ನವದೆಹಲಿ:ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪೂರ್ವ ಮತ್ತು ಉತ್ತರ ಭಾರತದ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳನ್ನು ಶನಿವಾರ ಮಧ್ಯರಾತ್ರಿಯಿಂದ ಮುಚ್ಚಲು ಗೃಹ ಸಚಿವಾಲಯ ನಿರ್ಧರಿಸಿದೆ. ಆದಾಗ್ಯೂ 20 ಅಂತಾರಾಷ್ಟ್ರೀಯ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ಗಳು (ಐಸಿಪಿಗಳು) ಕಾರ್ಯನಿರ್ವಹಿಸುತ್ತಲೇ ಇರುತ್ತವೆ.
ಮಧ್ಯರಾತ್ರಿಯಿಂದ ನಿರ್ಬಂಧವನ್ನು ವಿಧಿಸುವ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆಯ ವಿದೇಶಿ ವಿಭಾಗವು ತೆಗೆದುಕೊಂಡಿದ್ದು, ಶುಕ್ರವಾರ ಜ್ಞಾಪಕ ಪತ್ರ ಹೊರಡಿಸಿದೆ.
"ಭಾರತ-ಬಾಂಗ್ಲಾದೇಶ ಗಡಿ, ಭಾರತ-ನೇಪಾಳ ಗಡಿ, ಭಾರತ-ಭೂತಾನ್ ಗಡಿ ಮತ್ತು ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ಪ್ರಯಾಣಿಕರ ಸಂಚಾರವನ್ನು ಮಾರ್ಚ್ 15 ಮಧ್ಯರಾತ್ರಿ 12 ರಿಂದ ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.