ಕರ್ನಾಟಕ

karnataka

ETV Bharat / bharat

ಪಿಸಿಆರ್-ಪ್ರತಿಕಾಯ ಪರೀಕ್ಷೆ ಸಂಯೋಜಿಸುವುದರಿಂದ ಕೋವಿಡ್-19 ಪತ್ತೆ ಹೆಚ್ಚಾಗುತ್ತದೆ: ವರದಿ - ಪಿಸಿಆರ್ -ಪ್ರತಿಕಾಯ ಪರೀಕ್ಷೆ ಸಂಯೋಜನೆ

ಕೋವಿಡ್-19 ರೋಗವನ್ನು ಪತ್ತೆಹಚ್ಚಲು ಕೇಂಬ್ರಿಡ್ಜ್ ಆಸ್ಪತ್ರೆ, ಕೇಂಬ್ರಿಡ್ಜ್ ವಿವಿ ಸಂಶೋಧಕರ ಸಲಹೆಯ ಮೇರೆಗೆ ನೂತನ ಮಾರ್ಗವೊಂದನ್ನು ಕಂಡುಹಿಡಿದಿದ್ದು, ಕಡಿಮೆ ಸಮಯದಲ್ಲೇ ಸೋಂಕು ಪತ್ತೆ ಹಚ್ಚಬಹುದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

Combining PCR and antibody tests
ಪಿಸಿಆರ್ -ಪ್ರತಿಕಾಯ ಪರೀಕ್ಷೆ

By

Published : Sep 4, 2020, 12:17 PM IST

ಹೈದರಾಬಾದ್: ಕೇಂಬ್ರಿಡ್ಜ್ ಆಸ್ಪತ್ರೆಯೊಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಸಲಹೆ ನಂತರ SARS-CoV-2 ಸೋಂಕಿನ ಸಂಯೋಜಿತ ರ‍್ಯಾಪಿಡ್ ಪಾಯಿಂಟ್-ಆಫ್-ಕೇರ್ ನ್ಯೂಕ್ಲಿಯಿಕ್ ಆಮ್ಲ ಮತ್ತು ಪ್ರತಿಕಾಯ ಪರೀಕ್ಷೆಯ ಬಳಕೆಯನ್ನು ಪ್ರಾಯೋಗಿಕವಾಗಿ ನಡೆಸಿದ್ದು, ಕೋವಿಡ್-19 ರೋಗವನ್ನು ಪತ್ತೆಹಚ್ಚಲು ಈ ವಿಧಾನವು ಉತ್ತಮವಾಗಿದೆ ಎಂದಿದ್ದಾರೆ.

ಪಾಯಿಂಟ್-ಆಫ್-ಕೇರ್ ಪರೀಕ್ಷೆ - ಬೇರೆ ರೀತಿಯಲ್ಲಿ ಹೇಳುವುದಾದರೆ, ರೋಗಿಗಳು ಆಸ್ಪತ್ರೆಗೆ ಬಂದ ಕೂಡಲೇ ಪರೀಕ್ಷಿಸುವುದು - ಆರೋಗ್ಯ ಕಾರ್ಯಕರ್ತರು ರೋಗಿಗಳನ್ನು ವೇಗವಾಗಿ ಪತ್ತೆಹಚ್ಚಲು ಮತ್ತು ಸೋಂಕಿಗೆ ಧನಾತ್ಮಕತೆಯನ್ನು ಪರೀಕ್ಷಿಸುವವರನ್ನು ಮೀಸಲಾದ ವಾರ್ಡ್‌ಗಳಿಗೆ ನಿರ್ದೇಶಿಸಲು ಅಗತ್ಯವಾಗಿದೆ. ಕೇಂಬ್ರಿಡ್ಜ್ ಸಂಶೋಧಕರು ಅಭಿವೃದ್ಧಿಪಡಿಸಿದ SARS-CoV-2 ಗಾಗಿ ಹೊಸ ಪಾಯಿಂಟ್-ಆಫ್-ಕೇರ್ ಪಿಸಿಆರ್ ಪರೀಕ್ಷೆಯಾದ SAMBA II, ಕೋವಿಡ್-19 ವಾರ್ಡ್‌ಗಳಿಗೆ ಖರ್ಚು ಮಾಡುವ ಸಮಯವನ್ನು ಕಡಿಮೆ ಮಾಡಲು ಸಾಧ್ಯವಾಯಿತು ಎಂದು ಇತ್ತೀಚಿನ ಅಧ್ಯಯನವು ತೋರಿಸಿದೆ. ಪ್ರಸ್ತುತ ಲ್ಯಾಬ್ ಪರೀಕ್ಷೆಗೆ ಹೋಲಿಸಿದರೆ ಈ ಪರೀಕ್ಷೆ ವೇಗವಾಗಿ ಫಲಿತಾಂಶ ನಿಡುತ್ತದೆ.

