ಕರ್ನಾಟಕ

karnataka

ETV Bharat / bharat

ನಿನ್ನೆ ಮೋದಿ.. ಇಂದು ಅಮಿತ್​ ಶಾ ಭೇಟಿ ಮಾಡಿದ ದೀದಿ; ರಾಷ್ಟ್ರೀಯ ಪೌರ ನೋಂದಣಿ ಬಗ್ಗೆ ಚರ್ಚೆ

ನಿನ್ನೆ ಪ್ರಧಾನಿ ಮೋದಿ ಭೇಟಿ ಮಾಡಿದ್ದ ಮಮತಾ ಬ್ಯಾನರ್ಜಿ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಅಮಿತ್​ ಶಾ ಭೇಟಿ ಮಾಡಿದ ದೀದಿ

By

Published : Sep 19, 2019, 2:01 PM IST

Updated : Sep 19, 2019, 2:59 PM IST

ನವದೆಹಲಿ: ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವಾಲಯದಲ್ಲಿ ಅಮಿತ್​ ಶಾ ಅವರನ್ನ ಭೇಟಿ ಮಾಡಿ ಅಸ್ಸೋಂ ರಾಷ್ಟ್ರೀಯ ಪೌರ ನೋಂದಣಿ (ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್) ಪಟ್ಟಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಸ್ಸೋಂ ಪೌರ ನೋಂದಣಿ ಪಟ್ಟಿಯಿಂದ 19 ಲಕ್ಷ ಜನರ ಹೆಸರು ಕೈಬಿಡಲಾಗಿದೆ. ಅವರಲ್ಲಿ ಹಿಂದಿ, ಬಂಗಾಳಿ ಭಾಷಿಕರಿದ್ದು, ಸ್ಥಳೀಯ ಅಸ್ಸೋಂ ಜನರನ್ನೂ ಪಟ್ಟಿಯಿಂದ ಕೈ ಬಿಡಲಾಗಿದೆ. ನಿಜವಾದ ಮತದಾರರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ಗೃಹ ಸಚಿವರಿಗೆ ಪತ್ರ ನೀಡಿದ್ದೇನೆ ಎಂದಿದ್ದಾರೆ.

ಅಲ್ಲದೇ ಪಶ್ಚಿಮ ಬಂಗಾಳಕ್ಕೆ ರಾಷ್ಟ್ರೀಯ ಪೌರ ನೋಂದಣಿ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಇದಕ್ಕೆ ಗೃಹ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ನಿನ್ನೆ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿದ ವೇಳೆ ಹಲವು ವಿಷಯಗಳನ್ನ ಕುರಿತು ಚರ್ಚೆ ನಡೆಸಿದ್ದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನ 'ಬಾಂಗ್ಲಾ' ಎಂದು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು.

Last Updated : Sep 19, 2019, 2:59 PM IST

ABOUT THE AUTHOR

...view details