ಕೊಚ್ಚಿ: ಕೊವಿಡ್-19 ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಮದ್ಯದಂಗಡಿಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಆನ್ಲೈನಲ್ಲಿ ಮದ್ಯ ಮಾರಾಟಕ್ಕೆ ಕೋರ್ಟ್‌ಗೆ ಮೊರೆ: ಅರ್ಜಿದಾರನಿಗೆ ಬಿತ್ತು ₹50 ಸಾವಿರ ದಂಡ
ಮದ್ಯದಂಗಡಿಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿ ಅರ್ಜಿದಾರನಿಗೆ ದಂಡ ವಿಧಿಸಿದೆ.
ಅಲುವಾ ಮೂಲದ ಜಿ.ಜ್ಯೋತಿಶ್ ಎಂಬುವವರು ಈ ಕುರಿತು ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 'ಕೊರೊನಾ ಸೋಂಕಿನ ಬೆದರಿಕೆಯನ್ನು ನಿಭಾಯಿಸಲು ರಾಜ್ಯವು ಹೆಣಗಾಡುತ್ತಿರುವಾಗ, ಇಂತಹ ಅರ್ಜಿಯು ನ್ಯಾಯಾಂಗವನ್ನು ಅಪಹಾಸ್ಯ ಮಾಡುವ ಪ್ರಯತ್ನವಾಗಿದೆ. ಅರ್ಜಿದಾರರು ಎರಡು ವಾರಗಳಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 50,000 ರೂಪಾಯಿ ಪಾವತಿಸಬೇಕು' ಎಂದು ಹೈಕೋರ್ಟ್ ಹೇಳಿದೆ.
'ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಪ್ರಾಮುಖ್ಯತೆ ಹೊಂದಿರುವ ಪ್ರಕರಣಗಳನ್ನು ಮಾತ್ರ ನ್ಯಾಯಾಲಯಗಳು ಪರಿಗಣಿಸುತ್ತಿರುವ ಸಮಯದಲ್ಲಿ, ಇಂತಾ ಸ್ವಾರ್ಥ ನಡವಳಿಕೆಯನ್ನು ಖಂಡಿಸಲಾಗುತ್ತದೆ' ಎಂದು ನ್ಯಾಯಾಲಯ ಹೇಳಿದೆ.-