ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಜೊತೆ ಚರ್ಚೆ ನಡೆಸಿದರು.
ದ್ವಿತೀಯ ಪಿಯುಸಿ ಟಾಪ್ ವಿದ್ಯಾರ್ಥಿಗಳ ಜತೆ ಕೇಜ್ರಿವಾಲ್ ಸಮಾಲೋಚನೆ - सरकारी स्कूल
ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನ ಅರವಿಂದ್ ಕೇಜ್ರಿವಾಲ್ ಅಭಿನಂದಿಸಿದರು. ಅಲ್ಲದೇ, ಪ್ರತಿ ಮಗುವೂ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ನೀಡಿದ್ದೀರಿ ಇದರಿಂದ ಸರ್ಕಾರಿ ಶಾಲೆಯ ಫಲಿತಾಂಶಗಳು ನಿರಂತರವಾಗಿ ಸುಧಾರಿಸುತ್ತಿವೆ ಎಂದು ಬೆನ್ನು ತಟ್ಟಿದರು.
ಈ ಸಭೆಯಲ್ಲಿ ಅವರು ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನ ಅಭಿನಂದಿಸಿದರು. ಅಲ್ಲದೇ, ಪ್ರತಿ ಮಗುವೂ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಪರೀಕ್ಷೆ ಎದುರಿಸಿದ್ದೀರಿ, ಇನ್ನು ಶಿಕ್ಷಕರು ಸಹ ಶೇಕಡಾ ನೂರರಷ್ಟು ಫಲಿತಾಂಶ ನೀಡಲು ಪರಿಶ್ರಮ ಹಾಕಿದ್ದೀರಿ. ಇದರಿಂದ ಸರ್ಕಾರಿ ಶಾಲೆಯ ಫಲಿತಾಂಶಗಳು ನಿರಂತರವಾಗಿ ಸುಧಾರಿಸುತ್ತಿವೆ ಎಂದು ಶಾಲಾ ಶಿಕ್ಷಕರ ಬೆನ್ನು ತಟ್ಟಿದರು.
ನೀವು ಮುಂದೆ ಸಾಗಬೇಕು ಮತ್ತು ನಿಮ್ಮ ಕನಸುಗಳನ್ನ ನನಸು ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ಕಿವಿ ಮಾತು ಹೇಳಿದರು. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ನೀವು ಹಗಲು ರಾತ್ರಿ ಶ್ರಮ ಪಟ್ಟರೆ, ಖಂಡಿತವಾಗಿಯೂ ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರಿ ಎಂದು ಭರವಸೆ ತುಂಬಿದರು.