ನವದೆಹಲಿ:ಓರ್ವ ಉದ್ಯೋಗಿಯಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಗಡಿ ಭದ್ರತಾ ಪಡೆಯ ಮುಖ್ಯ ಕಚೇರಿಯ ಎರಡು ಅಂತಸ್ತುಗಳನ್ನು ಆರೋಗ್ಯಾಧಿಕಾರಿಗಳು ಸೀಲ್ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಉದ್ಯೋಗಿಯಲ್ಲಿ ಪತ್ತೆಯಾದ ಸೋಂಕು, ಬಿಎಸ್ಎಫ್ ಮುಖ್ಯ ಕಚೇರಿಯ ಎರಡು ಅಂತಸ್ತುಗಳಿಗೆ ಸೀಲ್ - ಸಿಆರ್ಪಿಎಫ್
ಬಿಎಸ್ಎಫ್ ಯೋಧರಲ್ಲಿ ಸೋಂಕು ಕಾಣಿಸಿಕೊಂಡಿದ್ದ ಬೆನ್ನಲ್ಲೇ, ದೆಹಲಿಯ ಬಿಎಸ್ಎಫ್ ಮುಖ್ಯ ಕಚೇರಿಯ ಉದ್ಯೋಗಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕಚೇರಿಯನ್ನು ಸೀಲ್ ಮಾಡಲಾಗಿದೆ.
ಬಿಎಸ್ಎಫ್
ಇಲ್ಲಿನ ಲೋದಿ ರಸ್ತೆಯ ಸಿಜಿಓ ಕಾಂಪ್ಲೆಕ್ಸ್ನಲ್ಲಿರುವ 8 ಮಹಡಿಯ ಬಿಎಸ್ಎಫ್ ಮುಖ್ಯ ಕಚೇರಿಯಿದೆ. ಇದೇ ಕಟ್ಟಡದಲ್ಲಿ ಸಿಆರ್ಪಿಎಫ್ ಮುಖ್ಯಕಚೇರಿಯೂ ಕೂಡಾ ಇದ್ದು ಅಲ್ಲಿನ ಇಬ್ಬರು ಉದ್ಯೋಗಿಗಳಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ಸಿಆರ್ಪಿಎಫ್ ಕಚೇರಿಯನ್ನೂ ಕೂಡಾ ಬಂದ್ ಮಾಡಲಾಗಿತ್ತು.
ಸದ್ಯಕ್ಕೆ ಕಟ್ಟಡಕ್ಕೆ ಸ್ಯಾನಿಟೈಸಿಂಗ್ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನು ಶೋಧಿಸುವ ಕೆಲಸ ನಡೆಯುತ್ತಿದೆ. ಕೆಲ ದಿನಗಳ ನಂತರ ಮಿತ ನೌಕರರ ಸಹಾಯದಿಂದ ಕಚೇರಿ ನಡೆಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.