ಪಿಸಿಆರ್ ಪರೀಕ್ಷೆಗಳು ವೈರಸ್‌ನಿಂದ ಸಣ್ಣ ಪ್ರಮಾಣದ ಆರ್‌ಎನ್‌ಎಯನ್ನು ಹೊರತೆಗೆಯುವುದು ಮತ್ತು ಅದನ್ನು ಲಕ್ಷಾಂತರ ಬಾರಿ ನಕಲಿಸುವುದು ಸೇರಿದಂತೆ ವೈರಸ್‌ ಅನ್ನು ಪತ್ತೆಹಚ್ಚಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ವೈರಸ್ ಪತ್ತೆಹಚ್ಚಲು ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತದೆ. ಆದಾಗ್ಯೂ, ಒಬ್ಬ ವ್ಯಕ್ತಿಯು ಕೋವಿಡ್-19 ಲಕ್ಷಣ ತೋರಿಸಲು 14 ದಿನಗಳವರೆಗೆ ತೆಗೆದುಕೊಳ್ಳಬಹುದು. ಆ ಹೊತ್ತಿಗೆ ವೈರಸ್ ಮೂಗು ಮತ್ತು ಗಂಟಲಿನಿಂದ ಶ್ವಾಸಕೋಶ ಮತ್ತು ಇತರ ಅಂಗಗಳಿಗೆ ಸ್ಥಳಾಂತರಗೊಂಡಿರಬಹುದು. ಇದರಿಂದಾಗಿ ಸ್ವ್ಯಾಬ್​ ಮೂಲಕ ಪತ್ತೆ ಮಾಡುವುದು ಕಷ್ಟವಾಗುತ್ತದೆ. ಇದರ ಪರಿಣಾಮವಾಗಿ, ಸೋಂಕು ತಗಿಲಿದ ಐದು ದಿನಗಳಲ್ಲೇ ಪಿಸಿಆರ್ ಪರೀಕ್ಷೆ ಮೂಲಕ ಸೋಂಕಿತ ರೋಗಿಗಳನ್ನು ಪತ್ತೆ ಹಚ್ಚಬಹುದು ಎಂದು ಅಧ್ಯಯನಗಳು ತೋರಿಸಿವೆ.

ಪ್ರತಿಕಾಯ ಪರೀಕ್ಷೆಗಳು ಸೋಂಕಿತ ವ್ಯಕ್ತಿಗಳನ್ನು ಗುರುತಿಸುವ ಪರ್ಯಾಯ ಮಾರ್ಗವನ್ನು ಒದಗಿಸುತ್ತವೆ. ಆದರೆ ಪ್ರತಿಕಾಯಗಳು - ಸೋಂಕಿಗೆ ಪ್ರತಿಕ್ರಿಯೆಯಾಗಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯಿಂದ ಉತ್ಪತ್ತಿಯಾಗುವ ಅಣುಗಳು ಸಾಮಾನ್ಯವಾಗಿ ಸೋಂಕಿನ ನಂತರ ಕನಿಷ್ಠ ಆರು ದಿನಗಳವರೆಗೆ ಕಾಣಿಸುವುದಿಲ್ಲ.

ಕೋವಿಡ್-19 ಅನ್ನು ಪತ್ತೆಹಚ್ಚಲು ನಮ್ಮಲ್ಲಿ ಇನ್ನೂ ಉತ್ತಮ ಗುಣಮಟ್ಟದ ಪರೀಕ್ಷೆ ಇಲ್ಲ. ಇದು ರೋಗಿಗಳಿಗೆ ಹೇಗೆ ಮತ್ತು ಎಲ್ಲಿ ಚಿಕಿತ್ಸೆ ನೀಡಬೇಕೆಂಬ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳಲು ಆರೋಗ್ಯ ಕಾರ್ಯಕರ್ತರಿಗೆ ಸವಾಲನ್ನು ಒಡ್ಡುತ್ತದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಥೆರಪೂಟಿಕ್ ಇಮ್ಯುನಾಲಾಜಿ ಮತ್ತು ಸಾಂಕ್ರಾಮಿಕ ರೋಗದ ಪ್ರಾಧ್ಯಾಪಕ ರವಿ ಗುಪ್ತಾ ಹೇಳಿದ್ದಾರೆ.

ABOUT THE AUTHOR

...view details