ಕರ್ನಾಟಕ

karnataka

ETV Bharat / bharat

ಸೈಬರ್​ ಕ್ರೈಂ - ಯುವತಿ ಹೆಸರಲ್ಲಿ ಚಾಟಿಂಗ್​:  91 ಸಾವಿರ ಪಂಗನಾಮ

ನಿನ್ನೆ ಆನ್​ಲೈನ್​ ಮದ್ಯ ಮಾರಾಟ ಮಾಡಿದ ಯುವಕರಿಬ್ಬರಿಂದ ₹ 3 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ.

Cybercrime
ಸೈಬರ್​ ಕ್ರೈಂ

By

Published : Apr 21, 2020, 3:31 PM IST

ಹೈದರಾಬಾದ್​:ಸೈಬರ್​ ಅಪರಾಧ ಪ್ರಕರಣ ದಿನೆ ದಿನೇ ಏರುತ್ತಲೇ ಇದೆ. ಲಾಕ್​​ಡೌನ್​ ಸಂದರ್ಭದಲ್ಲಂತೂ ಅದು ಮತ್ತಷ್ಟು ವೇಗ ಪಡೆದಿವೆ.

ಲಾಕ್​ಡೌನ್​ನಿಂದಾಗಿ ಎಲ್ಲ ಸೇವೆಯನ್ನೂ ಬಂದ್​ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಆನ್​ಲೈನ್​ ವಂಚಕರು, ಯುವತಿ ಹೆಸರಲ್ಲಿ ಚಾಟಿಂಗ್​ ಮಾಡುವ ಮೂಲಕ ನಂಬಿಸಿ ಬ್ಯಾಂಕ್​​​ ಖಾತೆಯಿಂದ ಲಕ್ಷ, ಲಕ್ಷ ರೂ. ಎಗರಿಸುತ್ತಾರೆ.

ಈಗ ಮತ್ತೊಂದು ರೀತಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ನಿಮಗೆ ಹುಡುಗಿ ಬೇಕಾದರೆ ದಯವಿಟ್ಟು ಈ ಸಂಖ್ಯೆಗೆ ವಾಟ್ಸ್​​ಆ್ಯಪ್​​​​​ಗೆ ಸಂದೇಶ ಕಳುಹಿಸಿ. ಗಂಟೆಯಲ್ಲಿ ಹುಡುಗಿ ನಿಮ್ಮ ಮನೆಯಲ್ಲಿರುತ್ತಾಳೆ ಎಂಬ ಸಂದೇಶಗಳು ಹೈದರಾಬಾದ್​​​ನಲ್ಲಿ ಹರಿದಾಡುತ್ತಿವೆ.

ಅಂತಹ ಸಂದೇಶಕ್ಕೆ ಪ್ರತಿಕ್ರಿಯಿಸಿದ ಹೈದರಾಬಾದ್‌ನ ಬೋಲರಾಮ್ ಪ್ರದೇಶದ ವ್ಯಕ್ತಿಯೊಬ್ಬ ಬಾಲಕಿ ಎಂದುಕೊಂಡು ಚಾಟ್ ಮಾಡುತ್ತಿದ್ದ. ವಂಚಕರು ಕಳುಹಿಸಿದ ಬ್ಯಾಂಕ್​ ಖಾತೆಗೆ ಈತ 91,000 ಜಮೆ ಮಾಡಿದ್ದಾನೆ. ಹಣ ಖಾತೆಗೆ ಬಿದ್ದ ಮರುಕ್ಷಣದಲ್ಲಿ ಮೊಬೈಲ್​ ನಂಬರ್ಸ್ ಬ್ಲಾಕ್​ ಮಾಡಿದ್ದಾರೆ. ಮೋಸ ಹೋದ ಯುವಕ ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ದಾಖಲಿಸಿದ್ದಾನೆ.

ABOUT THE AUTHOR

...view details