ಇಡುಕ್ಕಿ (ಕೇರಳ):ಧಾರಾಕಾರ ಮಳೆಗೆ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂ ಕುಸಿತ ಪ್ರದೇಶಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಇಡುಕ್ಕಿ ಭೂ ಕುಸಿತದಲ್ಲಿ 50ಕ್ಕೂ ಅಧಿಕ ಸಾವು: ದುರಂತ ಪ್ರದೇಶಕ್ಕೆ ಸಿಎಂ, ರಾಜ್ಯಪಾಲರು ಭೇಟಿ - ಭೂ ಕುಸಿತಕ್ಕೆ 49 ಮಂದಿ ಬಲಿ
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭೂ ಕುಸಿತ ಪ್ರದೇಶ ಪೆಟ್ಟಿಮುಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಬ್ಬರೂ ಹೆಲಿಕಾಪ್ಟರ್ ಮೂಲಕ ಅನಾಚಲ್ ತಲುಪಿದರು. ಅಲ್ಲಿಂದ ಅವರು ರಸ್ತೆ ಮೂಲಕ ಭೂಕುಸಿತ ಪೀಡಿತ ಪ್ರದೇಶಕ್ಕೆ ಹೋದರು. ಕಂದಾಯ ಸಚಿವ, ಡಿಜಿಪಿ, ಮುಖ್ಯ ಕಾರ್ಯದರ್ಶಿಗಳು ಸಿಎಂ ಮತ್ತು ರಾಜ್ಯಪಾಲರಿಗೆ ಸಾಥ್ ನೀಡಿದ್ದಾರೆ. ಸಚಿವ ಎಂ.ಎಂ. ಮಣಿ, ಜಿಲ್ಲಾಧಿಕಾರಿ ಹೆಚ್. ದಿನೇಶನ್ ಮತ್ತು ಜಿಲ್ಲೆಯ ಹಿರಿಯ ಮುಖಂಡರು ಮುಖ್ಯಮಂತ್ರಿ ತಂಡವನ್ನು ಸ್ವಾಗತಿಸಿದರು.
ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೇರಳದ ಬಹುಭಾಗದಲ್ಲಿ ಅನಾಹುತಗಳು ಸಂಭವಿಸಿವೆ. ಅದರಲ್ಲಿ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹಲವು ಮೃತದೇಹಗಳು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ. ಈ ಪ್ರದೇಶಕ್ಕೆ ತೆರಳುವ ರಸ್ತೆ ಹಾಗೂ ಸೇತುವೆಗಳು ಪ್ರವಾಹ, ಭೂಕುಸಿತದಿಂದ ಕೊಚ್ಚಿ ಹೋಗಿವೆ.