ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶದ ಸಾದತ್​ ಕ್ಷೇತ್ರದ ಮತ ಎಣಿಕೆ ವೇಳೆ ಕೈಕೊಟ್ಟ ಇವಿಎಂ

ಉಪಚುನಾವಣೆಯ ಮತ ಎಣಿಕೆ ವೇಳೆ ಉತ್ತರ ಪ್ರದೇಶದ ಸಾದತ್​ ಕ್ಷೇತ್ರದಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.

naugawan sadat assembly by election
ಉತ್ತರ ಪ್ರದೇಶದಲ್ಲಿ ಮತ ಎಣಿಕೆ ವೇಳೆ ಕೈಕೊಟ್ಟ ಇವಿಎಂ

By

Published : Nov 10, 2020, 12:37 PM IST

ಅಮ್ರೋಹಾ : ಉತ್ತರ ಪ್ರದೇಶದ ನೌಂಗಾವ ಸಾದತ್​ ಕ್ಷೇತ್ರದ ಮತ ಎಣಿಕೆ ವೇಳೆ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.

ವಿವಿಧ ಕಾರಣಗಳಿಂದ ತೆರವಾದ ಉತ್ತರ ಪ್ರದೇಶದ 7 ವಿಧಾಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಅಮ್ರೋಹಾ ಸಾದತ್​ ಸೀಟ್​ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬೆಳಗ್ಗೆ 8 ಗಂಟೆಯಿಂದ 14 ಟೇಬಲ್​ಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಈ ನಡುವೆ ಟೇಬಲ್​ ಸಂಖ್ಯೆ 3 ರ ಇವಿಎಂ 11760 ತಾಂತ್ರಿಕ ದೋಷ ಕಂಡು ಬಂದಿದೆ.

ಏಳು ವಿಧಾನಸಭಾ ಸ್ಥಾನಗಳಿಗೆ ಒಟ್ಟು 88 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಎಲ್ಲರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ABOUT THE AUTHOR

...view details