ನವದೆಹಲಿ:ಅರುಣಾಚಲ ಪ್ರದೇಶದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಗೂ , ಮೊದಲು ಬಿಜೆಪಿಗೆ ಸೇರಿದವು ಎನ್ನಲಾದ ವಾಹನಗಳಲ್ಲಿ 1.8 ಕೋಟಿ ಪತ್ತೆಯಾಗಿರುವುದನ್ನೂ ತಳುಕು ಹಾಕಿರುವ ಕಾಂಗ್ರೆಸ್ 'ನೋಟಿಗಾಗಿ ವೋಟು' ಹಗರಣ ಎಂದು ಆರೋಪಿಸಿದೆ.
ಇಂದು ಬೆಳಗ್ಗೆ ಅರುಣಾಚಲ ಪ್ರದೇಶದ ಪಾಸಿಘಾಟ್ನಲ್ಲಿ ಪ್ರಧಾನಿ ಮೋದಿ ಅವರು ರ್ಯಾಲಿ ನಡೆದಿದೆ. ಇದಕ್ಕೂ ಮುನ್ನ, ಇಲ್ಲಿನ ಗೆಸ್ಟ್ಹೌಸ್ವೊಂದರಲ್ಲಿ 1.8 ಕೋಟಿ ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿದ್ದ ಎರಡು ಕಾರಿನಲ್ಲಿ ಈ ಹಣ ಪತ್ತೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪ್ರಧಾನಿ ಮೋದಿ, ಅರುಣಾಚಲ ಸಿಎಂ ಪ್ರೇಮ ಕಂಡು ವಿರುದ್ಧ ಆಯೋಗ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಪಸಿಘಾಟ್ ಗೆಸ್ಟ್ಹೌಸ್ ಬಳಿಯ ಎರಡು ಕಾರ್ಗಳಲ್ಲಿ ಸಂಗ್ರಹಿಸಲಾಗಿದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಒಂದು ಕಾರಿನಲ್ಲಿ 1 ಕೋಟಿ ಪತ್ತೆಯಾಗಿತ್ತು. ಇದು ಮೆಬೊ ಕ್ಷೇತ್ರದ ಅಭ್ಯರ್ಥಿ ಡಾ. ಡೆಂಗಿ ಪೆರ್ಮೆ ಅವರಿಗೆ ಸೇರಿದ್ದು ಎನ್ನಲಾಗಿದೆ. ಮತ್ತೊಂದು ಕಾರಿನಲ್ಲಿ 80 ಲಕ್ಷ ರೂ. ಪತ್ತೆಯಾಗಿದ್ದು, ಇದು ಉಪಮುಖ್ಯಮಂತ್ರಿ ಚೌನ ಮೈನ್ ಅವರದ್ದು ಎನ್ನಲಾಗಿದೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಪ್ರಧಾನಿ ಮೋದಿ ಅವರಿಗೆ ಮತದಾನ ಮಾಡುವಂತೆ ಪ್ರಭಾವ ಬೀರಲು ಈ ಹಣ ಇಟ್ಟುಕೊಳ್ಳಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.
ಆದರೆ, ಕಾಂಗ್ರೆಸ್ ಆರೋಪವನ್ನು ಅರುಣಾಚಲಪ್ರದೇಶ ಸಿಎಂ ಪ್ರೇಮ್ ಖಂಡು ತಳ್ಳಿಹಾಕಿದ್ದಾರೆ.ನೋಟಿಗಾಗಿ ವೋಟು ಕಾಂಗ್ರೆಸ್ನ ಕೃತ್ಯ ಎಂದಿರುವ ಅವರು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.