ಬೀಜಿಂಗ್(ಚೀನಾ):ಮಹಾಮಾರಿ ಕೊರೊನಾಗೆ ಚೀನಾ ಅಕ್ಷರಶಃ ನಲುಗಿದೆ. ಸಾವನ್ನಪ್ಪಿರುವವರ ಸಂಖ್ಯೆ ಇದೀಗ 1,500ರ ಗಡಿ ದಾಟಿದ್ದು, ಗುರುವಾರ ಒಂದೇ ದಿನದಲ್ಲಿ 254 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.
ನಿನ್ನೆ ಒಂದೇ ದಿನ 4,823 ಹೊಸ ಪ್ರಕರಣಗಳು ಕಂಡು ಬಂದಿದ್ದು, ಚೀನಾದಲ್ಲಿ ಈವರೆಗೆ ಒಟ್ಟು 64,627 ಮಂದಿಯಲ್ಲಿ ವೈರಸ್ ಸೋಂಕು ಇರುವುದು ಕಂಡು ಬಂದಿದೆ. ಸಾವು-ನೋವಿನಲ್ಲಿ ಸಾರ್ಸ್ ಸೋಂಕನ್ನು ಮೀರಿಸಿರುವ ಕೊರೊನಾವನ್ನು ಹತೋಟಿಗೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ರೂ ಇಲ್ಲಿಯವರೆಗೆ ಅದು ನಿಯಂತ್ರಣಕ್ಕೆ ಬಂದಿಲ್ಲ.