ರಾಜಸ್ಥಾನ/ಜೋಧಪುರ್:ಮಕ್ಕಳಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜಸ್ಥಾನದಲ್ಲಿ ಮಕ್ಕಳ ಸುಧಾರಣಾ ಮನೆ ತೆರೆಯಲಾಗಿದ್ದು, ಅಲ್ಲಿಯೇ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.
ಮಕ್ಕಳ ಪೋಷಕರಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಮಕ್ಕಳನ್ನು ಸಹ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಅವರ ಮನೆಯಲ್ಲೇ ಮಕ್ಕಳಿಗೆ ಟೆಸ್ಟ್ ಮಾಡಿ ಚಿಕಿತ್ಸೆ ನೀಡುವಂತೆ ಜೋಧ್ಪುರ್ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಈ ಹಿನ್ನೆಲೆ ಮಕ್ಕಳಿಗಾಗಿ ಮಕ್ಕಳ ಸುಧಾರಣಾ ಮನೆ ತೆರೆಯಲಾಗಿದೆ. ಆ ಮನೆಗೆ ಬರುವ ಮಕ್ಕಳ ಸ್ಕ್ರೀನಿಂಗ್ ಕೂಡ ನಡೆಸಲಾಗ್ತಿದೆ.
ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳ ಮಕ್ಕಳ ಸುಧಾರಣಾ ಮನೆಗಳಲ್ಲಿ ವಾಸಿಸುವ ಮಕ್ಕಳಿಗೆ ಪರೀಕ್ಷೆಗಳನ್ನು ಸಹ ನಡೆಸಲಾಗಿದ್ದು, ಇಲ್ಲಿದ್ದ ಮಕ್ಕಳ ವರದಿ ನೆಗೆಟಿವ್ ಬಂದಿದೆ.
ಮಾರ್ಚ್ 25 ರಿಂದ 10 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲು:
ಇನ್ನು ವೇಳೆ ಲಾಕ್ಡೌನ್ ಅವಧಿಯಲ್ಲಿ ಕೂಡ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಿಂತಿಲ್ಲ ಎಂಬ ಆಘಾತಕಾರಿ ಅಂಶ ಕೂಡ ಹೊರಬಿದ್ದಿದೆ. ಮಕ್ಕಳ ಆರೈಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ವ್ಯವಸ್ಥೆಗಳ ಬಗ್ಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗವೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.
ಲಾಕ್ಡೌನ್ ಇದ್ರೂ ಮಾರ್ಚ್ 25 ರಿಂದ 10 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಆದರೆ ಪ್ರಸ್ತುತ ಪೊಲೀಸ್ ಇಲಾಖೆ ಕೊರೊನಾ ಕೆಲಸದಲ್ಲಿ ನಿರತವಾಗಿರುವುದರಿಂದ ಈ ದೌರ್ಜನ್ಯ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವುದು ಸದ್ಯ ಕಷ್ಟವಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಜಿಲ್ಲೆಯ ಸಮಿತಿಗಳ ಮೂಲಕ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಸಮಿತಿಗಳಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಿರ್ದೇಶನಗಳನ್ನು ನೀಡಲಾಗುತ್ತಿದೆ.