ಛತ್ತೀಸ್ಘಡ: ಆಂಬುಲೆನ್ಸ್ ಸೌಲಭ್ಯ ಪಡೆಯಲು ಜಶ್ಪುರದ ಜಬ್ಲಾ ಗ್ರಾಮದ ಸ್ಥಳೀಯರು ಗರ್ಭಿಣಿಯನ್ನು ಹೊತ್ತುಕೊಂಡು ಸುಮಾರು ಐದು ಕಿಲೋ ಮೀಟರ್ ದೂರ ಸಾಗಿದ್ದಾರೆ. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ಈ ಅವಾಂತರ ಸೃಷ್ಟಿಯಾಗಿದೆ.
"ನಮ್ಮ ಗ್ರಾಮಕ್ಕೆ ವಾಹನಗಳು ಪ್ರವೇಶಿಸಲು ಸಾಧ್ಯವಿಲ್ಲ. ಏಕೆಂದರೆ ರಸ್ತೆಗಳಿಲ್ಲದ ಕಾರಣ ನಾವು ರೋಗಿಗಳನ್ನು ಮುಖ್ಯ ರಸ್ತೆಗೆ ಕರೆದೊಯ್ಯಬೇಕು. ಅಲ್ಲಿಂದ ಆಂಬ್ಯುಲೆನ್ಸ್ ಸೌಲಭ್ಯ ಪಡೆದುಕೊಳ್ಳಬಹುದು. ಈಗಲೂ ಸಮಸ್ಯೆ ಎದುರಿಸುತ್ತಿದ್ದು, ಗರ್ಭಿಣಿಯನ್ನು ಹೆರಿಗೆ ನೋವಿನಲ್ಲೇ 5 ಕಿಲೋ ಮೀಟರ್ ದೂರ ಹೊತ್ತುಕೊಂಡೇ ಸಾಗಿಸಲಾಗಿದೆ. ಬಳಿಕ ಅಲ್ಲಿಂದ ಖಾಸಗಿ ವಾಹನ ಮೂಲಕ ಕರೆದೊಯ್ದಿದ್ದೇವೆ” ಎಂದು ಸ್ಥಳೀಯರು ತಿಳಿಸಿದ್ದಾರೆ.