ಕರ್ನಾಟಕ

karnataka

ETV Bharat / bharat

ರಾಹುಲ್​ಗಾಗಿ ಎಂಥಾ ತ್ಯಾಗ! ನಾಯಕರ ರಾಜೀನಾಮೆಯಿಂದ ಕಾಂಗ್ರೆಸ್​ ತಲ್ಲಣ - undefined

ಇಂದು ಅಖಿಲ ಭಾರತ ಕಿಸಾನ್ ಕಾಂಗ್ರೆಸ್​ನ ಅಧ್ಯಕ್ಷ ನಾನಾ ಪಟೋಲೆ ಹಾಗೂ ಎಐಸಿಸಿ ಕಾರ್ಯದರ್ಶಿ ತರುಣ್ ಕುಮಾರ್​ ರಾಜೀನಾಮೆ ಸಲ್ಲಿಸಿದ್ದಾರೆ. ಏತನ್ಮಧ್ಯೆ, ಉತ್ತರಪ್ರದೇಶದ 35 ಕಾಂಗ್ರೆಸ್​ ಕಾರ್ಯಕರ್ತರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ರಾಹುಲ್ ಗಾಂಧಿ

By

Published : Jun 29, 2019, 11:03 PM IST

ನವದೆಹಲಿ:ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವ ರಾಹುಲ್ ಗಾಂಧಿ ನಿರ್ಧಾರ ಕಾಂಗ್ರೆಸ್​ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುತ್ತಿದೆ. ಅಧ್ಯಕ್ಷರ ನಿರ್ಧಾರ ಸರಿಯಿಲ್ಲವೆಂದು ರಾಜೀನಾಮೆ ನೀಡುತ್ತಿರುವ ನಾಯಕರ ಸಂಖ್ಯೆ ಏರುತ್ತಲೇ ಇದೆ.

ಇಂದು ಅಖಿಲ ಭಾರತ ಕಿಸಾನ್ ಕಾಂಗ್ರೆಸ್​ನ ಅಧ್ಯಕ್ಷ ನಾನಾ ಪಟೋಲೆ ಹಾಗೂ ಎಐಸಿಸಿ ಕಾರ್ಯದರ್ಶಿ ತರುಣ್ ಕುಮಾರ್​ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಪರಾಭವಗೊಂಡ ಹೊಣೆಯನ್ನು ಹೊತ್ತು ರಾಹುಲ್ ರಾಜೀನಾಮೆ ನೀಡುವುದಾದರೆ, ನಾವೂ ಅದೇ ಜವಾಬ್ದಾರಿಯಿಂದ ರಾಜೀನಾಮೆ ನೀಡುತ್ತೇವೆ. ಪಕ್ಷದ ಸೈನಿಕರಂತೆ ನಾವೀಗ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿಕೊಂಡಿದ್ದಾರೆ.

ಏತನ್ಮಧ್ಯೆ, ಉತ್ತರಪ್ರದೇಶದ 35 ಕಾಂಗ್ರೆಸ್​ ಕಾರ್ಯಕರ್ತರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಘಟಕದ ಉಪಾಧ್ಯಕ್ಷ ರಂಜಿತ್ ಸಿಂಗ್ ಜುದೇವ್​, ಪ್ರಧಾನ ಕಾರ್ಯದರ್ಶಿ ಆರಾಧನಾ ಮಿಶ್ರ ಮೋನ, ಆರ್​.ಪಿ. ತ್ರಿಪಾಟಿ ಸೇರಿ ಹಲವರು ರಾಜೀನಾಮೆ ಪತ್ರಗಳು ಸಲ್ಲಿಕೆಯಾಗಿವೆ. ಯುಪಿಯಲ್ಲೇ ಈವರೆಗೆ 100 ಮಂದಿ ಕಾಂಗ್ರೆಸಿಗರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

For All Latest Updates

TAGGED:

ABOUT THE AUTHOR

...view details