡಿಯ ಚೆಕ್ಪೋಸ್ಟ್ನಿಂದ ತಪ್ಪಿಸಿಕೊಳ್ಳಲು ಹೋಗಿ ಬರ್ವಾನಿ ಜಿಲ್ಲೆಯ 45 ವರ್ಷದ ಅಸ್ತಮಾ ಪೀಡಿತ ವಲಸೆ ಕಾರ್ಮಿಕ ಸಾವು.
21.04.2020 : ಪೂರ್ವ ಉತ್ತರಪ್ರದೇಶ ಭಾಗದಿಂದ ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕ ಮಹಾರಾಷ್ಟ್ರ-ಮಧ್ಯಪ್ರದೇಶ ಗಡಿ ದಾಟುವ ವೇಳೆ ದುರ್ಮರಣ