ಲಾಕ್ಡೌನ್ಗೆ ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ
16:25 May 04
ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ
ನವದೆಹಲಿ:ಮೇ 31ಕ್ಕೆ ನಡೆಯಬೇಕಿದ್ದ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ಕೇಂದ್ರ ಲೋಕಸೇವಾ ಆಯೋಗ ತೀರ್ಮಾನಿಸಿದೆ. ಲಾಕ್ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಆಧರಿಸಿ ಮೇ 20ಕ್ಕೆ ಹೊಸ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ ಎಂದು ಕೇಂದ್ರ ಲೋಕಸೇವಾ ಆಯೋಗ ಸ್ಪಷ್ಟನೆ ನೀಡಿದೆ.
ಈ ಪರೀಕ್ಷೆಯನ್ನು ಸುಮಾರು 9 ಲಕ್ಷ ಮಂದಿ ಬರೆಯುವ ಕಾರಣದಿಂದಾಗಿ ರಾಷ್ಟ್ರಾದ್ಯಂತ ಪರೀಕ್ಷೆನ ನಡೆಸುವುದು ಕಷ್ಟ. ಲಾಕ್ಡೌನ್ ಮೂರನೇ ಬಾರಿಗೆ ವಿಸ್ತರಣೆಯಾಗಿರುವ ಕಾರಣದಿಂದ ಪರೀಕ್ಷೆ ನಡೆಸುವುದು ಕಷ್ಟವಾಗಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಆಧರಿಸಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.
ಈಗಾಗಲೇ ಐಎಫ್ಎಸ್ನ ಸ್ಕ್ರೀನಿಂಗ್ ಪರೀಕ್ಷೆಯನ್ನು ಕೂಡಾ ಮುಂದೂಡಲಾಗಿದೆ. ಯುಪಿಎಸ್ಸಿ ಹಾಗೂ ಎಸ್ಎಸ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಭರವಸೆ ನೀಡಿದ್ದಾರೆ.