ಪುರಿ (ಒಡಿಶಾ):ಕೊರೊನಾ ಭೀತಿಯಿಂದಾಗಿ ವ್ಯಕ್ತಿಯ ಮೃತದೇಹವನ್ನು ಸೈಕಲ್ ಗಾಡಿಯಲ್ಲಿ ಸಾಗಿಸಿದ ಘಟನೆ ಪುರಿ ಜಿಲ್ಲೆಯ ಕೊನಾರ್ಕ್ ಬಳಿ ಮಂಕದ್ ಗೋರ್ಡಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ನಿವಾಸಿ 27 ವರ್ಷದ ವ್ಯಕ್ತಿಯೋರ್ವ 10 ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಗೋಪ ಪ್ರದೇಶದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪ ಫಲಕಾರಿಯಾಗದ ಪರಿಣಾಮ ಇವರು ಸಾವನ್ನಪ್ಪಿದ್ದರು.
ಸೈಕಲ್ ಗಾಡಿಯಲ್ಲಿ ಶವವನ್ನು ಸಾಗಿಸುತ್ತಿರುವುದು. ಆದರೆ ಕೊರೊನಾ ಭೀತಿಯಿಂದ ಗ್ರಾಮಸ್ಥರು ವ್ಯಕ್ತಿಯ ಮೃತದೇಹವನ್ನು ಮುಟ್ಟಲು ಭಯಪಟ್ಟಿದ್ದಾರೆ. ಕೊನೆಗೆ ಕೊನಾರ್ಕ್ನ ನೋಟಿಫೈಡ್ ಏರಿಯಾ ಕೌನ್ಸಿಲ್ನ ಇಬ್ಬರು ಸಿಬ್ಬಂದಿ ಹಾಗೂ ಇಬ್ಬರು ಮೃತನ ಸಂಬಂಧಿಗಳು ಪಿಪಿಇ ಕಿಟ್ ಧರಿಸಿ, ಸೈಕಲ್ ಗಾಡಿಯ ಮೂಲಕ ಶವವನ್ನು ಸ್ಮಶಾನ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಸೈಕಲ್ ಗಾಡಿಯ ಮೂಲಕ ಶವವನ್ನು ಸಾಗಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.